
2025ರ ಆಗಸ್ಟ್ 14ರಂದು ಚಿತ್ರದುರ್ಗ ರೇಣುಕಾಸ್ವಾಮಿ ಅವೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಜಾಮೀನನ್ನು ರದ್ದುಗೊಳಿಸಿತ್ತು. ಆದರೆ ವಿಚಾರಣೆ ಮುಗಿದಿಲ್ಲ, ದರ್ಶನ್‌ಗೆ ರಿಲೀಫ್ ಇಲ್ಲದಂತಾಗಿದೆ. ಈಗ ಎಂಟು ತಿಂಗಳು ಕಳೆದರೂ ಕೂಡ ಸಾಕ್ಷಿಗಳ ವಿಚಾರಣೆ ಆಗಿಲ್ಲ. ಹೀಗಾಗಿ ದರ್ಶನ್ ಅವರಿಗೆ ಜಾಮೀನು ಸಿಗಬೇಕು ಎಂದು ದರ್ಶನ್ ಪರ ವಕೀಲರು ಸುಪ್ರೀಂಕೋರ್ಟ್‌ಗೆ ಹೊಸ ರಿಟ್ ಅರ್ಜಿ ಸಲ್ಲಿಸಿದ್ದರು.
ಎಂಟು ತಿಂಗಳು ಕಳೆದರೂ ಕೂಡ ಈ ಸಾಕ್ಷಿಗಳ ವಿಚಾರಣೆ ಮುಕ್ತಾಯವಾಗಿಲ್ಲ. 273 ಸಾಕ್ಷಿಗಳ ಪೈಕಿ ಕೇವಲ 15 ಸಾಕ್ಷಿಗಳ ವಿಚಾರಣೆಯಷ್ಟೇ ಆಗಿದೆ. ಇದೇ ರೀತಿಯಾದರೆ ವಿಚಾರಣೆ ಮುಗಿಯಲು ಅನೇಕ ವರ್ಷಗಳೇ ಬೇಕು. ದರ್ಶನ್‌ಗೆ ಜಾಮೀನು ಮಂಜೂರು ಮಾಡಿ ಎಂದು ದರ್ಶನ್ ಪರ ವಕೀಲರು ಅರ್ಜಿಯಲ್ಲಿ ಹೇಳಿದ್ದಾರೆ. ನ್ಯಾಯಮೂರ್ತಿ ಪರ್ದೀವಾಲ ನೇತೃತ್ವದ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ.
ಕನಿಷ್ಟ ಸೌಲಭ್ಯಗಳೂ ದರ್ಶನ್‌ಗೆ ಸಿಗ್ತಿಲ್ಲ, ಕ್ವಾರೆಂಟೇನ್ ಸೆಲ್ನಲ್ಲಿ ಇಡಲಾಗಿದೆ... ಕನಿಷ್ಟ ಸೌಲಭ್ಯಗಳ ಕುರಿತು ಕೋರ್ಟ್‌ಗೆ ಹೋದ್ರೆ, ಸುಪ್ರೀ ಕೋರ್ಟ್‌ನಲ್ಲಿ ಆದೇಶ ಆಗಿದೆ ಎಂದು ಸೆಷನ್ಸ್ ಕೋರ್ಟ್ ಹೇಳಿದೆ ಎಂದು ದರ್ಶನ್ ಪರ ವಕೀಲರಿಂದ ವಾದ ಮಂಡನೆಯಾಗಿದೆ.
ಸೆಷನ್ಸ್ ಕೋರ್ಟ್ನಿಂದ ವರದಿ ಕೇಳಿದ ಸುಪ್ರೀಂ ಕೋರ್ಟ್, “ಎಷ್ಟು ಸಾಕ್ಷಿಗಳ ವಿಚಾರಣೆ ಈವರೆಗೆ ನಡೆದಿದೆ..? ... ಎಷ್ಟು ಸಾಕ್ಷಿಗಳನ್ನು ವಿಚಾರಣೆಗಾಗಿ ಪ್ರಾಸಿಕ್ಯೂಷನ್ ಸೂಚಿಸಿದೆ.? ... ಟ್ರಯಲ್ ಮುಗಿಯಲು ಎಷ್ಟು ದಿನ ಬೇಕಾಗುತ್ತದೆ..? ದರ್ಶನ್‌ಗೆ ಕನಿಷ್ಟ ಸೌಲಭ್ಯ ನೀಡಲಾಗುತಿದೆಯೇ.? ಇಲ್ಲವೆ? ಎಂದು ಒಂದು ವಾರದಲ್ಲಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಸೆಷನ್ಸ್ ಕೋರ್ಟ್ನಿಂದ ಸುಪ್ರೀಂ ಕೋರ್ಟ್ ವರದಿ ಕೇಳಿದೆ. ವರದಿ ಸಲ್ಲಿಕೆ ಬಳಿಕ ಮುಂದಿನ ವಿಚಾರಣೆ ದಿನಾಂಕ ನೀಡುವುದಾಗಿ ತಿಳಿಸಿದ ಸುಪ್ರೀಂ ಕೋರ್ಟ್ ಹೇಳಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.