ಭಾರೀ ಮೊತ್ತಕ್ಕೆ 'ಅಯೋಗ್ಯ 2' ಆಡಿಯೋ ಹಕ್ಕು ಖರೀದಿಸಿದ ಆನಂದ್ ಆಡಿಯೋ: ವಿಡಿಯೋ ವೈರಲ್!

Published : May 08, 2026, 05:26 PM IST
Ayogya 2

ಸಾರಾಂಶ

ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ ‘ಅಯೋಗ್ಯ 2’ ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೇ ಮುಗಿದಿದೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರ ಆರಂಭದಿಂದಲೂ ಸದ್ದು ಮಾಡುತ್ತಲೇ ಬಂದಿದೆ. ಈಗಾಗಲೇ ‘ಅಯೋಗ್ಯ’..

ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ ‘ಅಯೋಗ್ಯ 2’ ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೇ ಮುಗಿದಿದೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರ ಆರಂಭದಿಂದಲೂ ಸದ್ದು ಮಾಡುತ್ತಲೇ ಬಂದಿದೆ. ಈಗಾಗಲೇ ‘ಅಯೋಗ್ಯ’ ಪಾರ್ಟ್‌ 1 ಯಶಸ್ಸು ದಾಖಲಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಟೀಂ ‘ಅಯೋಗ್ಯ’ ಹೊಸದೊಂದು ವಿಚಾರವನ್ನು ಹಂಚಿಕೊಂಡಿದೆ.

ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ ‘ಅಯೋಗ್ಯ 2’ ಚಿತ್ರದ ಆಡಿಯೋ ಹಕ್ಕನ್ನು ರೂ.2 ಕೋಟಿ ಕೊಟ್ಟು ಆನಂದ್‌ ಆಡಿಯೋ ಖರೀದಿಸಿದೆ. ಈ ಸುದ್ದಿಯನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಆಡಿಯೋ ಮಾರಾಟವಾಗಿದ್ದ ಸುದ್ದಿ ಹಂಚಿಕೊಳ್ಳಲು ವಿಶೇಷ ವೀಡಿಯೋ ಬಿಡುಗಡೆ ಮಾಡಿದೆ.
 

 

ಆಡಿಯೋ ಹಕ್ಕಿಗೆ ಭರ್ಜರಿ ಬೆಲೆ

ಮೊದಲ ಭಾಗ ‘ಅಯೋಗ್ಯ’ ಚಿತ್ರದ ಆಡಿಯೋ ಹಕ್ಕು ರೂ.9 ಲಕ್ಷಕ್ಕೆ ಮಾರಾಟವಾಗಿತ್ತು ಎಂದು ಮಹೇಶ್ ತಿಳಿಸಿದ್ದು, ಎರಡನೇ ಭಾಗದ ಆಡಿಯೋ ಹಕ್ಕಿಗೆ ಭರ್ಜರಿ ಬೆಲೆ ದೊರಕಿದೆ. ಅಯೋಗ್ಯ ಮೊದಲ ಭಾಗ ಎಲ್ಲಿಗೆ ಮುಗಿದಿತ್ತೋ, ಅದರ ಮರುದಿನದಿಂದ ಚಿತ್ರ ಶುರುವಾಗುತ್ತದೆ. ಎರಡ್ಮೂರು ಹೊಸ ಪಾತ್ರಗಳು ಬರುತ್ತವೆ ಎನ್ನುವುದು ಬಿಟ್ಟರೆ, ಮಿಕ್ಕಂತೆ ಎಲ್ಲಾ ಪಾತ್ರಗಳು ಮುಂದುವರಿಯುತ್ತವೆ.

‘ಅಯೋಗ್ಯ’ ಕೊನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನಾಗುವ ಸಿದ್ಧೇಗೌಡ ಮುಂದೆ ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾನೆ ಎನ್ನುವುದು ಚಿತ್ರದ ಕಥೆ" ಎಂದು ಕಥೆಯ ಗುಟ್ಟನ್ನು ಬಿಡುಕೊಡುತ್ತಾರೆ ನಿರ್ದೇಶಕ ಮಹೇಶ್ ಕುಮಾರ್. ಇನ್ನು ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರವನ್ನು ಎಂ.ಮುನೇಗೌಡ ನಿರ್ಮಿಸಿದ್ದಾರೆ. ಸುಂದರ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಅರುಣಾ ಬಾಲರಾಜ್, ಮಂಜು ಪಾವಗಡ ತಾರಾಗಣದಲ್ಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಚೆ ಬಂದಾಗ ಮೋನಿಷಾ ಮಗಳು, ಸೆಟ್‌ನಲ್ಲಿ ಅವಳು ನಟಿಯಷ್ಟೇ: ದುನಿಯಾ ವಿಜಯ್‌ ಮಾತು ವೈರಲ್
ರಶ್ಮಿಕಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ‘Su From So’ ನಟ ಜೆಪಿ ತುಮಿನಾಡು