ದೊಡ್ಮನೆಯ ದೊಡ್ಮಗನಿಗೆ ಕಿಚ್ಚ ಸುದೀಪ್‌ ಕಾಲ್? ಶಿವಣ್ಣ ಬಿಟ್ಟು ಕೊಟ್ಟಿದ್ದು ನಿಜವೇ?

Published : Dec 26, 2024, 01:51 PM IST
ದೊಡ್ಮನೆಯ ದೊಡ್ಮಗನಿಗೆ ಕಿಚ್ಚ ಸುದೀಪ್‌ ಕಾಲ್? ಶಿವಣ್ಣ ಬಿಟ್ಟು ಕೊಟ್ಟಿದ್ದು ನಿಜವೇ?

ಸಾರಾಂಶ

ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವರಾಜ್‌ಕುಮಾರ್, ತಮ್ಮ 50 ದಿನಗಳನ್ನು ದಾಟಿರುವ 'ಭೈರತಿ ರಣಗಲ್' ಚಿತ್ರವನ್ನು ನರ್ತಕಿ ಥಿಯೇಟರ್‌ನಿಂದ ಸಪ್ನಾ ಥಿಯೇಟರ್‌ಗೆ ಸ್ಥಳಾಂತರಿಸಿದ್ದಾರೆ. ಕಿಚ್ಚ ಸುದೀಪ್‌ರ ಮ್ಯಾಕ್ಸ್ ಚಿತ್ರಕ್ಕೆ ನರ್ತಕಿ ಥಿಯೇಟರ್ ಬಿಟ್ಟುಕೊಡಲು ಸುದೀಪ್ ಮನವಿ ಮಾಡಿಕೊಂಡಿದ್ದಕ್ಕೆ ಶಿವಣ್ಣ ಒಪ್ಪಿಕೊಂಡಿದ್ದಾರೆ. ಈ ಮೂಲಕ ಇಬ್ಬರು ನಟರ ನಡುವಿನ ಉತ್ತಮ ಬಾಂಧವ್ಯ ಎದ್ದು ಕಾಣುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ನಟರ ಒಗ್ಗಟ್ಟು ಹೆಚ್ಚುತ್ತಿರುವುದಕ್ಕೆ ಇದೊಂದು ಉದಾಹರಣೆ. ಶಿವಣ್ಣನವರ ಅಮೆರಿಕ ಯಾನಕ್ಕೆ ಮುನ್ನ ಸುದೀಪ್ ಮತ್ತು ವಿನೋದ್ ರಾಜ್ ಶುಭ ಹಾರೈಸಿದ್ದಾರೆ.

ಸದ್ಯ ಅಮೆರಿಕಾದಲ್ಲಿ ಸರ್ಜರಿ ಆಗಿ ಚಿಕಿತ್ಸೆ ಪಡೆಯುತ್ತಿರುವ ಕನ್ನಡದ ನಟ, ಕರುನಾಡು ಚಕ್ರವರ್ತಿ ಖ್ಯಾತಿಯ ಶಿವರಾಜ್‌ಕುಮಾರ್ (Shivarajkumar) ಅವರ ಬಗ್ಗೆ ಹೀಗೊಂದು ಸುದ್ದಿ ಓಡಾಡುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ದೊಡ್ಮನೆಯ ದೊಡ್ಮಗ ಶಿವರಾಜ್‌ಕುಮಾರ್ ದೊಡ್ಡತನದ ಬಗ್ಗೆ ಕನ್ನಡದ ಸಿನಿಪ್ರೇಮಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ, ಕಿಚ್ಚ ಸುದೀಪ್ (Kichcha Sudeep) ಅವರ ಸಮಯಪ್ರಜ್ಷೆ ಹಾಗು ನಡೆ-ನುಡಿಯ ಬಗ್ಗೆ ಕೂಡ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. 

ಹಾಗಿದ್ದರೆ ಆಗಿದ್ದೇನು? ಏನದು ನ್ಯೂಸ್? ಕುತೂಹಲಕ್ಕೆ ಇಲ್ಲಿದೆ ಉತ್ತರ.. ಕಿಚ್ಚ ಸುದೀಪ್ ಅವರು ಸ್ವಲ್ಪ ದಿನಗಳ ಹಿಂದೆ ಅದೊಂದು ದಿನ ಶಿವಣ್ಣ ಅವರಿಗೆ ಕಾಲ್ ಮಾಡಿ ಒಂದು ಮನವಿ ಮಾಡಿಕೊಂಡಿದ್ದಾರೆ. 'ಅಣ್ಣಾ, ನಿಮ್ಮ ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ 50 ದಿನ ಪೂರೈಸುತ್ತದೆ. ಆದರೆ ನಾನು ಗ ಎರಡೂವರೆ ವರ್ಷದ ಮೇಲೆ ಬರುತ್ತಿದ್ದೇನೆ. ನನ್ನ ಅಭಿಮಾನಿಗಳ ಸೆಲೆಬ್ರೇಶನ್‌ಗೆ ದೊಡ್ಡ ಥಿಯೇಟರ್‌ ಬೇಕಿದೆ. 

'ಕಾಟನ್ ಕ್ಯಾಂಡಿ' ನನಗೆ ತುಂಬಾ ಇಂಪಾರ್ಟೆಂಟ್, ಹೀಗಂದಿದ್ಯಾಕೆ ಚಂದನ್ ಶೆಟ್ಟಿ?

ನಿಮ್ಮ ಸಿನಿಮಾ ಓಡುತ್ತಿರುವ ನರ್ತಕಿ ಥಿಯೇಟರ್ ಅದಕ್ಕೆ ಸೂಕ್ತ ಆಗುತ್ತದೆ. ನನ್ನ ಸಿನಿಮಾಗೆ ನಿಮ್ಮ ಸಿನಿಮಾದ ನರ್ತಕಿ ಥಿಯೇಟರ್‌ಅನ್ನು ನೀವು ನಮಗೆ ಬಿಟ್ಟುಕೊಟ್ಟರೆ ತುಂಬಾ ಅನುಕೂಲ ಆಗುತ್ತದೆ' ಎಂದು ಸುಧಿಪ್ ಅವರು ಶಿವಣ್ಣರಿಗೆ ಹೇಳಿದ್ದಾರೆ ಎನ್ನಲಾಗಿದೆ. ಅದಕ್ಕೊಪ್ಪಿದ ನಟ ಶಿವಣ್ಣಾ ಅವರು ತಕ್ಷಣವೇ ಸುದೀಪ್ ಅವರಿಗೆ ಹೀಗೆ ಹೇಳಿದ್ದಾರಂತೆ. 'ಆಯ್ತು, ನಿಮ್ಮ ಮ್ಯಾಕ್ಸ್ ಚಿತ್ರವನ್ನು ನರ್ತಕಿಯಲ್ಲೇ ರಿಲೀಸ್ ಮಾಡಿಕೊಳ್ಳಿ. ನಾನು ಪಕ್ಕದ ಸಪ್ನಾ ಥಿಯೇಟರ್‌ಗೆ ನಮ್ಮ ಭೈರತಿ ರಣಗಲ್ ಸಿನಿಮಾವನ್ಜು ಸ್ಥಳಾಂತರ ಮಾಡುತ್ತೇನೆ' ಎಂದಿದ್ದಾರಂತೆ. 

ಇದೀಗ, ನಟ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್‌' ಚಿತ್ರವು ನರ್ತಕಿ ಚಿತ್ರಂದಿರದಲ್ಲಿ ಬಿಡುಗಡೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಭೈರತಿ ರಣಗಲ್ ಪಕ್ಕದ ಸಪ್ನಾ ಥಿಯೇಟರ್‌ಗೆ ಕಾಲಿಟ್ಟಿದೆ. ಸಿಕ್ಕ ಮಾಹಿತಿ ಪ್ರಕಾರ, ಸುದೀಪ್ ಅಭಿನಯದ ಮ್ಯಾಕ್ಸ್‌ ಚಿತ್ರವು ಪ್ರೇಕ್ಷಕರಿಂದ ಭಾರೀ ಪ್ರಶಂಸೆ ಪಡೆದಿದ್ದು, ಸೂಪರ್ ಹಿಟ್ ಆಗುವತ್ತ ಸಾಗುತ್ತಿದೆ ಎನ್ನಲಾಗುತ್ತಿದೆ. ನಿನ್ನೆ ಕ್ರಿಸ್‌ಮಸ್ ರಜಾ ಇತ್ತು, ಇಂದು ಹಾಗೂ ಮುಂದೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ. 

ಯಶ್ ಕುದಿಯುತ್ತಿದ್ದಾರೆ, ಬೇಯುತ್ತಿದ್ದಾರೆ, ನರಳುತ್ತಿದ್ದಾರೆ: ಯಾಕೆ ಈ ಸುದ್ದಿ ಹಬ್ಬಿದೆ?

ಒಟ್ಟಿನಲ್ಲಿ, ನಟ ಸುದೀಪ್ ಹಾಗೂ ಶಿವಣ್ಣ ಮಧ್ಯೆ ಬಾಂಧವ್ಯ ದಿನದಿನಕ್ಕೂ ಗಟ್ಟಿಯಾಗುತ್ತಿದೆ ಎನ್ನಬಹುದು. ಇತ್ತೀಚೆಗೆ ಸ್ಯಾಂಡಲ್‌ವುಡ್ ನಾಯಕನಟರಲ್ಲಿ ಒಮ್ಮತ ಮೊದಲಿಗಿಂತ ಹೆಚ್ಚಾಗಿ ಕಂಡುಬರುತ್ತಿದೆ ಎನ್ನಬಹುದೇನೋ. ಶಿವಣ್ಣ ಅವರು ಅಮೆರಿಕಕ್ಕೆ ಹೊರಟು ನಿಂತಾದ ಸುದೀಪ್ ಹಾಗೂವಿನೋದ್ ರಾಜ್ ಅವರು ಮನೆಗೇ ಹೋಗಿ ಧೈರ್ಯ ತುಂಬಿ ಹಾರೈಸಿ ಬಂದಿದ್ದಾರೆ. ಉಪೇಂದ್ರ ಅಭಿನಯದ 'ಯುಐ' ಚಿತ್ರಕ್ಕೆ ಕೂಡ ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ನಿಂತಿರುವ ಬೆಳವಣಿಗೆ ಕಣ್ಣಮುಂದೆಯೇ ಇದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ