ಧ್ಯಾನ್-ರಮ್ಯಾ 'ಅಮೃತಧಾರೆ'ಯಲ್ಲಿ ನಟಿಸಲು ಬಿಗ್ ಅಮಿತಾಭ್ ಬಚ್ಚನ್ ಹಾಕಿದ್ದ ಕಂಡೀಷನ್ ಏನಿತ್ತು?

By Shriram Bhat  |  First Published Aug 30, 2024, 2:55 PM IST

ಅಮಿತಾಭ್ ಬಚ್ಚನ್‌ ಅವರ ದುಬಾರಿ ಸಂಭಾವನೆ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಅವರು ತಲೆ ಕೆಡಿಸಿಕೊಂಡಿದ್ದರಂತೆ. ನಿರ್ಮಾಪಕರಿಗೆ ಅದು ಹೊರೆಯಾಗಿ ಬಿಡಬಹುದು ಎಂಬ ಅಳುಕು ಅವರನ್ನು ಕಾಡಿತ್ತಂತೆ. ಆದರೆ, ಬಾಲಿವುಡ್ ನಟ ಅಮಿತಾಭ್ ಬಚ್ಚನ್..


ಘಟಾನುಘಟಿ ನಟನಟಿಯರನ್ನು ಕನ್ನಡ ಸಿನಿಮಾರಂಗಕ್ಕೆ ಪರಿಚಯ ಮಾಡಿಸುವುದು, ಅವರನ್ನು ಒಪ್ಪಿಸುವುದು ಎರಡು ದಶಕಗಳ ಹಿಂದೆ ಸಣ್ಣ ಕೆಲಸವೇನೂ ಆಗಿರಲಿಲ್ಲ. ಅದಕ್ಕೊಂದು ಧೈರ್ಯ ಬೇಕು, ಪ್ರಾವಿಣ್ಯತೆ ಬೇಕು. ಆ ರೀತಿಯ ಒಂದು ಮ್ಯೂಚ್ಯುವಲ್ ಅಂಡರ್‌ಸ್ಟ್ಯಾಡಿಂಗ್ ಎರಡೂ ಕಡೆಯವರಲ್ಲಿ ಸೃಷ್ಟಿಯಾಗಬೇಕು. ಅಂಥ ನೈಪುಣ್ಯತೆ ಇರೋ ನಿರ್ದೇಶಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekhar) ಸಹಾ ಒಬ್ಬರು. ಅವರು ತಮ್ಮ ಅಮೃತಧಾರೆ (Amruthadhare) ಸಿನಿಮಾದಲ್ಲಿ ಆ ಧೈರ್ಯ ತೋರಿದ್ದರು. 

ಹೌದು, ನಾಗತಿಹಳ್ಳಿ ನಿರ್ದೇಶಕನದ ಅಮೃತಧಾರೆ ಸಿನಿಮಾದಲ್ಲಿ ಧ್ಯಾನ್ ಹಾಗು ರಮ್ಯಾ ಜೋಡಿ ಜೊತೆ ಬಾಲಿವುಡ್ ಮೇರು ನಟ ಅಮಿತಾಭ್ ಬಚ್ಚನ್ ಕೂಡ ನಟಿಸಿದ್ದಾರೆ. ಈ ಚಿತ್ರದ ಹಾಡುಗಳನ್ನು ಹಿಮಾಲಯ ಸೇರಿದಂತೆ ಹಲವು ಅಪರೂಪ ಎನ್ನಿಸುವ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡಿರುವ ನಟ ಅಮಿತಾಭ್ ಬಚ್ಚನ್ ಅವರನ್ನು ತುಂಬಾ ಗೌರವಪೂರ್ವಕ ಪಾತ್ರದಲ್ಲಿ ತೋರಿಸಿದ್ದಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. 

Tap to resize

Latest Videos

ದರ್ಶನ್ ಫ್ಯಾನ್ಸ್ ಜತೆ 'ಕರಿಯ' ನೋಡಲು ಬಂದ ನಟ ವಿನೋದ್ ಪ್ರಭಾಕರ್ ಹೇಳಿದ್ದೇನು..?

ಹೌದು, ನಟ ಅಮಿತಾಭ್ ಬಚ್ಚನ್ ಅವರನ್ನು ತಮ್ಮ ರೋಲ್ ಮಾಡೆಲ್ ಅಂದುಕೊಂಡಿರುತ್ತಾರೆ ಅಮೃತಧಾರೆ ನಾಯಕಿ ರಮ್ಯಾ. ಅವರನ್ನು ಭೇಟಿಯಾಗಿ ಅವರೊಂದಿಗೆ ಮಾತುಕತೆ ಆಡುವುದು ಆ ಪಾತ್ರದ ಗುರಿ. ಅದನ್ನು ಅಷ್ಟೇ ಚೆನ್ನಾಗಿ ಚಿತ್ರೀಕರಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿ, ಜೊತೆಗೆ ಸ್ವತಃ ನಟ ಅಮಿತಾಭ್ ಬಚ್ಚನ್ ಅವರ ಗೌರವಾದರಗಳನ್ನೂ ಸಂಪಾದಿಸಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್. ಈ ಚಿತ್ರದಲ್ಲಿ ನಟಿಸಿದ್ದು ತಮಗೆ ತುಂಬಾ ಸಂತೋಷ ಕೊಟ್ಟಿದೆ ಎಂದು ನಟ ಅಮಿತಾಭ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಆದರೆ, ಈ ಚಿತ್ರದಲ್ಲಿ ನಟಿಸಲು ಅಮಿತಾಭ್ ಬಚ್ಚನ್‌ ಅವರ ದುಬಾರಿ ಸಂಭಾವನೆ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಅವರು ತಲೆ ಕೆಡಿಸಿಕೊಂಡಿದ್ದರಂತೆ. ನಿರ್ಮಾಪಕರಿಗೆ ಅದು ಹೊರೆಯಾಗಿ ಬಿಡಬಹುದು ಎಂಬ ಅಳುಕು ಅವರನ್ನು ಕಾಡಿತ್ತಂತೆ. ಆದರೆ, ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಕನ್ನಡದ ಈ ಚಿತ್ರದಲ್ಲಿ ನಟಿಸಲು ತಮಗೆ ಸಂಭಾವನೆ ಬೇಡ, ಆದರೆ ನನ್ನ ಮನವಿಗೆ ಓಕೆ ಅಂದ್ರೆ ಮಾತ್ರ ನಟಿಸಬಲ್ಲೆ ಎಂದಿದ್ದರಂತೆ. 

ದರ್ಶನ್ 'ಕರಿಯ' ರೀ-ರಿಲೀಸ್, ಪ್ರಸನ್ನ ಮುಂದೆ ಬಾಡಿ ವೋರ್ನ್ ಕ್ಯಾಮೆರಾ ಪೊಲೀಸ್ ನಿಯೋಜನೆ!

ನಟ ಅಮಿತಾಭ್ ಬಚ್ಚನ್ ಅವರು ಅಮೃತಧಾರೆ ಚಿತ್ರದಲ್ಲಿ ನಟಿಸಲು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಹಾಗೆ ಒಂದು ಕಂಡೀಶನ್ ಹಾಕಿದ್ದರಂತೆ. ಅದೇನೆಂದರೆ, ನನಗೆ ಒಂದು ರೂಪಾಯಿ ಕೂಡ ಸಂಭಾವನೆ ಬೇಡ. ಆದರೆ, 'ನನ್ನ ಆರೋಗ್ಯ ಹಾಗು ಸುರಕ್ಷತೆ ದೃಷ್ಟಿಯಿಂದ ನೀವು ನನ್ನ ದೃಶ್ಯಗಳನ್ನು ಮುಂಬೈಗೇ ಬಂದು ಶೂಟ್ ಮಾಡಬೇಕು' ಎಂದಿದ್ದರಂತೆ. ಅದಕ್ಕೆ ಒಪ್ಪಿ ನಾಗತಿಹಳ್ಳಿ ಅವರು ನಟ ಅಮಿತಾಭ್ ಬಚ್ಚನ್ ಅವರ ಪೋರ್ಶನ್‌ಅನ್ನು ಮುಂಬೈನಲ್ಲೇ ಶೂಟ್ ಮಾಡಿದ್ದಾರೆ. 

click me!