ವಿದೇಶದಲ್ಲಿರುವ 'ಶಾಸ್ತ್ರಿ' ಚಿತ್ರದ ನಟಿ; ಮಗಳಿಗೆ ಮಾಡಿದ್ರು ಕನ್ನಡ ಪಾಠ ನೋಡ್ರಿ !

Published : Jul 03, 2020, 03:55 PM ISTUpdated : Jul 03, 2020, 04:53 PM IST
ವಿದೇಶದಲ್ಲಿರುವ 'ಶಾಸ್ತ್ರಿ' ಚಿತ್ರದ ನಟಿ; ಮಗಳಿಗೆ ಮಾಡಿದ್ರು ಕನ್ನಡ ಪಾಠ ನೋಡ್ರಿ !

ಸಾರಾಂಶ

ದರ್ಶನ್‌ ಅಭಿನಯದ ಶಾಸ್ತ್ರಿ ಚಿತ್ರದ ನಟಿ ಮಾನ್ಯಾ ವಿದೇಶದಲ್ಲಿ ನೆಲೆಸಿದ್ದು ಮಗಳಿಗ ಕನ್ನಡ ಕಲಿಸುತ್ತಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾನ್ಯಾ ಶೇರ್ ಮಾಡಿಕೊಂಡಿರುವ ವಿಡಿಯೋ ಇದು...  

ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ 'ವರ್ಷ' ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ  'ಶಾಸ್ತ್ರಿ' ಚಿತ್ರದಲ್ಲಿ ಮಿಂಚಿದ ನಟಿ ಮಾನ್ಯಾ ವೈವಾಹಿಕ ಬದುಕಿಗೆ ಕಾಲಿಟ್ಟ ನಂತರ ಕುಟುಂಬಸ್ಥರ ಜೊತೆ ವಿದೇಶದಲ್ಲಿ ನೆಲೆಸಿದ್ದಾರೆ. ಕನ್ನಡ, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿರುವ ಮಾನ್ಯಾ ಕಡಿಮೆ ಅವಧಿಯಲ್ಲಿ ಅಪಾರ ಅಭಿಮಾನಿಗಳನ್ನುಗಳಿಸಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಮಾನ್ಯಾ ಅಭಿಮಾನಿಗಳ ಜೊತೆ ಸಂವಾದಿಸುತ್ತಾರೆ. 

15 ವರ್ಷದ ನಂತರ 'ಶಂಭು' ಪ್ರೇಯಸಿ ಜೊತೆ ಒಂದಾದ ಶ್ರೀಮುರಳಿ! 

ಅಮೇರಿಕಾದಲ್ಲಿರುವ ಮಾನ್ಯಾ ಬಿಡುವಿನ ಸಮಯದಲ್ಲಿ ಪುತ್ರಿ ಒಮಿಷ್ಕಾಗೂ ಕನ್ನಡ ಕಲಿಸುತ್ತಾರಂತೆ, ಅಮ್ಮ-ಮಗಳು ಮಾಡುವ ಡುಯಟ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ತಮ್ಮ ಮೊದಲ ಸಿನಿಮಾ 'ವರ್ಷ'ದಲ್ಲಿ ಡಾ. ವಿಷ್ಣುವರ್ಧನ್‌ ಜೊತೆ ಅಭಿನಯಿಸಿದ್ದಾರೆ. ಈ ಚಿತ್ರದ  'ವಾಸಂತಿ ವಾಸಂತಿ' ಹಾಡನ್ನು ಹಾಡಿದ್ದಾರೆ. ಅಮ್ಮನ ಮಡಿಲಲ್ಲಿ ಕುಳಿತ್ತಿದ್ದ ಪುತ್ರಿಯ ಜೊತೆಗೂ ಕನ್ನಡ ಭಾಷೆಯಲ್ಲಿ ಎರಡು ಮೂರು ಸಾಲುಗಳಲ್ಲಿ ಮಾತನಾಡಲು ಪ್ರಯತ್ನಿಸಿದ್ದಾರೆ. 'ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಒಮಿಷ್ಕಾ' ಎಂದು ಕಂದಮ್ಮ ಮಾತನಾಡಿದ್ದಾಳೆ.

 

'ನಾನು ಗಾಯಕಿ ಅಲ್ಲ ಆದರೆ ನನ್ನ ಮಗಳಿಗೋಸ್ಕರ ಹಾಡಲು ತುಂಬಾ ಇಷ್ಟ ಪಡುತ್ತೇನೆ. ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ಎಸ್‌ ನಾರಾಯಣ್‌ ಸರ್‌ ಮತ್ತು ರಾಕ್‌ಲೈನ್‌ ಸರ್‌ಗೆ ಧನ್ಯವಾದಗಳು. ವಿಷ್ಣುವರ್ಧನ್ ಸರ್ ಜೊತೆ ಅಭಿನಯಿಸುವುದಕ್ಕೆ ನಾನು ಅದೃಷ್ಟ ಮಾಡಿದ್ದೆ' ಎಂದು ಬರೆದುಕೊಂಡಿದ್ದಾರೆ.

 

ಇನ್ನು  ನಟಿ ಅನುಪ್ರಭಾಕರ್‌ ಚಿತ್ರರಂಗಕ್ಕೆ 'ಸಾರ ವಜ್ರ' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಶುಭಾಶಯ ತಿಳಿಸಲು ಮಾನ್ಯಾ ವಿಡಿಯೋ ಶೇರ್ ಮಾಡಿದ್ದರು. ಚಿತ್ರರಂಗದಿಂದ ದೂರ ಉಳಿದರೂ ಸಿನಿ ಸ್ನೇಹಿತರ ಪ್ರೀತಿ ಹಾಗೆ ಉಳಿಸಿಕೊಂಡಿದ್ದಾರೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸಿನಿಮಾ, ರಾಜಕೀಯ ಎರಡರಿಂದಲೂ ದೂರ: ಮೋಹಕ ತಾರೆ ರಮ್ಯಾ ಈಗ ಏನ್ ಮಾಡ್ತಿದ್ದಾರೆ ಗೊತ್ತಾ?
ದೇವರೇ.. ದರ್ಶನ್ ಸಂಕಷ್ಟ ದೂರವಾಗಲಿ: ಮಗನಿಗಾಗಿ ವಿಶೇಷ ಪೂಜೆ ಸಲ್ಲಿಸಿದ ತಾಯಿ ಮೀನಾ ತೂಗುದೀಪ