
ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಸುದೀಪ್ ಲಕ್ಕಿ ಫೆಲೋ. ಕುತೂಹಲ ಮೂಡಿಸಿದ್ದ ಪೈಲ್ವಾನ್ 100 ಕೋಟಿ ಕ್ಲಬ್ ಸೇರಿತು. ಆನಂತರ ರಾಜ್ಯದಾದ್ಯಂತ ತೆರೆ ಕಂಡ 'ಸೈರಾ' ಸೂಪರ್ ಹಿಟ್ ಆಗಿದ್ದಲ್ಲದೇ ಅಭಿಮಾನಿಗಳು ಕಿಚ್ಚನ ಅಭಿನಯಕ್ಕೆ ಫುಲ್ ಫಿದಾ ಆಗಿದ್ದಾರೆ.
ಡಬ್ಬಿಂಗ್ ವಿರೋಧಿಸುತ್ತಿದ್ದ ಸುದೀಪ್ ದಿಢೀರನೇ ಪರ ನಿಂತಿದ್ಯಾಕೆ?
ಇನ್ನು ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 7 ರಿಯಾಲಿಟಿ ಶೋ ಆರಂಭವಾಗುತ್ತಿದ್ದು ಕಿಚ್ಚನ ಕಾಲ್ ಶೀಟ್ ತುಂಬಿದೆ. ಕೆಲ ದಿನಗಳ ಹಿಂದೆ ‘ಸೈರಾ’ ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮ ನಡೆಯಿತು. ಈ ವೇಳೆ ಅಂಬಿ ಹಾಗೂ ರಾಹುಲ್ ದ್ರಾವಿಡ್ ಬಯೋಪಿಕ್‌ನಲ್ಲಿ ನಟಿಸುವುದರ ಬಗ್ಗೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.
ಬಿಗ್‌ಬಾಸ್ ಸಂಭಾವನೆ ಬಗ್ಗೆ ಕಡೆಗೂ ಬಾಯ್ಬಿಟ್ರು ಕಿಚ್ಚ ಸುದೀಪ್!
'ರಾಹುಲ್ ಬಯೋಪಿಕ್‌ನಲ್ಲಿ ನಟಿಸಲು ನನ್ನಿಂದ ಸಾಧ್ಯವಿಲ್ಲ, ಅದಕ್ಕೆ ಚಿಕ್ಕ ವಯಸ್ಸಿನ ಹೀರೋ ಬೇಕು. ಹಾಗೂ ಅಂಬರೀಶ್ ಬಯೋಪಿಕ್ ಕುರಿತು ನಾನು ಮಾಡುವುದು ಕಷ್ಟವಾಗುತ್ತದೆ. ಅವರ ನಡುವೆ ನಾವು ಬೆಳೆದವರು. ಅದರಿಂದ ಪರ್ಫೆಕ್ಟ್ ಆಗಿ ಅವರಂತೆ ಬಯೋಪಿಕ್‌ನಲ್ಲಿ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
ಕಿಚ್ಚ ಸುದೀಪ್ ಮಾಡಿರೋ ದೋಸೆ ತಿನ್ನೋಣ ಬನ್ನಿ!
ಕೆಲ ವರ್ಷಗಳ ಹಿಂದೆ ಡಬ್ಬಿಂಗ್ ವಿರುದ್ಧ ನಿಂತಿದ್ದ ಕಿಚ್ಚ ಸೈರಾ ಸಿನಿಮಾ ನಂತರ ಡಬ್ಬಿಂಗ್ ಪರ ನಿಂತಿರುವುದು ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಈ ಬಗ್ಗೆ ಸ್ಪಷ್ಟನೆ ಕೊಡುತ್ತಾ 'ಬಿಗ್ ಬಜೆಟ್ ಸಿನಿಮಾಗೆ ಇದು ಅನಿವಾರ್ಯ. ಪರ ಭಾಷೆ ಸಿನಿಮಾಗಳು ಕನ್ನಡದತ್ತ ಬರುತ್ತಿರುವುದಕ್ಕೆ ಖುಷಿ ಪಡಬೇಕು' ಎಂದು ಉತ್ತರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.