
ಬರೀ ಸಿನಿಮಾ, ನಟನೆಯಿಂದ ಮಾತ್ರವಲ್ಲ ತಮ್ಮ ಸ್ವಭಾವದಿಂದಲೇ ಯಜಮಾನ ಎನ್ನಿಸಿಕೊಂಡವರು ಡಾ. ವಿಷ್ಣುವರ್ಧನ್. ಚಿನ್ನದಂತ ಸ್ವಭಾವ ಹೊಂದಿದ್ದ ಅವರಿಗೆ ಅವರ ವ್ಯಕ್ತಿತ್ವವೇ ಭೂಷಣ. ಈಗಲೂ ಅವರನ್ನು ಅಭಿಮಾನಿಗಳು ದೇವರಂತೆ ನೋಡಲು ಇದೇ ಕಾರಣ. ಡಾ. ವಿಷ್ಣುವರ್ಧನ್ ಸುಮಾರು 220 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ರು. ಎಚ್ . ಎ. ರೆಹಮಾನ್ ನಿರ್ದೇಶನದ ಯಜಮಾನ ಸಿನಿಮಾ ಸೂಪರ್ ಹಿಟ್. ಇದಕ್ಕೂ ಮುನ್ನ ವಿಷ್ಣುವರ್ಧನ್, ರೆಹಮಾನ್ ಜೊತೆ ಕೆಲ್ಸ ಮಾಡಿದ್ದರು. ರೆಹಮಾನ್ ಸೇರಿ ಆರು ಮಂದಿ ಸಹ ನಿರ್ಮಾಣ ಮಾಡಿದ್ದ ಧಣಿಯಲ್ಲಿ ವಿಷ್ಣುವರ್ಧನ್ ನಟಿಸಿದ್ದರು. ಆ ದಿನಗಳನ್ನು ನೆನಪು ಮಾಡಿಕೊಂಡಿರು ರೆಹಮಾನ್, ವಿಷ್ಣುವರ್ಧನ್ ಅವರ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಬಹಿರಂಗಪಡಿಸಿದ್ದಾರೆ.
RDS Media Work ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ರೆಹಮಾನ್ ಅವರು, ವಿಷ್ಣುವರ್ಧನ್ ಆ ಟೈಂನಲ್ಲಿ ಎಷ್ಟು ಸಂಭಾವನೆ ಪಡೆಯುತ್ತಿದ್ದರು ಎಂಬುದನ್ನು ಹೇಳಿದ್ದಾರೆ. ಧಣಿ ಸಿನಿಮಾ ಬಿಡುಗಡೆಯಾಗಿದ್ದು 1996ರಲ್ಲಿ. ಈ ಟೈಂನಲ್ಲಿ ವಿಷ್ಣುವರ್ಧನ್ ಸಿನಿಮಾ ಬಜೆಟ್ 80 ರಿಂದ 90 ಲಕ್ಷ ಇರ್ತಾ ಇತ್ತು. ಆದ್ರೆ ಧಣಿ ಸಿನಿಮಾಕ್ಕೆ ಸ್ವಲ್ಪ ಅದ್ಧೂರಿ ಟಚ್ ನೀಡಲಾಗಿತ್ತು. ಸಿನಿಮಾ ಬಜೆಟ್ ಕೋಟಿ ದಾಟಿತ್ತು. ಆದ್ರೆ ವಿಷ್ಣವರ್ಧನ್ ಮಾತ್ರ ಆ ಟೈಂನಲ್ಲಿ 5 ಲಕ್ಷ ಸಂಭಾವನೆ ಪಡೆಯುತ್ತಿದ್ದರಂತೆ. ಶುಭಮಿಲನ ಸಿನಿಮಾ ಸೇರಿದಂತೆ 20ಕ್ಕೂ ಹೆಚ್ಚು ಸಿನಿಮಾಗಳಿಗೆ ವಿಷ್ಣುವರ್ಧನ್ ಪಡೆದಿದ್ದು ಬರೀ 5 ಲಕ್ಷ ಸಂಭಾವನೆ. ಹಾಲುಂಡ ತವರು ಸಿನಿಮಾ ನಂತ್ರ ಅವರ ಸಂಭಾವನೆ ಹೆಚ್ಚಾಗಿತ್ತು. 20 ಲಕ್ಷ ಫಿಕ್ಸ್ ಸಂಭಾವನೆ. ಅದಕ್ಕಿಂತ ಹೆಚ್ಚು ಹಣವನ್ನು ಅವರು ಎಂದೂ ಕೇಳಲಿಲ್ಲ. ಅಡ್ವಾನ್ಸ್ ಆಗಿ 5 ಲಕ್ಷ, ಫಸ್ಟ್ ಶೆಡ್ಯೂಲ್ ನಲ್ಲಿ 5 ಲಕ್ಷ, ಸೆಕೆಂಡ್ ಶೆಡ್ಯೂಲ್ ನಲ್ಲಿ 5 ಲಕ್ಷ ಹಾಗೂ ಡಬ್ಬಿಂಗ್ ಗೆ 5 ಲಕ್ಷ ಪಡೆಯುತ್ತಿದ್ದ ವಿಷ್ಣುವರ್ಧನ್ ಅವರು ನಿರ್ಮಾಪಕರಿಗೆ ತೊಂದ್ರೆ ನೀಡ್ತಿರಲಿಲ್ಲವಂತೆ.
ಶೂಟಿಂಗ್ ಎಲ್ಲೇ ನಡೆಯುತ್ತಿದ್ರೂ ಸೆಟ್ ಅನ್ನು ತಮ್ಮ ಮನೆ ಅಂದ್ಕೊಂಡಿರುತ್ತಿದ್ದವರು ವಿಷ್ಣುವರ್ಧನ್. 9 ಗಂಟೆಗೆ ಸೆಟ್ ನಲ್ಲಿ ಇರುತ್ತಿದ್ದ ಅವರು ನಿರ್ಮಾಪಕರು, ನಿರ್ದೇಶಕರು ಟೈಂ ಪಾಲಿಸ್ಬೇಕು ಅಂತ ಬಯಸಿದವರು. ಬೆಳಿಗ್ಗೆ ಆರು ಗಂಟೆಗೆ ಮನೆ ಬಿಡುತ್ತಿದ್ದ ವಿಷ್ಣುವರ್ಧನ್ ಅವರು ಶೂಟಿಂಗ್ ಜಾಗದಲ್ಲಿ ಧೂಮಪಾನ ಮಾಡ್ಬಾರದು, ಗಲಾಟೆ ಮಾಡ್ಬಾರದು ಎಂಬ ಶಿಸ್ತನ್ನು ಪಾಲಿಸುತ್ತಿದ್ದರು. ಎಲ್ಲರ ಜೊತೆ ಬೆರೆಯುತ್ತಿದ್ದ ಅವರು ರಸ್ತೆಯಲ್ಲಿ ಕುಳಿತುಕೊಳ್ಳಲೂ ಸಿದ್ಧವಿರ್ತಿದ್ದರು. ವ್ಯಾನ್, ಛತ್ರಿ ಕೂಡ ಬೇಡ ಎನ್ನುತ್ತಿದ್ದ ವಿಷ್ಣವರ್ಧನ್, ಮೊದಲ ಚಿತ್ರದಲ್ಲಿ ಲಾಭ ಬರ್ಲಿಲ್ಲ ಎನ್ನುವ ಕಾರಣಕ್ಕೆ ರೆಹಮಾನ್ ಅವರಿಗೆ ಇನ್ನೊಂದು ಸಿನಿಮಾಗೆ ಕಾಲ್ ಶೀಟ್ ನೀಡಿದ್ದರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.