Shivarajkumar 'ಕ್ಯಾಪ್ಟನ್ ಮಿಲ್ಲರ್'ನಲ್ಲಿ ಧನುಷ್ ಜತೆ ಶಿವಣ್ಣ; ಡೇಟ್ಸ್‌ ಫುಲ್‌ ಇದ್ದರೂ NO ಹೇಳಲು ಮನಸ್ಸಿಲ್ಲ

Published : Oct 29, 2022, 02:26 PM IST
Shivarajkumar 'ಕ್ಯಾಪ್ಟನ್ ಮಿಲ್ಲರ್'ನಲ್ಲಿ ಧನುಷ್ ಜತೆ ಶಿವಣ್ಣ; ಡೇಟ್ಸ್‌ ಫುಲ್‌ ಇದ್ದರೂ NO ಹೇಳಲು ಮನಸ್ಸಿಲ್ಲ

ಸಾರಾಂಶ

ತಮಿಳು ಚಿತ್ರಕಥೆಗೆ ಓಕೆ ಹೇಳಿದ್ದ ಶಿವಣ್ಣ. ಧನುಷ್ ಜೊತೆ ಕ್ಯಾಪ್ಟನ್ ಮಿಲ್ಲರ್ ಅಗಲು ರೆಡಿಯಾದ ಹ್ಯಾಟ್ರಿಕ್ ಹೀರೋ.....

ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸದ್ಯಕ್ಕೆ ನಾಲ್ಕು ಸಿನಿಮಾ ಬ್ಯಾಕ್ ಟು ಬ್ಯಾಕ್ ಚಿತ್ರೀಕರಣ ಮಾಡುತ್ತಿದ್ದಾರೆ. ಈ ನಡುವೆ ತಮಿಳು ಚಿತ್ರಕಥೆ ಹೇಳಿದ್ದಾರೆ ಎನ್ನುವ ಮಾತುಗಳು ವೈರಲ್ ಆಗುತ್ತಿದೆ. ಶಿವಣ್ಣ ತಮಿಳು ಸಿನಿಮಾನಾ? ನಾಯಕ ಯಾರು? ನಿರ್ದೇಶಕರು ಯಾರು ಎಂದು ಪದೇ ಪದೇ ಪ್ರಶ್ನೆ ಮಾಡುತ್ತಿರುವ ಫ್ಯಾನ್ಸ್‌ಗೆ ಉತ್ತರ ಕೊಟ್ಟಿದ್ದಾರೆ. ಅಲ್ಲದೆ ಇದು ಇಬ್ಬರು ಸ್ಟಾರ್ ನಟರು ಕೈ ಜೋಡಿಸಿ ಮಾಡುತ್ತಿರುವ ಸಿನಿಮಾ........

ಹೌದು! ಅರುಣ್ ಮಾದೇಶ್ವರನ್ ನಿರ್ದೇಶನ ಮಾಡುತ್ತಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈಗಾಗಲೆ ಕಥೆ ಕೇಳಿದ್ದು ಡೇಟ್‌ ಕ್ಲಾಶ್ ಆಗುತ್ತಿರುವ ಕಾರಣ ಚಿತ್ರೀಕರಣದ ಬಗ್ಗೆ ಮಾತುಕಥೆ ಮಾಡುವ ಹಂತದಲ್ಲಿದ್ದಾರೆ. 'ಕ್ಯಾಪ್ಟನ್ ಮಿಲ್ಲರ್ ಚಿತ್ರದ ನಿರ್ದೇಶಕ ಅರುಣ್ ಮಾದೇಶ್ವರನ್ ಬೆಂಗಳೂರಿಗೆ ಆಗಮಿಸಿ ಕಥೆ ಹೇಳಿದರು. ನಮ್ಮ ಜೊತೆ ಒಂದರ್ಧ ದಿನ ಸಮಯ ಕಳೆದು ಜೊತೆಯಲ್ಲಿ ಊಟ ಮಾಡಿದ್ದರು. ಸಿನಿಮಾದ ಕಥೆ ತುಂಬಾನೇ ಚೆನ್ನಾಗಿದೆ ಮತ್ತು ನನ್ನ ಪಾತ್ರವೂ ಅಷ್ಟೇ ವಿಶೇಷವಾಗಿದೆ. ಆದರೆ ನಾನು ಈಗ ಕನ್ನಡದಲ್ಲಿ ನಾಲ್ಕೈದು ಸಿನಿಮಾಗಳನ್ನು ಒಪ್ಪಿಕೊಂಡಿರುವುದರಿಂದ ಡೇಟ್ಸ್‌ ಹೊಂದಿಸುವುದು ಕೊಂಚ ಕಷ್ಟವಾಗುತ್ತಿದೆ. ದಿನಾಂಕ ಹೊಂದಿಸಿಕೊಂಡು ಕರೆ ಮಾಡುತ್ತೀನಿ ಎಂದು ನಿರ್ಮಾಪಕರು ಮತ್ತು ನಿರ್ದೇಶಕರಿಗೆ ತಿಳಿಸಿರುವೆ' ಎಂದು ಶಿವಣ್ಣ ಖಾಸಗಿ ವೆಬ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ನಟ ಧನುಷ್‌ ಜೊತೆ ನಟಿಸುವುದಕ್ಕೆ ನನಗೆ ತುಂಬಾನೇ ಇಷ್ಟ. ಅವರೊಬ್ಬ ಅದ್ಭುತ ನಟ. ಅವರ ಜೊಎ ನಾನು ನಟಿಸುವುದು ಈ ಕಾಂಬಿನೇಷನ್‌ ಅಂದಾಗ ಹೇಗೆ ಇಲ್ಲ ಎನ್ನಲಿ? ಎಲ್ಲಕ್ಕಿಂತಲ್ಲೂ ಹೆಚ್ಚಾಗಿ ನಿರ್ದೇಶಕರು ಒಳ್ಳೆಯ ಪಾತ್ರವನ್ನು ಇಲ್ಲಿಯವರೆಗೂ ಹುಡುಕಿಕೊಂಡು ಬಂದು ನನ್ನ ಬಳಿ ಮಾಡಿಸಬೇಕು ಎಂದು ಕೊಂಡಿದ್ದಾರೆ ಅಂದ್ರೆ ಖುಷಿ ವಿಚಾರ. ಸದ್ಯದಲ್ಲೇ ಚಿತ್ರತಂಡ ಈ ಸುದ್ದಿಯನ್ನು ಅಧಿಕೃತ ಅನೌನ್ಸ್‌ ಮಾಡಲಿದೆ. ನನ್ನ ಸಿನಿಮಾಗಳ ಡೇಟ್ಸ್‌ ಕ್ಲಾಶ್ ಆಗದಿರುವಂತೆ ನೋಡಿಕೊಂಡು ನಾನೇ ಮಧ್ಯಮಗಳಿಗೆ ತಿಳುತ್ತೇನೆ' ಎಂದು ಶಿವಣ್ಣ ಹೇಳಿದ್ದಾರೆ.

ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಮೂಹೂರ್ತ ಅದ್ಧೂರಿಯಾಗಿ ನಡೆದಿದ್ದು ಧನುಷ್‌ಗೆ ಜೋಡಿಯಾಗಿ ಪ್ರಿಯಾಂಕಾ ಅರುಳ್ ಮೋಹನ್ ಅಭಿನಯಿಸಲಿದ್ದಾರೆ. ಜಿ ವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಇರುವ ಈ ಚಿತ್ರದಲ್ಲಿ ಬಹುಭಾಷಾ ನಟ ಕಿಶನ್ ನಟಿಸಲಿದ್ದಾರೆ. ಧನುಷ್‌ ಫಸ್ಟ್‌ ಲುಕ್‌ ಕೂಡ ರಿವೀಲ್ ಆಗಿದ್ದು ಸಿನಿಮಾ ನೋಡಲು ಸಿನಿ ರಸಿಕರು ಕಾಯುತ್ತಿದ್ದಾರೆ.

Dhanush enters Hollywood: ದಿ ಗ್ರೇ ಮ್ಯಾನ್ ಚಿತ್ರದಲ್ಲಿ ತಮಿಳು ನಟ ಧನುಷ್!

ಶ್ರೀನಿ ನಿರ್ದೇಶನ ಮಾಡುತ್ತಿರುವ ಘೋಸ್ಟ್‌ ಸಿನಿಮಾ, ಹರ್ಷ ಮಾಸ್ಟರ್ ನಿರ್ದೇಶನ ವೇದ, ಯೋಗರಾಜ್ ಭಟ 'ಕರಟಕ ದಮನಕ' ಸಿನಿಮಾ ಚಿತ್ರೀಕರಣದಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ. 'ಯೋಗರಾಜ್‌ ಭಟ್‌ ಸಿನಿಮಾದಲ್ಲಿ ನನ್ನ ಪಾತ್ರ ಸಿಕ್ಕಾಪಟ್ಟೆ ಫನ್ನಿ, ಕನ್ನಿಂಗ್,ಸೆನ್ಸಿಬಲ್ ಅಂಶಗಳಿವೆ. ಈಗಾಗಲೇ ಇದರ ಒಂದು ಶೆಡ್ಯೂಲ್ ಮುಗಿದಿದೆ. ಇದು ಕೂಡ ಪ್ರಭುದೇವ ಜೊತೆಗಿರುವ ಕಾಂಬಿನೇಷನ್‌ ಸಿನಿಮಾ. ಭಟ್ಟರ ಸಿನಿಮಾ ಅಂದ್ರೆ ಡಿಫರೆಂಟ್ ಆಗಿರುತ್ತದೆ ಜನರಿಗೆ ಇಷ್ಟವಾಗುತ್ತದೆ ಹಾಗೇ ವಿಭಿನ್ನ ಸಜ್ಜೆಕ್ಟ್‌ ಹೊಂದಿದೆ' ಎಂದಿದ್ದಾರೆ ಶಿವಣ್ಣ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actor Dileep Case: ಖ್ಯಾತ ನಟಿ ಮೇಲಿನ ಅ*ತ್ಯಾಚಾರ ಆರೋಪ; 8 ವರ್ಷಗಳ ಹೋರಾಟ, ನಟ ದಿಲೀಪ್‌ಗೆ ನಿರಾಳ!
ಅಂದು ಕನ್ನಡಿಗರ ಕೆಣಕಿದ್ದ ಕರಾವಳಿ ಹುಡುಗಿ ಇಂದು ಮನೆಮಗಳು ಆಗಿದ್ದು ಹೇಗೆ? ಸೀಕ್ರೆಟ್ ಸ್ಟ್ರಾಟಜಿ ಏನು?