ಕರೋನಾ ವಿರುದ್ಧ ಸಮರ/ ಸೋಶಿಯಲ್ ಮೀಡಿಯಾ ಮೂಲಕ ಮಾತನಾಡಿದ ಜಗ್ಗೇಶ್/ ಕೊರೋನಾ ಸಕಲ ಮುನ್ನೆಚ್ಚರಿಕೆ ತೆಗೆದುಕೊಳ್ಳಿ/ ನವರಸ ನಾಯಕನ ಮನವಿ
ಬೆಂಗಳೂರು(ಜೂ. 30) ನವರಸ ನಾಯಕ ಜಗ್ಗೇಶ್ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮುಂದೆ ಬಂದು ಒಂದಿಷ್ಟು ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದಾರೆ.
ಕೊರೊನಾ ಲಾಕ್ ಡೌನ್ ದಿನಗಳು ನಮ್ಮನ್ನ ನಾವು ಅರ್ಥ ಮಾಡಿಕೊಳ್ಳಲು ದೇವರು ಕೊಟ್ಟ ದಿನ. ಸಕಾರಾತ್ಮಕವಾಗಿ ಚಿಂತಿಸಿ. ಇರೋದನ್ನ ಸೇವಿಸಿ ನನಗೆ ಏನೂ ಆಗೋಲ್ಲ ಅಂತ ಮಾಸ್ಕ್ ಧರಿಸದೇ ಹೊರಗೆ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
undefined
ಅಂತರ್ ಜಿಲ್ಲಾ ಸಂಚಾರಕ್ಕೆ ಬ್ರೇಕ್ ಬೀಳುತ್ತಾ?
ಸ್ಯಾನಿಟೈಸರ್ ಬಳಸೋದನ್ನ ಮರೀಲೇಬೇಡಿ. Don’t Risk Your Life ಎಂದು ಕೇಳಿಕೊಂಡಿದ್ದಾರೆ. ರಾಹು ಮತ್ತು ಕೇತು ಕೆಟ್ಟ ಪರಸ್ಥಿತಿಯಲ್ಲಿದ್ದಾರೆ. ಇದೇ ರೀತಿ 30 ವರ್ಷದ ಹಿಂದೆ ಕಾವೇರಿ ಗಲಭೆ ಆಗಿತ್ತು. ಈಗ ಕೊರೊನಾ ಬಂದಿದೆ ಎಂದಿದ್ದಾರೆ.
ಚೀನಾ ಕೊಟ್ಟ ಕೊರೊನಾ ಮನುಕುಲವನ್ನೆ ಸರ್ವ ನಾಶ ಮಾಡುತ್ತಿದೆ. ಭಯ ಬೇಡ ಸುರಕ್ಷಿತವಾಗಿರೋಣ. ಚೀನಾ ವಸ್ತುಗಳನ್ನ ತ್ಯಜಿಸೋಣ. ಮುಂದಿನ ವರ್ಷ ಜನವರಿಯಿಂದ ಹೊಸ ಜೀವನ ಆರಂಭಿಸೋಣ, ಆಶಾ ಭಾವನೆ ಅಲ್ಲಿಯೇ ಇರೋಣ ಎಂದು ಕೇಳಿಕೊಂಡಿದ್ದಾರೆ.