ರಿಲೀಸ್‌ಗೂ ಮುನ್ನ ಮತ್ತೊಂದು ಟ್ರೇಲರ್‌; ಶುರುವಾಯ್ತು ಭರಾಟೆ ಅಬ್ಬರ!

By Web Desk  |  First Published Oct 14, 2019, 11:12 AM IST

ಸದ್ಯ ಕನ್ನಡದ ಮಟ್ಟಿಗೆ ಬಹು ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿರುವ ‘ಭರಾಟೆ’ ಅ.18ರಂದು ರಿಲೀಸ್ ಆಗುತ್ತಿದೆ.


ಈ ಹಂತದಲ್ಲಿ ಚಿತ್ರದಿಂದ ಮತ್ತೊಂದು ಟ್ರೇಲರ್ ಬಿಡುಗಡೆ ಆಗಿದೆ. ಈ ಬಾರಿ ಅನಾವರಣ ಗೊಂಡಿರುವುದು ಎಂಟರ್‌ಟೈನ್ ಮೆಂಟ್ ಟ್ರೇಲರ್. ಈಗಾಗಲೇ ಆ್ಯಕ್ಷನ್ ಟ್ರೇಲರ್ ಬಂದಿದೆ. ಏಳು
ಮಂದಿಯ ಖಳನಾಯಕರ ಖದರ್ ನೋಡಿ ಆಗಿದೆ.

ಒಂದೇ ಹಾಡಿಗೆ 13 ಗೆಟಪ್‌ಗಳು; ಶ್ರೀಮುರಳಿ ಪತ್ನಿ ಕೈವಾಡ!

Tap to resize

Latest Videos

ಇನ್ನು ಹಾಡುಗಳು ಕೂಡ ಬಂದಿವೆ. ಮಾಸ್ ಡೈಲಾಗ್ ಟೀಸರ್ ಬಂದಿದೆ. ಹಾಗಾದರೆ ಚಿತ್ರದಲ್ಲಿ ಕೇವಲ ಆ್ಯಕ್ಷನ್ ಮಾತ್ರನಾ ಎಂದುಕೊಳ್ಳುತ್ತಿರುವಾಗಲೇ ಎಂಟರ್‌ಟೈನ್‌ಮೆಂಟ್ ಟ್ರೇಲರ್‌ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಮನರಂಜನೆಯನ್ನೇ ದೃಷ್ಟಿಯಲ್ಲಿಟ್ಟು ಕೊಂಡು ಈ ಟ್ರೇಲರ್ ರೂಪಿಸಲಾಗಿದೆ.

 

ಈ ಟ್ರೇಲರ್ ನೋಡಿದ ಮೇಲೆ ಇದು ಪಕ್ಕಾ ಫ್ಯಾಮಿಲಿ ಸಿನಿಮಾ ಎಂದುಕೊಳ್ಳುವುದು ಗ್ಯಾರೆಂಟಿ ಎನ್ನುವ ನಂಬಿಕೆ ಚಿತ್ರತಂಡದ್ದು. ನಿರ್ದೇಶಕ ಚೇತನ್ ಕುಮಾರ್ ಹಾಗೂ ಶ್ರೀಮುರಳಿ ಕಾಂಬಿ ನೇಷನ್‌ನ ಈ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಹೀಗಾಗಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಲು ಟೀಸರ್, ಹಾಡುಗಳ ಪ್ರೊಮೋ, ಆ್ಯಕ್ಷನ್ ಟ್ರೇಲರ್, ಎಂಟರ್‌ಟೈನ್‌ಮೆಂಟ್ ಟ್ರೇಲರ್ ಹೆಸರಿನಲ್ಲಿ ‘ಭರಾಟೆ’ ಪ್ರೇಕ್ಷಕರಿಗೆ ತಲುಪಲು ಹೊರಡುತ್ತಿದೆ.

ಭರಾಟೆಯಲ್ಲಿ ಭರ್ಜರಿ ಸೌಂಡ್ ಮಾಡಲು ಬರ್ತಿದ್ದಾನೆ ಅಗಸ್ತ್ಯಾ!

ಹಿಂದಿ ಸೇರಿದಂತೆ ಬೇರೆ ಭಾಷೆಗಳಲ್ಲಿ ಹೀಗೆಹಾಡು, ಸಾಹಸ, ರೊಮ್ಯಾಂಟಿಕ್ ಹೀಗೆ ಒಂದೊಂದಕ್ಕೊಂದು ಟ್ರೇಲರ್ ಬಿಡುಗಡೆ ಮಾಡುವ ವಾಡಿಕೆ. ಆದರೆ, ಕನ್ನಡದಲ್ಲಿ ಒಂದೇ ಟ್ರೇಲರ್
ಬರುವುದು ವಾಡಿಕೆ. ಈಗ ‘ಭರಾಟೆ’ ರೂಲ್ಸ್ ಬ್ರೇಕ್ ಮಾಡುತ್ತಿದೆ. ಈಗಾಗಲೇ ಟ್ರೇಲರ್ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಬರುತ್ತಿದೆ. 

 

click me!