ವಿನೋದ್ ಪ್ರಭಾಕರ್ 'ಬಲರಾಮನ ದಿನಗಳು' ಚಿತ್ರಕ್ಕೆ ಬಂದ ಕಬಾಲಿ ಮಾಂತ್ರಿಕ ಸಂತೋಷ್ ನಾರಾಯಣನ್!

By Shriram Bhat  |  First Published Aug 30, 2024, 4:41 PM IST

ವಿನೋದ್ ಪ್ರಭಾಕರ್ ನಟನೆಯ 25ನೇ ಚಿತ್ರವಾಗಿರುವ 'ಬಲರಾಮನ ದಿನಗಳು' ವಿಶೇಷ ಚಿತ್ರವಾಗಲಿದೆ. ಅಂದರೆ, ಸ್ಯಾಂಡಲ್‌ವುಡ್ ನಟರೊಬ್ಬರ 25ನೇ ಚಿತ್ರವಾಗಿರುವ ಕಾರಣಕ್ಕೆ ಈ ಚಿತ್ರ ವಿಶೇಷ ಎನಿಸಲಿದ್ದು, ಅದನ್ನು ಕೆಎಂ ಚೈತನ್ಯ ಅವರು ಹೆಚ್ಚಿನ ಮುತುವರ್ಜಿ ವಹಿಸಿ..


ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್ (Rajinikanth) ಅಭಿನಯದ 'ಕಬಾಲಿ' ಹಾಗು ಪ್ರಭಾಸ್ ನಟನೆಯ 'ಕಲ್ಕಿ 2898AD' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದವರು ಸಂತೋಷ್ ನಾರಾಯಣನ್. ಇದೀಗ ಕೆಎಂ ಚೈತನ್ಯ ನಿರ್ದೇಶನ, ವಿನೋದ್ ಪ್ರಭಾಕರ್ ನಟನೆಯ 'ಬಲರಾಮನ ದಿನಗಳು' ಚಿತ್ರಕ್ಕೆ ಅವರೇ ಸಂಗೀತ ನೀಡಲಿದ್ದಾರೆ. ಈ ಮೂಲಕ ಕಬಾಲಿ, ಕಲ್ಕಿ ಮ್ಯೂಸಿಕ್ ಡೈರೆಕ್ಟರ್ ಕನ್ನಡಕ್ಕೆ ಕಾಲಿಟ್ಟಂತಾಗಿದೆ. 

ಹೌದು, ವಿನೋದ್ ಪ್ರಭಾಕರ್ ನಟನೆಯ 25ನೇ ಚಿತ್ರವಾಗಿರುವ 'ಬಲರಾಮನ ದಿನಗಳು' (Balaramana Dinagalu) ವಿಶೇಷ ಚಿತ್ರವಾಗಲಿದೆ. ಅಂದರೆ, ಸ್ಯಾಂಡಲ್‌ವುಡ್ ನಟರೊಬ್ಬರ 25ನೇ ಚಿತ್ರವಾಗಿರುವ ಕಾರಣಕ್ಕೆ ಈ ಚಿತ್ರ ವಿಶೇಷ ಎನಿಸಲಿದ್ದು, ಅದನ್ನು ಕೆಎಂ ಚೈತನ್ಯ ಅವರು ಹೆಚ್ಚಿನ ಮುತುವರ್ಜಿ ವಹಿಸಿ ಮಾಡುತ್ತಿದ್ದಾರೆ. ಬಜೆಟ್, ಮೇಕಿಂಗ್ ಹಾಗು ಕಥೆಯಲ್ಲಿ ಹೊಸತನ ಇರಲಿದೆ ಎನ್ನಲಾಗಿದೆ. ಜೊತೆಗೆ, ಬಿಗ್ ಬಜೆಟ್ ಚಿತ್ರಗಳ ಸಂಗೀತ ನಿರ್ದೇಶಕರನ್ನೂ ಸಹ ಈ ಚಿತ್ರಕ್ಕೆ ಕರೆತರುವ ಮೂಲಕ ಹೆಚ್ಚಿನ ಕುತೂಹಲ ಸೃಷ್ಟಿಯಾಗಿದೆ. 

Latest Videos

ಧ್ಯಾನ್-ರಮ್ಯಾ 'ಅಮೃತಧಾರೆ'ಯಲ್ಲಿ ನಟಿಸಲು ಬಿಗ್ ಅಮಿತಾಭ್ ಬಚ್ಚನ್ ಹಾಕಿದ್ದ ಕಂಡೀಷನ್ ಏನಿತ್ತು?

ಇಂದು, 30 ಆಗಸ್ಟ್ 2024ರಂದು ದರ್ಶನ್ ನಟನೆಯ 'ಕರಿಯ' ಚಿತ್ರವು ರೀ-ರಿಲೀಸ್ ಆಗಿದೆ. ಅದನ್ನು ನೋಡಲು ಕನ್ನಡದ ನಟ ಹಾಗು ದರ್ಶನ್ ಸ್ನೇಹಿತ ವಿನೋದ್ ಪ್ರಭಾಕರ್ ಅವರು ಪ್ರಸನ್ನ ಥಿಯೇಟರ್‌ಗೆ ಹೋಗಿದ್ದಾರೆ. ಅಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ನಟ ವಿನೋದ್ ಪ್ರಭಾಕರ್ ಅವರು 'ಖಂಡಿತಾ ಒಂದು ಮಾತು ಹೇಳೋಕೆ ನಾನು ಇಷ್ಟ ಪಡ್ತಿನಿ, ಚೆನ್ನಾಗಿದ್ದಾಗ ಮಾತ್ರ ಜೊತೆಲಿ ಇರೋದು ಎಂತಾ ಫ್ರೆಂಡ್‌ಶಿಪ್..?' ಎಂದಿದ್ದಾರೆ. 

ಸದ್ಯ ತಾವು ಮರುಬಿಡುಗಡೆ ಆಗಿರುವ ದರ್ಶನ್ ಸಿನಿಮಾ ಕರಿಯ ನೋಡಲು ಬಂದಿದ್ದೇನೆ ಎಂದಿರುವ ವಿನೋದ್, ಈ ಮೊದಲು ಕೂಡ ತಾವು ದರ್ಶನ್ ಬಿಡುಗಡೆಯ ಕ್ರಾಂತಿ, ಕಾಟೇರ ಸೇರಿದಂತೆ ಎಲ್ಲ ಸಿನಿಮಾಗಳನ್ನು ಮೊದಲ ದಿನವೇ ಮೊದಲ ಶೋ ನೋಡಿದ್ದಾಗಿಯೂ ಹೇಳಿಕೊಂಡಿದ್ದಾರೆ. ಈ ಮೂಲಕ, ಎಂತಹ ಪರಿಸ್ಥಿತಿಯಲ್ಲೂ ತಾವು ದರ್ಶನ್ ಪರ ಇರುವೆ ಎಂಬ ಸಂದೇಶವನ್ನು ನಟ ವಿನೋದ್ ಪ್ರಭಾಕರ್ ನೀಡಿದ್ದಾರೆ ಎನ್ನಬಹುದು. 

ದರ್ಶನ್ ಫ್ಯಾನ್ಸ್ ಜತೆ 'ಕರಿಯ' ನೋಡಲು ಬಂದ ನಟ ವಿನೋದ್ ಪ್ರಭಾಕರ್ ಹೇಳಿದ್ದೇನು..?

ಅಂದಹಾಗೆ, ಈಗ ಕನ್ನಡ ಸಿನಿಮಾ ಉದ್ಯಮದ ಕಾಲ ಮೊದಲಿನಂತೆ ಇಲ್ಲ. ಮೊದಲೆಲ್ಲ ಕನ್ನಡ ಸಿನಿಮಾ, ಸೌತ್ ಸಿನಿಮಾ, ಬಾಲಿವುಡ್ ಸಿನಿಮಾ ಎಂಬ ಭೇದಭಾವ ಇತ್ತು. ಆದರೆ ಈಗ ಆ ಬಾರ್ಡರ್‌ಲೈನ್ ಅಳಿಸಿಹೋಗಿದೆ. ಇಂದು ಭಾರತದ ಇಡೀ ಸಿನಿಮಾ ಉದ್ಯಮ ಒಂದು ಎಂಬಂತಾಗಿದೆ. ಎಲ್ಲಾ ಭಾಷೆಯ ನಟನಟಿಯರು, ತಂತ್ರಜ್ಞರು ಪರಭಾಷೆಗಳ ಸಿನಿಮಾಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಈಗ ಇದಕ್ಕೊಂದು ಉದಾಹರಣೆ ಸಂತೋಷ್ ನಾರಾಯಣನ್. 

 

 

click me!