'ರಾಜ್‌ ಲೀಲಾ ವಿನೋದ' ಬಗ್ಗೆ ನೇರವಾಗಿ ಶಿವಣ್ಣಗೇ ಪ್ರಶ್ನೆ: ಸಿಕ್ಕ ಉತ್ತರವೇ ಅಂತಿಮ ಸತ್ಯ, ದೂಸ್ರಾ ಮಾತಿಲ್ಲ!

Published : Feb 24, 2025, 12:57 PM ISTUpdated : Feb 24, 2025, 02:55 PM IST
'ರಾಜ್‌ ಲೀಲಾ ವಿನೋದ' ಬಗ್ಗೆ ನೇರವಾಗಿ ಶಿವಣ್ಣಗೇ ಪ್ರಶ್ನೆ: ಸಿಕ್ಕ ಉತ್ತರವೇ ಅಂತಿಮ ಸತ್ಯ, ದೂಸ್ರಾ ಮಾತಿಲ್ಲ!

ಸಾರಾಂಶ

ಅಭಿಮಾನಿಗಳು ಅಂತ ಅವರಿವರು ಮಾತನ್ನಾಡಿ ಅನಾವಶ್ಯಕ ಗೊಂದಲ ಸೃಷ್ಟಿಸಿದ್ದರು. ಆದರೆ, ಅದಕ್ಕೆ ಸಂಬಂಧಪಟ್ಟವರು ಮಾತ್ರ ತುಟಿ ಬಿಚ್ಚಿರಲಿಲ್ಲ. ಆದರೆ, ಶ್ರೀಕಂಠ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ನೇರವಾಗಿ ಇದನ್ನು ಶಿವರಾಜ್‌ಕುಮಾರ್ ಅವರಿಗೇ ಕೇಳಿದ್ದಾರೆ. ಅಲ್ಲಿದ್ದವರೆಲ್ಲಾ ಒಂದು ಕ್ಷಣ.. 

'ರಾಜ್ ಲೀಲಾ ವಿನೋದ' ಪುಸ್ತಕ ಹುಟ್ಟುಹಾಕಿದ್ದ ವಿವಾದ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತಿದೆ. ಪತ್ರಕರ್ತ ಹಾಗೂ ಸಾಹಿತಿ ರವಿ ಬೆಳಗೆರೆ (Ravi Belagere) ಅವರು ಬರೆದ ಈ 'ರಾಜ್ ಲೀಲಾ ವಿನೋದ' ಪುಸ್ತಕ ಹೊರಬಂದ ಆ ಸಮಯದಲ್ಲಿ ಬಹಳಷ್ಟು ಜನರು ಈ ಬಗ್ಗೆ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದರು. ಆ ಬಗ್ಗೆ ಪರ ಹಾಗು ವಿರೋಧದ ಧ್ವನಿ ಹೊರಟು ಇಡೀ ಕರ್ನಾಟಕವೇ ಆ ಬಗ್ಗೆ ಮಾತನ್ನಾಡುವಂತೆ ಆಗಿತ್ತು.  ಡಾ ರಾಜ್‌ಕುಮಾರ್ (Dr Rajkumar) ಹಾಗೂ ನಟಿ ಲೀಲಾವತಿ (Leelavathi) ಅವರಿಬ್ಬರ ಸಂಬಂಧದ ಗೊತ್ತಿದ್ದಿದ್ದು ಗೊತ್ತಿಲ್ಲದ್ದು ಎಲ್ಲವನ್ನೂ ಹೇಳಿ ಗೊಂದಲ ಸೃಷ್ಟಿಸಿದರು. 

ಅವರ ಅಭಿಮಾನಿಗಳು ಇವರ ಅಭಿಮಾನಿಗಳು ಅಂತ ಅವರಿವರು ಮಾತನ್ನಾಡಿ ಅನಾವಶ್ಯಕ ಗೊಂದಲ ಸೃಷ್ಟಿಸಿದ್ದರು. ಆದರೆ, ಅದಕ್ಕೆ ಸಂಬಂಧಪಟ್ಟವರು ಮಾತ್ರ ತುಟಿ ಬಿಚ್ಚಿರಲಿಲ್ಲ. ಆದರೆ, ಶ್ರೀಕಂಠ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ನೇರವಾಗಿ ಇದನ್ನು ಶಿವರಾಜ್‌ಕುಮಾರ್ ಅವರಿಗೇ ಕೇಳಿದ್ದಾರೆ. ಅಲ್ಲಿದ್ದವರೆಲ್ಲಾ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ. ಆದರೆ, ಕನ್ನಡದ ನಟ ಹಾಗೂ ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್‌ಕುಮಾರ್ ಮಾತ್ರ ಶಾಂತವಾಗಿ ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ಹಾಗಿದ್ರೆ ಶಿವಣ್ಣ ಅವರು ಆ ವಿವಾದಾತ್ಮಕ ಪ್ರಶ್ನೆಗೆ ಏನಂದ್ರು? ಸಹಜ ಕುತೂಹಲಕ್ಕೆ ಇಲ್ಲಿದೆ ಉತ್ತರ.. 

ನಾನು ಸಿನಿಮಾ ಶೂಟಿಂಗ್‌ ಮಾಡೋದು ಬೇಡ್ವಾ? ಶಿವಣ್ಣ ಕೋಪಕ್ಕೆ 'ಗಡಗಡ' ಆಗೋದ್ರಾ?

'ನನಗೆ ಆ ಬಗ್ಗೆ ಏನೂ ಗೊತ್ತಿಲ್ಲ. ಗೊತ್ತಿದ್ದರೆ ನಾನು ಮಾತನಾಡಬಹುದಿತ್ತು. ಗೊತ್ತಿಲ್ಲದ ಸಂಗತಿಯನ್ನು ನಾನು ಹೇಗೆ ಮಾತನ್ನಾಡುವುದುಕ್ಕೆ ಆಗುತ್ತೆ.. ? ನನಗೆ ನಿಜವಾಗಿಯೂ ಆ ಬಗ್ಗೆ ಗೊತ್ತಿಲ್ಲ. ಲೀಲಾವತಿಯವರು ಕಂಡಾಗ, ನಮ್ಮನೆಗೆ ಬಂದಾಗ ನಾವು ಅವರ ಕಾಲಿಗೆ ಬಿದ್ದ ನಮಸ್ಕರಿಸಿ ಆಶೀರ್ವಾದ ತಗೋತೀವಿ. ಅವರಿಗೆ ಗೌರವ ಕೊಡ್ತೀವಿ..ಅದು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ನಮ್ಮಪ್ಪ ಅಮ್ಮ ಕೂಡ ಆ ಬಗ್ಗೆ ನಮಗೆ ಏನೂ ಹೇಳಿಲ್ಲ, ಆ ಬಗ್ಗೆ ಯಾವತ್ತೂ ಮಾತಾಡಿಲ್ಲ.. ನೀವು ಕೇಳಿದ್ರೆ ನಾನು ಏನ್ ಹೇಳ್ಲಿ' ಅಂದಿದ್ದರು ಶಿವಣ್ಣ. 

ಹೌದು, ಡಾ ರಾಜ್‌ಕುಮಾರ್ ಹಾಗು ನಟಿ ಲೀಲಾವತಿ ಸಂಬಂಧದ ಬಗ್ಗೆ ಸಾವಿರ ಜನರು ಸಾವಿರ ಮಾತನಾಡುತ್ತಾರೆ. ಆದರೆ, ಆ ಬಗ್ಗೆ ಬದುಕಿದ್ದಾಗ ಡಾ ರಾಜ್‌ಕುಮಾರ್ ಆಗಲೀ ಅಥವಾ ಲೀಲಾವರಿ ಆಗಲೀ ಯಾವತ್ತೂ ಸ್ಪಷ್ಟೀಕರಣ ಕೊಟ್ಟೇ ಇಲ್ಲ. ಹೀಗಿರುವಾ ಅದು ಶಿವರಾಜ್‌ಕುಮಾರ್ ಆಗಲೀ ಅಥವಾ ಬೇರೆ ಯಾರೇ ಆಗಲಿ ಏನಂತ ಹೇಳಬಹುದು. ಡಾ ರಾಜ್‌-ಲೀಲಾವತಿ ಸಂಬಂಧ ಅವರಿಬ್ಬರಿಗೇ ಗೊತ್ತು. ಬೇರೆಯವರು ಆ ಬಗ್ಗೆ ಕಲ್ಪನೆ ಮಾಡಿಕೊಂಡು ಹೇಳಬಹುದು. ಅಥವಾ ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿಕೊಂಡು ಹೇಳಬಹುದು ಅಷ್ಟೇ. 

ಹೆಚ್‌ಡಿ ಕುಮಾರಸ್ವಾಮಿ ಮಾತು ಭಾರೀ ವೈರಲ್, ಅಣ್ಣಾವ್ರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೇಳಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?