
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು (Sarkari Hiriya Prathamika Shale Kasaragod) ಸಿನಿಮಾ ನಿಮಗೆ ನೆನೆಪಿರಬೇಕು ಅಲ್ವಾ? ರಿಷಭ್ ಶೆಟ್ಟಿ (Rishabh Shetty) ನಿರ್ದೇಶನ ಮಾಡಿದಂತಹ ಗಡಿನಾಡಿನಲ್ಲಿ ಕನ್ನಡದ ಪಾಡು ಹೇಗಿದೆ ಅನ್ನೋದನ್ನು ತಿಳಿಸುವ ಸಿನಿಮಾ ಇದಾಗಿತ್ತು. ಈ ಸಿನಿಮಾದ ಮುಖ್ಯವಾದ ಹೈ ಲೈಟ್ ಅಂದ್ರೆ ದಡ್ಡ ಪ್ರವೀಣನ ಮುದ್ದಾದ ಲವ್ ಸ್ಟೋರಿ. ಫೈಲ್ ಆಗಿ ಆಗಿ ಏಳನೇ ತರಗತಿಯಲ್ಲಿ ಉಳಿದಿರುವ ದಡ್ಡ ಪ್ರವೀಣನಿಗೆ, ಆತನ ತರಗತಿಯ ಬಾಲೆ ಪಲ್ಲವಿ ಮೇಲೆ ಕ್ರಶ್. ಇವರಿಬ್ಬರ ದೃಶ್ಯ, ಅರೆರೆ ಅವಳ ನಗುವ ನೋಡಿ ಮರೆತೆ ಜಗವ ಹಾಡು ಸಖತ್ ಫೇಮಸ್ ಆಗಿತ್ತು. ಈ ಹಾಡನ್ನು ಪ್ರವೀಣ ಮತ್ತು ಪಲ್ಲವಿ (Praveen and Pallavi) ಕಾಂಬಿನೇಶನ್ ನನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಸದ್ಯ ಇಬ್ಬರು ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಮತ್ತೆ ಜೋಡಿಯಾದ ಸರ್ಕಾರಿ ಹಿ.ಪ್ರಾ ಶಾಲೆಯ ದಡ್ಡ ಪ್ರವೀಣ -ಪಲ್ಲವಿ, ನೋಡ ನೋಡ ಎಂಥ ಚಂದ ಅಲಾ! ಎಂದ ಫ್ಯಾನ್ಸ್
ಅಷ್ಟಕ್ಕೂ ಈಗ ಪಲ್ಲವಿ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ? ಪಲ್ಲವಿ ಪಾತ್ರದಲ್ಲಿ ಮಿಂಚಿದ ಬಾಲ ನಟಿ ಸಪ್ತಾ ಪಾವೂರು (Saptha Pavoor) ಈಗ ಬಾಲೆಯಾಗಿ ಉಳಿದಿಲ್ಲ, ಆಕೆಯೂ ಬೆಳೆದು ದೊಡ್ಡವಳಾಗಿದ್ದು, ಇದೀಗ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗೋದಕ್ಕೆ ರೆಡಿಯಾಗಿದ್ದಾರೆ. ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ಸಪ್ತ ಪಾವೂರ್, ಹೊಸ ಹೊಸ ವಿಡೀಯೋಗಳ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಇದೀಗ ಸಪ್ತಾ ಸೀರೆಯುಟ್ಟಿರುವ ಹೊಸ ವಿಡಿಯೋ ಶೇರ್ ಮಾಡಿದ್ದು, ಇದನ್ನ ನೋಡಿದ್ರೆ ಇವರು ಸದ್ಯದಲ್ಲೇ ಹೀರೋಯಿನ್ ಆಗ್ತಿದ್ದಾರೆ ಏನೋ ಅನಿಸ್ತಿದೆ.
'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಬಳಿಕ ಎಲ್ಲೋಗಿದ್ರಿ? ಇಂಟ್ರಸ್ಟಿಂಗ್ ವಿಚಾರ ಬಿಚ್ಚಿಟ್ಟ 'ತನುಜಾ' ನಟಿ ಸಪ್ತಾ
ಸಪ್ತ ಪಾವೂರ್ ಕಳೆದ ವರ್ಷವಷ್ಟೇ ಪಿಯುಸಿ ಶಿಕ್ಷಣ ಮುಗಿಸಿದ್ದರು, ಸಯನ್ಸ್ (PCMB ) ನಲ್ಲಿ 92% ಪಡೆದು, ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಕೂಡ ಆಗಿದ್ದರು. ಸಪ್ತ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತನುಜಾ ಎನ್ನುವ ಸಿನಿಮಾದಲ್ಲಿ ರಾಜೇಶ್ ನಟರಂಗ, ವಿಶ್ವೇಶ್ವರ್ ಭಟ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು. ಈ ಸಿನಿಮಾ ಚಿತ್ತಾರ ಸ್ಟಾರ್ ಅವಾರ್ಡ್ (Chittara Star Award) ಕೂಡ ಪಡೆದಿತ್ತು. ಇನ್ನು ಶಿವರಾಜ್ ಕುಮಾರ್ ಜೊತೆ ಬೈರಾಗಿ ಸಿನಿಮಾದಲ್ಲೂ ನಟಿಸಿದ್ದರು. ಅಲ್ಲದೇ ಚೆಲ್ಲಾಪಿಲ್ಲಿ, ದ್ವೈತ, ರಿಕ್ಷಾ ಡ್ರೈವರ್ ಸಿನಿಮಾದಲ್ಲೂ ಸಪ್ತ ನಟಿಸಿದ್ದರು. ಈ ಎಲ್ಲಾ ಸಿನಿಮಾಗಳಲ್ಲಿ ಬಾಲನಟಿ, ಟೀನೇಜ್ ಹುಡುಗಿಯಾಗಿ ನಟಿಸಿದ್ದರು ಅಷ್ಟೇ. ಈಗ ಸಪ್ತ ಕೂಡ ಬದಲಾಗಿದ್ದು, ಮುಂದಿನ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವ ಸಾಧ್ಯತೆಯೂ ಇದೆ. ಅವರು ಶೇರ್ ಮಾಡಿರೋ ವಿಡಿಯೋ ನೋಡಿದ್ರೆ, ಮುಂದೊಂದು ದಿನ ಖಂಡಿತವಾಗಿಯೂ ಸಪ್ತ ಚಂದನವನದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ ಅನಿಸುತ್ತೆ. ಈ ವಿಡೀಯೋ ನೋಡಿ ಅಭಿಮಾನಿಗಳು ಪ್ರವೀಣ ಎಲ್ಲಿ? ಇವರು ಅವರೇನಾ? ಪ್ರವೀಣ ಇಲ್ಲಿ ನೋಡೋ ಪಲ್ಲವಿ, ಎಷ್ಟು ಚಂದ ಅಲ್ಲಾ ಎಂದು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.