ಸ್ಯಾಂಡಲ್‌ವುಡ್‌ ಸಂಪೂರ್ಣ ಸ್ತಬ್ಧ: ಶುಕ್ರವಾರವಾದರೂ ಹೊಸ ಸಿನಿಮಾ ಬಿಡುಗಡೆಯಿಲ್ಲ, ಸಿನಿಮಾ ಪ್ರದರ್ಶನವೂ ಇರೊಲ್ಲ

Published : Sep 27, 2023, 01:57 PM ISTUpdated : Sep 27, 2023, 02:09 PM IST
ಸ್ಯಾಂಡಲ್‌ವುಡ್‌ ಸಂಪೂರ್ಣ ಸ್ತಬ್ಧ: ಶುಕ್ರವಾರವಾದರೂ ಹೊಸ ಸಿನಿಮಾ ಬಿಡುಗಡೆಯಿಲ್ಲ, ಸಿನಿಮಾ ಪ್ರದರ್ಶನವೂ ಇರೊಲ್ಲ

ಸಾರಾಂಶ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಶುಕ್ರವಾರದಂದು (ಸೆ.29ರಂದು) ಹೊಸ ಸಿನಿಮಾ ಬಿಡುಗಡೆ ಮಾಡೊಲ್ಲ, ಸಿನಿಮಾ ಪ್ರದರ್ಶನ ಮಾಡೊಲ್ಲ ಹಾಗೂ ಶೂಟಿಂಗ್‌ ಕೂಡ ಮಾಡುವುದಿಲ್ಲ.

ಬೆಂಗಳೂರು (ಸೆ.27): ಕಳೆದ ಹದಿನೈದು ದಿನಗಳಿಂದಲೂ ಕರ್ನಾಟಕ ರಾಜ್ಯಾದ್ಯಂತ ಕಾವೇರಿ ನೀರಿಗಾಗಿ ತೀವ್ರ ಹೋರಾಟ ನಡೆಯುತ್ತಿದ್ದು, ಸೆ.29ರಂದು ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಈ ವೇಳೆ ಕಾವೇರಿ ಬಂದ್‌ಗೆ ಬೆಂಬಲ ನೀಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಶುಕ್ರವಾರದಂದು ಯಾವುದೇ ಹೊಸ ಸಿನಿಮಾ ಬಿಡುಗಡೆ ಮಾಡೊಲ್ಲ, ಯಾವುದೇ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮಾಡೊಲ್ಲ, ಸಿನಿಮಾ ಶೂಟಿಂಗ್‌ ಕೂಡ ಮಾಡುವುದಿಲ್ಲ ಎಂದು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿವೆ ಎಂದು ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ನೀರಿಗಾಗಿ ಮಾಡುತ್ತಿರುವ ಕರ್ನಾಟಕ ಬಂದ್‌ನಲ್ಲಿ ಚಿತ್ರರಂಗದ ಬೆಂಬಲ‌ ಕೇಳಿದ್ದು‌ ಇದೇ ಮೊದಲು. ಇದರಿಂದಾಗಿ ಅವರು ಬಂದ್ ಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಚಿತ್ರೋಧ್ಯಮವನ್ನೇ ಬಂದ್ ಮಾಡುತ್ತೇವೆ ಅಂತ ಹೇಳಿದ್ದಾರೆ. ಯಾವುದೇ ಶೂಟಿಂಗ್, ಸಿನಿಮಾ‌ ಪ್ರದರ್ಶನ ಇಲ್ಲ ಅಂತ ಹೇಳಿದ್ದಾರೆ. ಟೌನ್ ಹಾಲ್ ನಿಂದ ಬೃಹತ್ ಮೆರವಣಿಗೆ ಆಗುತ್ತದೆ. ಫಿಲ್ಮ್ ಚೇಂಬರ್ ನಿಂದಲೇ ಮೆರವಣಿಗೆ ಬನ್ನಿ ಎಂದು ಹೇಳಲಾಗಿದೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ತಮಿಳುನಾಡಿನ ಏಜೆಂಟ್‌ಗಳು: ಬಿಎಸ್‌ವೈ ವಾಗ್ದಾಳಿ

ಈ ಕುರಿತು ಮಾಧ್ಯಮಗಳೊಂದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್.ಎಮ್. ಸುರೇಶ್ ಮಾತನಾಡಿ, ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಎಲ್ಲಾ ಅಂಗ ಸಂಸ್ಥೆ ಗಳು ಬಂಸ್‌ಗೆ ಒಪ್ಪಿಗೆ ಕೊಟ್ಟಿವೆ. ನಮ್ಮ ನಾಡಿಗಾಗಿ ನಾವು ಹೋರಾಡುತ್ತೇವೆ. ನಾಳೆ ನಡೆಯುವ ರ್ಯಾಲಿಗೆ ಎಲ್ಲರೂ ಬರಬೇಕು. ಚಿತ್ರರಂಗದ ಘನತೆ ಗೌರವ ಕಾಪಾಡೋ ಕೆಲಸ ಮಾಡೋಣ. ನಾವೆಲ್ಲಾ ಒಂದಾಗಿ ಫಿಲ್ಮ್ ಚೇಂಬರ್ ನಿಂದ ಹೋಗೋಣ. ಈ ಬಂದ್ ಅನ್ನು ಯಶಸ್ವಿ ಮಾಡಲಿದ್ದೇವೆ. ಕಾವೇರಿಗಾಗಿ ಕರ್ನಾಟಕ ಬಂದ್‌ಗೆ ಚಿತ್ರರಂಗ ಸಂಪೂರ್ಣ ಬೆಂಬಲ ಇದೆ. ಎಲ್ಲ ಕಲಾವಿದರು ಕರ್ನಾಟಕ ಬಂದ್‌ನಲ್ಲಿ ಭಾಗವಹಿಸುತ್ತಾರೆ. ಬೆಳಗ್ಗೆ 9 ಗಂಟೆಗೆ ಫಿಲ್ಮ್ ಚೇಂಬರ್ ನಿಂದ ರ್ಯಾಲಿ ಹೊರಡಲಿದೆ. ಚಿತ್ರರಂಗದ ಎಲ್ಲಾ ಅಂಗ ಸಂಸ್ಥೆಗಳು ರ್ಯಾಲಿ ಮೂಲಕ ಭಾಗಿಯಾಗುತ್ತಾರೆ ಎಂದು ತಿಳಿಸಿದರು. 

ರಾಮನಗರ ಚುನಾವಣಾ ಸಿಬ್ಬಂದಿಯ ಕಾರು ಅಡ್ಡಗಟ್ಟಿ ವೋಟಿಂಗ್‌ ಮಿಷನ್‌ ಕದ್ದೊಯ್ದ ದುಷ್ಕರ್ಮಿಗಳು

ಒಂದು ದಿನ ಉಂಚಿತವಾಗಿಯೇ ಸಿನಿಮಾ ರಿಲೀಸ್‌: ಇನ್ನು ಕಾವೇರಿಗಾಗಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸೆ.29ರಂದು ಬಿಡುಗಡೆ ಆಗಬೇಕಿದ್ದ ಎರಡು ಕನ್ನಡ ಸಿನಿಮಾನಗಳನ್ನು ಒಂದು ಸಿನ ಮುಂಚಿತವಾಗಿಯೇ ಸೆ28ರ ಗುರುವಾರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಆದ್ದರಿಂದ ಸೆಪ್ಟೆಂಬರ್ 28ರ ಗುರುವಾರ ಕನ್ನಡದ 3 ಸಿನಿಮಾಗಳ ಬಿಡುಗಡೆಯಾಗಲಿವೆ. ಗಣೇಶ್ ನಟನೆಯ ಬಾನ ದಾರಿಯಲ್ಲಿ ಹಾಗೂ ಜಗ್ಗೇಶ್ ನಟನೆಯ ತೋತಾಪುರಿ-2 ಹಾಗೂ ಕ್ರಾಂತಿವೀರ ಸಿನಿಮಾಗಳು ಬಿಡುಗಡೆ ಆಗಲಿವೆ. ಕಾವೇರಿ ನೀರು ಉಳಿಸಿಕೊಳ್ಳಲು ತ್ಯಾಗ ಮಾಡಬೇಕು ಎನ್ನುವ ಉದ್ದೇಶದಿಂದ ಸಿನಿಮಾಗಳನ್ನು ಒಂದು ದಿನ ಮುಂಚಿತವಾಗಿಯೇ ಬಿಡುಗಡೆ ಮಾಡುವಂತೆ ನಿರ್ಮಾಪಕರ ಜೊತೆ ಮಾತನಾಡಿದ್ದೇವೆ. ಇನ್ನು ಸೆ.29ರ ಕರ್ನಾಟಕ ಬಂದ್‌ ದಿನ ಯಾವುದೇ ಶೂಟಿಂಗ್ ಬೇಡ ಅಂತ ಬೇರೆ ನಿರ್ಮಾಪಕರಿಗೂ ಹೇಳಿದ್ದೇವೆ. ನಮ್ಮ ನಿರ್ಮಾಪಕರು ಕರ್ನಾಟಕ ಬಂದ್ ಗೆ ಬೆಂಬಲ ಕೊಡುತ್ತಾರೆ ಎಂದು ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?