
ನಿರ್ದೇಶಕ ಎ. ಹರ್ಷ ಮತ್ತು ನಟ ಶಿವರಾಜ್‌ಕುಮಾರ್ (Shivaraj Kumar) ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ‘ಭಜರಂಗಿ 2’ (Bhajarangi-2)ಚಿತ್ರದ ಟೀಸರ್ ಮತ್ತು ಪೋಸ್ಟರ್ಗಳು ಧೂಳೆಬ್ಬಿಸಿವೆ. ಇದರ ಮಧ್ಯೆ ಇಂದು (ಅ.20) ‘ಭಜರಂಗಿ 2’ ಟ್ರೇಲರ್ ರಿಲೀಸ್ ಆಗಿದೆ.
ಜಯಣ್ಣ ಕಂಬೈನ್ಸ್ ಬ್ಯಾನರ್ನಲ್ಲಿ ‘ಭಜರಂಗಿ 2’ ಟ್ರೇಲರ್ (Bhajarangi-2 Trailer) ಮೂಡಿಬಂದಿದ್ದು, ಇಡೀ ಟ್ರೇಲರ್ನಲ್ಲಿ ಹಿನ್ನೆಲೆ ಸಂಗೀತ ಹೈಲೈಟ್ ಆಗಿದೆ. ಟ್ರೇಲರ್ನಲ್ಲಿ ಬರುವ ಎಲ್ಲಾ ಪಾತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ಕಾಣುವ ಪ್ರತಿ ಸೆಟ್ ಹಾಗೂ ಮ್ಯೂಸಿಕ್ ಸಾಕಷ್ಟು ಗಮನ ಸೆಳೆಯುತ್ತಿದೆ.
ಶಿವರಾಜ್‌ಕುಮಾರ್ 'ಭಜರಂಗಿ-2' ಬಗ್ಗೆ ತಿಳಿಯಲೇ ಬೇಕಾದ ವಿಚಾರಗಳಿವು..
ಶಿವರಾಜ್‌ಕುಮಾರ್, ಭಾವನಾ ಸೇರಿ ಎಲ್ಲರೂ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ನೋಡಿದವರಿಗೆ ಇಡೀ ಸಿನಿಮಾದ ಕಥೆ ತಂತ್ರ-ಮಂತ್ರಗಳ ಮೇಲೆಯೇ ಸಾಗುತ್ತದೆಯೇ ಎನ್ನುವ ಪ್ರಶ್ನೆ ಕಾಡದೆ ಇರದು.
ನಿರ್ದೇಶಕ ಎ. ಹರ್ಷ ಮತ್ತು ಶಿವರಾಜ್‌ಕುಮಾರ್ ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ 3ನೇ ಸಿನಿಮಾ ಇದಾಗಿದ್ದು, ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ. ಈ ಹಿಂದೆ ತೆರೆಕಂಡಿದ್ದ ‘ಭಜರಂಗಿ’ ಚಿತ್ರ ಸೂಪರ್ ಹಿಟ್ ಆಗಿತ್ತು. ಹಾಗಾಗಿ ‘ಭಜರಂಗಿ 2’ ಈಗ ಸಖತ್ ಹೈಪ್ ಸೃಷ್ಟಿ ಮಾಡಿದೆ. ಟ್ರೇಲರ್ ಮೂಲಕ ಈ ಹೈಪ್ ಮತ್ತಷ್ಟು ಹೆಚ್ಚಿಸಿದ್ದು, ಇದೇ ಅ.29ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಟ್ರೇಲರ್ ಹೀಗೆ ಇರ್ಬೇಕಾದ್ರೆ ಇನ್ನೂ ಸಿನಿಮಾ ಯಾವ ರೀತಿ ಇರ್ಬಹುದು ಎನ್ನುವುದು ಭಾರೀ ಕೌತುಕ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.