Kabzaa: ಒಟಿಟಿಗೆ ರಿಯಲ್ ಸ್ಟಾರ್ 'ಕಬ್ಜ'; ಥಿಯೇಟರ್​ನಲ್ಲಿ ಮಿಸ್​ ಮಾಡಿಕೊಂಡವರು ಇಲ್ಲಿ ನೋಡಿ

Published : Apr 11, 2023, 06:42 PM IST
Kabzaa: ಒಟಿಟಿಗೆ ರಿಯಲ್ ಸ್ಟಾರ್ 'ಕಬ್ಜ'; ಥಿಯೇಟರ್​ನಲ್ಲಿ ಮಿಸ್​ ಮಾಡಿಕೊಂಡವರು ಇಲ್ಲಿ ನೋಡಿ

ಸಾರಾಂಶ

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡವರು ಇಲ್ಲಿ ನೋಡಬಹುದು. 

ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಕಬ್ಜ' ಸಿನಿಮಾ ಒಟಿಟಿಗೆ ಬರ್ತಿದೆ. ಸಿನಿಮಾ ರಿಲೀಸ್ ಆಗಿ ಒಂದು ತಿಂಗಳೊಳಗೆ ಕಬ್ಜ ಒಟಿಟಿಗೆ ಲಗ್ಗೆ ಎಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ಕಬ್ಜ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಕಬ್ಜ ಮೊದಲ ಭಾಗ ಮಾರ್ಚ್ 17 ಅಂದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ರಿಲೀಸ್ ಆಗಿತ್ತು. ಇದೀಗ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಮಿಸ್​ ಮಾಡಿಕೊಂಡವರೆಲ್ಲ ಈಗ ಮನೆಯಲ್ಲೇ ಕುಳಿತು ವೀಕ್ಷಿಸುವ ಸಮಯ ಹತ್ತಿರವಾಗಿದೆ. 

ಅಂದಹಾಗೆ ಕಬ್ಜ ಇದೇ ತಿಂಗಳು ಏಪ್ರಿಲ್​ 14ರಂದು ಒಟಿಟಿ ಅಂಗಳಕ್ಕೆ ಕಾಲಿಡುತ್ತಿದೆ. ಅಮೆಜಾನ್​ ಪ್ರೈಂ ವಿಡಿಯೋ  ಮೂಲಕ ಈ ಚಿತ್ರ ಸ್ಟ್ರೀಮಿಂಗ್ ಆಗಲಿದೆ. ಆರ್​. ಚಂದ್ರು ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಇದಾಗಿದೆ. ರಾಜ್ಯಾದ್ಯಂತ ಅತ್ಯುತ್ತಮ ಓಪನಿಂಗ್​ ಪಡೆದುಕೊಂಡ ಕಬ್ಜ ಭರ್ಜರಿ ಕಮಾಯಿ ಮಾಡಿತ್ತು. ಅನೇಕರು ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಲು ಸಾಧ್ಯವಾಗಿರಲಿಲ್ಲ.ಇದೀಗ ಒಟಿಟಿ ಮೂಲಕ ಕಬ್ಜ ಕಣ್ತುಂಬಿಕೊಳ್ಳಬಹುದು.

Kabzaa-2; ರಿಯಲ್ ಸ್ಟಾರ್ ಸಿನಿಮಾದಲ್ಲಿ ತೆಲುಗು ಪವರ್ ಸ್ಟಾರ್; ಸ್ಯಾಂಡಲ್‌ವುಡ್‌ಗೆ ಪವನ್ ಕಲ್ಯಾಣ್?

ಕಬ್ಜ ರೆಟ್ರೋ ಶೈಲಿಯಲ್ಲಿ ಮೂಡಿಂಬದ ಸಿನಿಮಾ. ಇದು ಎರಡು ಪಾರ್ಟ್ ನಲ್ಲಿ ಸಿದ್ಧವಾಗಿದೆ. ಸದ್ಯ ಮಾರ್ಚ್ 17ರಂದು ರಿಲೀಸ್ ಆಗಿದ್ದು ಮೊದಲ ಪಾರ್ಟ್. ಮೊದಲ ಭಾಗದಲ್ಲಿ ಅರ್ಥ ಕಥೆಯನ್ನು ಮಾತ್ರ ತೋರಿಸಲಾಗಿದೆ. ಪೈಲೆಟ್​ ಆಗಬೇಕು ಎಂದುಕೊಂಡ ಕಥಾನಾಯಕ ಅನಿವಾರ್ಯವಾಗಿ ಭೂಗತ ಜಗತ್ತಿಗೆ ಎಂಟ್ರಿ ನೀಡುತ್ತಾನೆ. ನಂತರ ಅವನು ದೊಡ್ಡ ಡಾನ್​ ಆಗಿ ಮೆರೆಯುತ್ತಾನೆ. ಸುದೀಪ್ ಮತ್ತು ಕ್ಲೈಮ್ಯಾಕ್ಸ್ ನಲ್ಲಿಎಂಟ್ರಿ ಕೊಡುವ ಶಿವಣ್ಣ. ಎರಡನೇ ಭಾಗದಲ್ಲಿ ಸುದೀಪ್ ಮತ್ತು ಶಿವಣ್ಣನ ಪಾತ್ರ ಹೆಚ್ಚಾಗಿ ಇರುವ ಸಾಧ್ಯತೆ ಇದೆ.

Kabzaa; ಪಾರ್ಟ್-2ನಲ್ಲಿ ಅಮರಾಪುರ 'ಕಬ್ಜ' ಮಾಡಿ ಉಪ್ಪಿ ಸಾಮ್ರಾಜ್ಯಕ್ಕೆ ಅಧಿಪತಿ ಆಗ್ತಾರಾ ಶಿವಣ್ಣ?

ಉಪೇಂದ್ರ ವರ್ಲ್ಡ್ ಡಾನ್​ ಪಾತ್ರ ಮಾಡಿದ್ದಾರೆ. ಪೊಲೀಸ್​ ಅಧಿಕಾರಿಯಾಗಿ ಕಿಚ್ಚ ಸುದೀಪ್​ ಅಬ್ಬರಿಸಿದ್ದಾರೆ. ಶಿವರಾಜ್​ಕುಮಾರ್​ ಕ್ಲೈಮ್ಯಾಕ್ಸ್​ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ಪಾತ್ರದ ಬಗ್ಗೆ ಹೆಚ್ಚಿನ ವಿವರ ಬಹಿರಂಗ ಆಗಿಲ್ಲ. ಶಿವಣ್ಣ ಪಾತ್ರದ ಬಗ್ಗೆ 2ನೇ ಭಾಗದಲ್ಲಿ ರಿವೀಲ್ ಆಗಲಿದೆ. ರವಿ ಬಸ್ರೂರು ಸಂಗೀತ  ಸಿನಿಮಾಗೆ ಇದೆ. ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದಾರೆ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?