ಮತ್ತೆ ಜೊತೆಯಾದ್ರಾ ಚಂದನ್‌ ಶೆಟ್ಟಿ-ನಿವೇದಿತಾ ಗೌಡ.. ಬಾರ್ಬಿ ಡಾಲ್‌-ಮ್ಯೂಸಿಕ್‌ ಕಿಂಗ್‌ ಮತ್ತೆ ಜೋಡಿಯಾಗಿದ್ದು ಹೇಗೆ?

By Santosh Naik  |  First Published Aug 30, 2024, 4:40 PM IST

ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಅಭಿನಯದ 'ಕ್ಯಾಂಡಿ ಕ್ರಶ್' ಚಿತ್ರದ ಹೆಸರನ್ನು 'ಮುದ್ದು ರಾಕ್ಷಸಿ' ಎಂದು ಬದಲಾಯಿಸಲಾಗಿದೆ. ಈ ಬದಲಾವಣೆಯ ಹಿಂದಿನ ಕಾರಣಗಳನ್ನು ಚಂದನ್‌ ಶೆಟ್ಟಿ ಬಹಿರಂಗಪಡಿಸಿದ್ದಾರೆ, ಆದರೆ ನಿವೇದಿತಾ ಗೌಡ ಅವರ ಪೋಸ್ಟ್ ಗೊಂದಲಕ್ಕೆ ಕಾರಣವಾಗಿದೆ.


ಬೆಂಗಳೂರು (ಆ.30): ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಈ ವರ್ಷ ವಿಚ್ಛೇದನ ಪಡೆದುಕೊಂಡ ಹೈವೋಲ್ಟೇಜ್‌ ಜೋಡಿ. ನಾಲ್ಕು ವರ್ಷದ ಮದುವೆಗೆ ಈ ವರ್ಷದ ಮಧ್ಯದದಲ್ಲಿ ಇಬ್ಬರೂ ವಿಚ್ಛೇದನ ಪಡೆದುಕೊಳ್ಳುವ ಮೂಲಕ ಕೊನೆ ಮಾಡಿದ್ದರು. ಆದರೆ, ಇಬ್ಬರೂ ವಿಚ್ಛೇದನ ಪಡೆದುಕೊಳ್ಳುವ ಮುನ್ನ ಕ್ಯಾಂಡಿಕ್ರಶ್‌ ಹೆಸರಿನ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಇದರ ಚಿತ್ರೀಕರಣ ಕೂಡ ಮುಗಿದು, ಬಿಡುಗಡೆಯಾಗುವ ಸನಿಹದಲ್ಲಿತ್ತು. ಈ ಹಂತದಲ್ಲಿ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಂಡಿದ್ದು ಸುದ್ದಿಯಾಗಿತ್ತು.  ಪುನೀತ್‌ ಶ್ರೀನಿವಾಸ್‌ ನಿರ್ದೇಶನ ಮಾಡಿದ್ದ ಚಿತ್ರ ಅಂದು ಬಿಡುಗಡೆ ಕಾಣುವುದು ಸೂಕ್ತವೂ ಆಗಿರಲಿಲ್ಲ. ಅಲ್ಲದೆ, ಚಿತ್ರದ ಕೆಲವು ಕೆಲಸಗಳು ಕೂಡ ಬಾಕಿ ಉಳಿದುಕೊಂಡಿದ್ದವು. ಈಗ ಸಿನಿಮಾ ತಂಡ ಚಿತ್ರದ ಹೆಸರನ್ನೇ ಬದಲಾವಣೆ ಮಾಡುವ ನಿರ್ಧಾರ ಮಾಡಿದೆ. ಕ್ಯಾಂಡಿಕ್ರಶ್‌ ಎನ್ನುವ ಬದಲಿಗೆ ಸಿನಿಮಾಗೆ 'ಮುದ್ದುರಾಕ್ಷಸಿ' ಎನ್ನುವ ಅಚ್ಚಗನ್ನಡದ ಹೆಸರನ್ನು ಇಟ್ಟಿದೆ. ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಕೂಡ ಸಿನಿಮಾದ ಪೋಸ್ಟರ್‌ಗಳನ್ನು ತಮ್ಮ ಸೋಶಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲಿ ಹಂಚಿಕೊಂಡಿದ್ದಾರೆ.

ಇದರಲ್ಲಿ ಚಂದನ್‌ ಶೆಟ್ಟಿ ಅತ್ಯಂತ ಸ್ಪಷ್ಟವಾಗಿ ಈ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ. 'ಚಿತ್ರಿಕರಣ ಮುಗಿಯುವ ಹಂತದಲ್ಲಿದ ನಮ್ಮ ಸಿನಿಮಾ “ಕ್ಯಾಂಡಿ ಕ್ರಶ್“ ಟೈಟಲ್ ಕಾರಣಾಂತರಗಳಿಂದ ಬದಲಾಯಿಸಿದ್ದು, ಸಿನಿಮಾ ತಂಡದವರು ಚಿತ್ರಕ್ಕೆ “ಮುದ್ದು ರಾಕ್ಷಸಿ” ಎಂದು ಮರುನಾಮಕರಣ ಮಾಡಿದ್ದಾರೆ..' ಎಂದು ಹೊಸ ಪೋಸ್ಟರ್‌ಅನ್ನು ಹಂಚಿಕೊಂಡಿದ್ದಾರೆ.

ಆದರೆ, ನಿವೇದಿತಾ ಗೌಡ ಹೊಸ ಹೆಸರಿನ ಪೋಸ್ಟರ್‌ನೊಂದಿಗೆ 'ಎಲ್ಲರಿಗೂ ಹಾಯ್‌...ನಿಮ್ಮ ಆಶೀರ್ವಾದ ನನಗೆ ಬೇಕಿದೆ..' ಎಂದು ಬರೆದುಕೊಂಡಿದ್ದಾರೆ. ಇದು ಗೊಂದಲಕ್ಕೆ ಕಾರಣವಾಗಿತ್ತು.
ನಿವೇದಿತಾ ಗೌಡ ಹಂಚಿಕೊಂಡ ಪೋಸ್ಟರ್‌ಗೆ ಬಂದಿರುವ ಕಾಮೆಂಟ್ಸ್‌ಗಳಲ್ಲಿ ಡಿವೋರ್ಸ್‌ ಆದರೂ ಜೊತೆಯಾಗಿ ಇಬ್ಬರೂ ಒಂದೇ ಫಿಲ್ಮ್‌ನಲ್ಲಿ ನಟಿಸುತ್ತಿದ್ದಾರೆ ಎಂದು ಫ್ಯಾನ್ಸ್‌ಗಳು ಅಂದುಕೊಂಡಿದ್ದರು.  'ಮೂವಿ ಹಿಟ್ ಆಗುತ್ತೆ ಅಂತ ಇವರೇನಾದ್ರೂ ಡಿವೋರ್ಸ್ ನಾಟಕ ಆಡ್ತಾ ಇದ್ದಾರಾ ಅಂತ..' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದರೆ, 'ಚಂದನ್‌ ಬೇಡ ಆದರೆ, ಚಂದನ್‌ ಜೊತೆ ಮೂವಿ ಮಾಡ್ತೀಯಾ..' ಎಂದು ಬರೆದಿದ್ದಾರೆ. ನಿಮ್ಮದು ಡಿವೋರ್ಸ್‌ ಅಂತಾ ಅನಿಸುತ್ತಲೇ ಇಲ್ಲ. ಯಾವುದೋ ಮೂವಿ ಪ್ರಮೋಷನ್‌ ಮಾಡೋಕೆ ನಾಟಕ ಮಾಡಿರುವ ರೀತಿ ಕಾಣ್ತಿದೆ ಎಂದಿದ್ದಾರೆ. 'ಚಂದನ್ ನಾಚಿಕೆ ಇಲ್ವಾ ಗುರು ನಿನಗೆ ಬೇಡ ಅಂತ ಬಿಟ್ಟ ಹೋದೊಳಗೆ ಮತ್ತೆ ಯಾಕ್ ಚಾನ್ಸ್ ಕೊಡ್ತೀಯಾ ಬೇರೆ ಯಾರು ಸಿಗಲ್ವ..'  'ಎನ್ರೋ ಬಂದಿದೆ ನಿಮಗೆ ದೊಡ್ಡ ರೋಗ. ಇದೆಲ್ಲ ಮಾಡೋ ಬದ್ಲು ಶೆಡ್ಡಿಗ್ ಹೋಗಿ ಜಗಳ ಬಗೆ ಹರ್ಸ್ಕೊಂಡು ಒಂದಾಗಿ ಬಾಳ್ವೆ ಮಾಡಿ' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

Tap to resize

Latest Videos

undefined

ನಿವೇದಿತಾ ಗೌಡ ನೀನು ಮುಖ ಮುಚ್ಚಿಕೊಳ್ಳದಿದ್ದರೂ, ಎದೆ ಮುಚ್ಚಿಕೋ ಎಂದ ನೆಟ್ಟಿಗರು!

ಇನ್ನೊಂದೆಡೆ ಸಿನಿಮಾದ ಬಗ್ಗೆ ಸ್ಪಷ್ಟವಾಗಿ ಪೋಸ್ಟ್‌ ಮಾಡಿದ್ದ ಚಂದನ್‌ ಶೆಟ್ಟಿಯ ಪೋಸ್ಟ್‌ಗೂ ಹಲವು ಕಾಮೆಂಟ್‌ ಬಂದಿದೆ. 'Actually ಅದು ಚಂದನ್ and ನಿವೇದಿತಾ..ಸಾಂಗ್..release ಮಾಡ್ತಾ ಇದ್ದಾರೆ ಅಷ್ಟೇ.... ಅದೂ ಅವರಿಬ್ಬರೇ..' ಎಂದು ಒಬ್ಬರು ಕಾಮೆಂಟ್‌ ಪೋಸ್ಟ್‌ ಮಾಡಿದ್ದಾರೆ. 'ದಯವಿಟ್ಟು ಎಲ್ಲರೂ ನಿವೇದಿತಾ profile ge ಹೋಗಿ ಅವ್ಳೆನ್ caption ಹಾಕಿರೋದು ಅಂತ ನೋಡ್ಕೊಂಡ್ ಬನ್ನಿ..' ಎಂದು ಇನ್ನೊಬ್ಬರು ಬರೆದಿದ್ದಾರೆ. ಸಿನಿಮಾ ಟೈಟಲ್‌ ಸಖತ್‌ ಆಗಿದೆ. ಹಿಂದಿನ ಟೈಟಲ್‌ಗಿಂತ ಇದು ಅದ್ಭುತವಾಗಿದೆ ಎಂದಿದ್ದಾರೆ. 'ಕ್ಯಾಂಡಿ ಕ್ರಶ್ ಟೈಟಲ್ ತೆಗದು ,,ಮುದ್ದು ರಾಕ್ಷಸಿ ಅಂತ ಸರಿಯಾಗಿ ಇಟ್ಟೋರ್ ಗೆ ಒಂದು ಲೈಕ್ ಕೊಡಿ..' ಎಂದು ಬರೆದಿದ್ದಾರೆ.

ನಿವೇದಿತಾ ಗೌಡ ಸೌಂದರ್ಯದ ಮುಂದೆ ಬೆಟ್ಟದಷ್ಟಿದ್ದ ಕೆಟ್ಟ ಕಾಮೆಂಟ್ ಕರಗಿಹೋದವು!

 

click me!