ಶಂಕರ್‌ನಾಗ್ ಜತೆ ಡ್ಯೂಯೆಟ್ ಹಾಡಿದ್ದ ಗೀತಾ ನಟಿ ಈಗೆಲ್ಲಿದ್ದಾರೆ, ಏನ್ ಮಾಡ್ತಿದಾರೆ; ಅಕ್ಕ ನಿಮ್ಗೆಲ್ಲಾ ಗೊತ್ತಲ್ವಾ..!?

By Shriram Bhat  |  First Published Feb 2, 2024, 2:33 PM IST

1981 ರಲ್ಲಿ ತೆರೆಕಂಡ 'ಗೀತಾ' ಚಿತ್ರವು ಅಂದು ಸೂಪರ್ ಹಿಟ್ ದಾಖಲಿಸಿದ್ದೂ ಅಲ್ಲದೇ ಗೀತಾ ಚಿತ್ರದ ಹಾಡುಗಳು ಇಂದಿಗೂ ಸೂಪರ್ ಹಿಟ್ ಆಗಿದ್ದವು. ಅಂದು ಜನಪ್ರಿಯತೆ ಪಡೆದಿದ್ದಷ್ಟೇ ಅಲ್ಲ, ಇಂದು ಕೂಡ ಗೀತಾ ಚಿತ್ರವನ್ನು ಸಿನಿಪ್ರೇಕ್ಷಕರು ನೆನಪಿಸಿಕೊಳ್ಳುತ್ತಾರೆ. 


ಸ್ಯಾಂಡಲ್‌ವುಡ್ ಸಿನಿಮಾಗಳ ಪುಟ ತರೆದರೆ ಕೆಲವೊಂದು ಸಿನಿಮಾಗಳು ಇತಿಹಾಸ ಸೃಷ್ಟಿಸಿರುವುದು ಗೊತ್ತಾಗುತ್ತದೆ. ಅವುಗಳಲ್ಲಿ ಶಂಕರ್‌ನಾಗ್ ನಾಯಕತ್ವದ 'ಗೀತಾ' ಚಿತ್ರವೂ ಒಂದು. 1981 ರಲ್ಲಿ ತೆರೆಕಂಡ 'ಗೀತಾ' ಚಿತ್ರವು ಅಂದು ಸೂಪರ್ ಹಿಟ್ ದಾಖಲಿಸಿದ್ದೂ ಅಲ್ಲದೇ ಗೀತಾ ಚಿತ್ರದ ಹಾಡುಗಳು ಇಂದಿಗೂ ಸೂಪರ್ ಹಿಟ್ ಆಗಿದ್ದವು. ಅಂದು ಜನಪ್ರಿಯತೆ ಪಡೆದಿದ್ದಷ್ಟೇ ಅಲ್ಲ, ಇಂದು ಕೂಡ ಗೀತಾ ಚಿತ್ರವನ್ನು ಸಿನಿಪ್ರೇಕ್ಷಕರು ನೆನಪಿಸಿಕೊಳ್ಳುತ್ತಾರೆ. ಜತೆಗೆ, ಆ ಚಿತ್ರದ ಹಾಡುಗಳನ್ನು ಇಂದಿಗೂ ಬಹಳಷ್ಟು ಸಿನಿಮಾ ಪ್ರೇಮಿಗಳು ಕೇಳುತ್ತಾರೆ, ಇಷ್ಟಪಡುತ್ತಾರೆ.

ಗೀತಾ ಚಿತ್ರವು ಅಂದು ಅದೆಷ್ಟು ಜನಪ್ರಿಯತೆ ಗಳಿಸಿತ್ತು ಎಂದರೆ ಆ ಚಿತ್ರದ ಮೂಲಕ ನಟ ಶಂಕರ್‌ನಾಗ್ ಅವರಿಗೆ ರೊಮ್ಯಾಂಟಿಕ್ ಇಮೇಜ್ ಹಾಗೂ ನಟಿ ಪದ್ಮಾವತಿ ರಾವ್ ಅವರಿಗೆ ಕನ್ನಡ ಚಿತ್ರೋದ್ಯಮದಲ್ಲಿ ನಾಯಕಿ ಎಂಬ ಹಣೆಪಟ್ಟಿ ಅನಾಯಾಸವಾಗಿ ಎಂಬಂತೆ ದಕ್ಕಿತು. ಗೀತಾ ಚಿತ್ರದ 'ಜೊತೆಯಲಿ ಜೊತೆಯಲಿ' ಹಾಡಂತೂ ಅಂದಿನ ಕಾಲೇಜು ಯುವಕಯುತಿಯರ ಫೇವರೆಟ್ ಹಾಡು ಎಂಬಂತಾಗಿತ್ತು. ಆ ಹಾಡನ್ನು ಹೊರತುಪಡಿಸಿ ಕೂಡ ಗೀತಾ ಚಿತ್ರದ ಎಲ್ಲಾ ಗೀತೆಗಳೂ ಕೂಡ ಸೂಪರ್‌ ಹಿಟ್ ಆಗಿದ್ದವು. ಗೀತಾ ಚಿತ್ರದ ಬಳಿಕ ನಟ ಶಂಕರ್‌ನಾಗ್ ಅವರಿಗೆ ಬಹಳಷ್ಟು ಚಿತ್ರಗಳಲ್ಲಿ ರೊಮ್ಯಾಂಟಿಕ್‌ ಹಿರೋ ಆಗುವಂತೆ ಆಫರ್ ಬಂದಿತ್ತು ಎನ್ನಲಾಗಿದೆ,

Tap to resize

Latest Videos

ಸಂಯುಕ್ತ ಹೆಗಡೆ 'ಕ್ರೀ'ಗಾಗಿ ಜೀವವನ್ನೇ ಕೊಟ್ಬಿಟ್ಟಿದಾರೆ, ಅವರಿನ್ನೂ ಎತ್ತರಕ್ಕೆ ಹೋಗ್ತಾರೆ; ಅಗ್ನಿ ಶ್ರೀಧರ್

ಹೀರೋ ಶಂಕರ್‌ನಾಗ್ ಜೋಡಿಯಾಗಿ ಗೀತಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ನಟಿ ಪದ್ಮಾವತಿ ರಾವ್. ಅವರು ಮುಖ್ಯವಾಗಿ ಮರಾಠಿ, ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂರು ಭಾಷೆಗಳ ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದ ನಟಿ ಪದ್ಮಾವತಿ ರಾವ್ ಅವರು ದಿವಂಗತ ನಟ ಶಂಕರನಾಗ್ ಪತ್ನಿ ಅರುಂಧತಿ ನಾಗ್ ಅವರ ಸ್ವಂತ ತಂಗಿ. ಅವರೀಗ ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಸಂಗತಿ ಬಗ್ಗೆ ಬಹಳಷ್ಟು ಜನರಿಗೆ ಕುತೂಹಲ ಇರಬಹುದು. ಅದಕ್ಕೆ ಇಲ್ಲಿದೆ ಉತ್ತರ..

ಸಿಂಪಲ್ ಸುನಿ-ವಿನಯ್ ರಾಜ್ ಜೋಡಿಗೆ ಸಾಥ್ ಕೊಟ್ಟ ರಮ್ಯಾ; ಸೂಫಿ ಶೈಲಿ ಗೀತೆಯ ಝಲಕ್ ಮೆರಗು!

ಹೌದು, ನಟಿ ಪದ್ಮಾವತಿ ರಾವ್ ಅವರು ಈಗ ಸಿನಿಮಾರಂಗದಲ್ಲಿ ಸಕ್ರಿಯರಾಗಿಲ್ಲ. ಮಾಲ್ಗುಡಿ ಡೇಸ್ ಬಳಿಕ ಅವರು ಯಾವುದೇ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಸಾಮಾಜಿಕ ಸೇವೆಗೆ ತಮ್ಮ ಹೆಚ್ಚಿನ ಸಮಯವನ್ನು ಮೀಸಲಾಗಿಟ್ಟಿದ್ದಾರಂತೆ. ಮದುವೆ ಕೂಡ ಆಗದೇ ಆಧ್ಯಾತ್ಮಿಕ ದಾರಿಯಲ್ಲಿ ಸಾಗುತ್ತ ತಮ್ಮಿಂದಾದಷ್ಟು ಸಮಾಜ ಸೇವೆ ಕೈಗೊಂಡಿರುವ ನಟಿ ಪದ್ಮಾವತಿ ಅವರು ಶಂಕರ್‌ನಾಗ್ ಪತ್ನಿ ಅರುಂಧತಿ ನಾಗ್ ಅವರ ಸ್ವಂತ ತಂಗಿ ಎಂಬುದು ಕನ್ನಡಿಗರಿಗೆ ವಿಶೇಷ ಸಂಗತಿ. ಈ ಮೂಲಕ ಶಂಕರ್‌ನಾಗ್ ಅವರು ನಾದಿನಿ ಆಗುವುದಕ್ಕೆ ಮೊದಲು ಅವರ ಜತೆ ಅಂದು ಡ್ಯೂಯೆಟ್ ಹಾಡಿದ್ದರು. 

ಅರೆಸ್ಟ್​ ಆಗಿದ್ದ 'ಪುಷ್ಪ 2' ನಟ ಮತ್ತೆ ಶೂಟಿಂಗ್‌ಗೆ ಗೆ ಹಾಜರಿ; ಕಂಬಿ ಹಿಂದೆ ಹೋಗಿದ್ದೊಂದು ಭಾರೀ ರೋಚಕ ಕಥೆ!

click me!