ತಮಿಳು- ತೆಲುಗು ಸಿನಿಮಾ ಮಾಡಿದ್ರೆ ಬ್ಯಾಂಕ್ ಬ್ಯಾಲೆನ್ಸ್‌ ಹೆಚ್ಚಿರುತ್ತಿತ್ತು: ನಟ ರಮೇಶ್ ಅರವಿಂದ್ ಶಾಕಿಂಗ್ ಹೇಳಿಕೆ

By Vaishnavi Chandrashekar  |  First Published Apr 12, 2023, 9:39 AM IST

ತಮಿಳು ತೆಲುಗು ಸಿನಿಮಾಗಳನ್ನು ಬಿಟ್ಟು ಕನ್ನಡಕ್ಕೆ ಬರಲು ಕಾರಣ ಏನೆಂದು ತಿಳಿಸಿದ ರಮೇಶ್ ಅರವಿಂದ್. ಸಂಭಾವನೆ ಎಲ್ಲಿ ಹೆಚ್ಚಿದೆ? 


ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಜರ್ನಿ ಶುರು ಮಾಡಿದ ರಮೇಶ್ ಅರವಿಂದ್ ಆರಂಭದಲ್ಲಿ ಬೇರೆ ಭಾಷೆ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಆದರೆ ವರ್ಷ ಕಳೆಯುತ್ತಿದ್ದಂತೆ ಕನ್ನಡ ಸಿನಿಮಾನೇ ಬೇಕು ಎಂದು ಆಯ್ಕೆ ಮಾಡಿಕೊಂಡರು ಇದಕ್ಕೆ ಕಾರಣ ಏನೆಂದು ಪ್ರಶ್ನೆ ಮಾಡಿದಾಗ ತುಂಬಾ ಸಿಂಪಲ್‌ ಅಗಿ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ. 

'ಯಾರೋ ಹೇಳಿರುವುದನ್ನು ಕೇಳಿ ನಾನು ಮಾಡುವುದಿಲ್ಲ ನನಗೆ ಏನು ಸರಿ ಅನಿಸುತ್ತದೆ ಅದನ್ನು ಮಾಡುವೆ. ನನಗೆ ಏನು ಸರಿ ಅನಿಸುತ್ತದೆ ಅದನ್ನೇ ಮಾಡಿಕೊಂಡು ಬಂದಿದ್ದೀನಿ ನಮ್ಮ ಅಪ್ಪ ಹಾಗೆ ಇದ್ರು ನಾನು ಹಾಗೇ ಇದ್ದೀನಿ. ಎಲ್ಲರಿಗೂ ಗೌರವ ಕೊಡ್ತೀನಿ. ಆ ಸಮಯದಲ್ಲಿ ತಮಿಳು ನಾಡಿನಲ್ಲಿ ಎಲ್ಲವೂ ಸೂಪರ್ ಹಿಟ್ ಸಿನಿಮಾಗಳು ಸತ್ಯ ಲೀಲಾವತಿ ಮತ್ತು Do it. ಆಗ ನಾನು ಬಿಟ್ಟು ಬಂದೆ. ನಾನು ಬೆಳೆದಿದ್ದು ಬೆಂಗಳೂರಿನಲ್ಲಿ ಇದು ನಮ್ಮ ಮನೆ ಎನ್ನುವ ಭಾವನೆ ನಮ್ಮ ಮನೆಗೆ ವಾಪಸ್ ಬರುತ್ತಿದ್ದೀನಿ ಅನ್ನೋ ಖುಷಿ. ಇಲ್ಲಿ ಬಂದಿದಕ್ಕೆ ಮೋಸ ಇಲ್ಲ..ಇಲ್ಲಿ ಕೂಡ ನನಗೆ ಸೂಪರ್ ಹಿಟ್ ಸಿನಿಮಾಗಳು ಸಿಕ್ಕಿದೆ. 9 ಸಿನಿಮಾಗಳು ಸೂಪರ್ ಹಿಟ್ ಆಯ್ತು. ಖಂಡಿತ ಬೇರೆ ಭಾಷೆಯಲ್ಲಿ ಸಿನಿಮಾ ಈಗ ಮಾಡುತ್ತಿದ್ದರೆ ಸಿಕ್ಕಾಪಟ್ಟೆ ಜಾಸ್ತಿ ಇರುತ್ತಿತ್ತು ಬ್ಯಾಂಕ್ ಬ್ಯಾಲೆನ್ಸ್‌ ಎಲ್ಲೋ ಇರುತ್ತಿತ್ತು. ಇಲ್ಲಿ ಸಿಕ್ಕಂತ ಪ್ರೀತಿ ಮತ್ತು ಕನೆಕ್ಷನ್‌ ತುಂಬಾ ಸ್ವೀಟ್ ಆಯ್ತು. ಎಲ್ಲಾದಕ್ಕಿಂತ ಇಲ್ಲಿ ಇಷ್ಟ ಆಯ್ತು ನನ್ನ ಮನೆಗೆ ಬಂದಿದ್ದೀನಿ ಅಷ್ಟೆ. ವಾಪಸ್ ಹೋಗಲು ಅವಕಾಶ ಸಿಗಲಿಲ್ಲ ಆದರೆ ಆಗಾಗ ಕಮಲ್ ಜೊತೆ ಸಿನಿಮಾಗಳು ಮಾಡುತ್ತಿದ್ದೆ. ಕಳೆದ 6 ವರ್ಷದಲ್ಲಿ ಆ ಕಡೆ ಮುಖನೂ ಮಾಡಿಲ್ಲ ಹೋಗಿಲ್ಲ' ಎಂದು ಕನ್ನಡ ಖಾಸಗಿ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.  

Tap to resize

Latest Videos

ಬುದ್ಧಿಗೆ ಕೆಲಸ ಕೊಡುವ, ಹೃದಯ ತಾಕುವ ಚಿತ್ರ ಶಿವಾಜಿ ಸುರತ್ಕಲ್‌ 2: ನಿರ್ದೇಶಕ ಆಕಾಶ್‌ ಶ್ರೀವತ್ಸ

'ಕಮಲ್ ಹಾಸನ್‌ ಮತ್ತು ನನ್ನನ್ನು ಚಿತ್ರರಂಗಕ್ಕೆ ಪರಿಚಯ ಮಾಡಿದ್ದು ಬಾಲಚಂದ್ರನ್ ಅವ್ರು ನಮ್ಮ ಗುರುಗಳು. ಅವರಿಂದ ನಾನು ಕಮಲ್ ಒಟ್ಟಿಗೆ ಸಿನಿಮಾ ಮಾಡಲು ಶುರು ಮಾಡಿದೆವು. ಯಾವುದೋ ಕಾರಣ ನಾನು ಪೋನ್ ಮಾಡಿಕೊಂಡು ಮಾತನಾಡುತ್ತಿದ್ದೀವಿ 15 ವರ್ಷ ಯಾರಿಗೂ ಗೊತ್ತಿರಲಿಲ್ಲ ನಾನು ಕಮಲ್ ಸ್ನೇಹಿತರು ಎಂದು. ನಾನು ಸ್ನೇಹವನ್ನು ಪರ್ಸನಲ್ ಆಗಿ ಬಳಸಿಕೊಂಡಿಲ್ಲ ನಮ್ಮ ಆಡಿಯೋ ರಿಲೀಸ್ ಮಾಡಿಕೊಡಿ ಹಾಗೆ ಹೀಗೆ ಎಂದು ಅದರ ಪಾಡಿಗೆ ಅದು ನಡೆದುಕೊಂಡು ಹೋಗುತ್ತಿದೆ. ಒಂದು ದಿನ ಅವರೇ ಕರೆ ಮಾಡಿ ರಾಮಾ ಶಾಮ ಭಾಮ ನಿರ್ದೇಶನ ಮಾಡಬೇಕು ಎಂದು ಅವಕಾಶ ಕೊಟ್ಟರು ಮತ್ತೆ ತಮಿಳಿನಲ್ಲಿ ಉತ್ತಮ್ ವಿಲನ್ ಕೊಟ್ಟರು. ನಡುವೆ ಕಮಲ್ ರಾಜಕೀಯಕ್ಕೆ ಕಾಲಿಟ್ಟ ಮೇಲೆ ಜೀವನ ಬದಲಾಗಿತ್ತು...ಸಿನಿಮಾ ಮಾಡುವಾಗ ಸುತ್ತ 8-10 ಜನ ಇರುತ್ತಿದ್ದರು ಆದರೆ ರಾಜಕೀಯಲ್ಲಿ ಸುಮಾರು 100 ಮಂದಿ ಇರುತ್ತಾರೆ ಆಫೀಸ್‌ ಕೂಡ ಬದಲಾಗಿದೆ. ಈಗಲೂ ಫೋನ್‌ನಲ್ಲಿ ಮಾತನಾಡುತ್ತೀವಿ ಎಂದು ರಮೇಶ್ ಅರವಿಂದ್ ಫ್ರೆಂಡ್‌ಶಿಪ್‌ ಬಗ್ಗೆ ಹೇಳಿದ್ದಾರೆ.  

click me!