ಮಗಳ ಜೊತೆ ಮೇಘನಾ ರಾಜ್ ಫೋಟೋ ವೈರಲ್; ಕಣ್ಮಣಿ ಎಂದು ಕರೆಯಲು ಕಾರಣವೇನು?

Published : Sep 26, 2023, 11:56 AM IST
ಮಗಳ ಜೊತೆ ಮೇಘನಾ ರಾಜ್ ಫೋಟೋ ವೈರಲ್; ಕಣ್ಮಣಿ ಎಂದು ಕರೆಯಲು ಕಾರಣವೇನು?

ಸಾರಾಂಶ

ಧ್ರುವ ಸರ್ಜಾ ಪುತ್ರಿಯನ್ನು ಮುದ್ದಾಡಿದ ಮೇಘನಾ ರಾಜ್. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್....

ಚಂದನವನದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಕಮ್ ಬ್ಯಾಕ್ ಸಿನಿಮಾ ತತ್ಸಮ ತದ್ಭವ ಅದ್ಭುತ ಪ್ರತಿಕ್ರಿಯೆ ಪಡೆಯುತ್ತಿದೆ. ಯಶಸ್ಸಿನಲ್ಲಿ ತೇಲುತ್ತಿರುವ ನಟಿ ಕೊಂಚ ಸಮಯ ಮಾಡಿಕೊಂಡು ಧ್ರುವ ಸರ್ಜಾ ಮಕ್ಕಳನ್ನು ಭೇಟಿ ಮಾಡಿದ್ದಾರೆ. ಗಣೇಶ ಹಬ್ಬದ ದಿನ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿ ಎರಡನೇ ಮಗುವನ್ನು ಬರ ಮಾಡಿಕೊಂಡರು. ಮೊದಲು ಮಗಳು ಆನಂತರ ಮಗ ಈಗ ಫ್ಯಾಮಿಲಿ ಕಂಪ್ಲೀಟ್ ಎನ್ನುತ್ತಾರೆ ಫ್ಯಾನ್ಸ್. ಆಸ್ಪತ್ರೆಗೆ ಭೇಟಿ ನೀಡಿ ಮಗುವನ್ನು ನೋಡಿಕೊಂಡ ಬಂದ ಮೇಘನಾ ರಾಜ್ ಈಗ ಮತ್ತೊಮ್ಮೆ ನಿವಾಸಕ್ಕೆ ಭೇಟಿ ನೀಡಿ ಫೋಟೋ ಕ್ಲಿಕ್ ಮಾಡಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಮೇಘನಾ ರಾಜ್ ಆಕ್ಟಿವ್ ಆಗಿರುವ ಕಾರಣ ಏನೇ ಇದ್ದರೂ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಧ್ರುವ ಸರ್ಜಾ ಮುದ್ದಾ ಮಗಳನ್ನು ಎತ್ತುಕೊಂಡು ಮೇಘನಾ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. ಕುಟ್ಟಿಮ್ಮಾ ವಿತ್ ಕಣ್ಮಣಿ ಎಂದು ಬರೆದುಕೊಂಡಿದ್ದಾರೆ. ಹೌದು! ಮೇಘನಾ ರಾಜ್‌ರನ್ನು ಅವರ ತಂದೆ ತಾಯಿ ಮತ್ತು ಪತಿ ಚಿರಂಜೀವಿ ಸರ್ಜಾ ಕುಟ್ಟಿಮ್ಮಾ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಧ್ರುವ ಮಗಳಿಗೆ 10 ತಿಂಗಳು ಇನ್ನು ನಾಮಕರಣ ಮಾಡದ ಕಾರಣ ಮುದ್ದು ಮುದ್ದಾದ ಹೆಸರುಗಳಿಂದ ಕರೆಯುತ್ತಾರೆ. ಮೇಘನಾ ರಾಜ್‌ ಮಗಳನ್ನು ಕಣ್ಮಣಿ ಎಂದು ಕರೆಯುತ್ತಾರೆ.

ನಾರ್ಮಲ್ ಡೆಲಿವರಿಯಲ್ಲಿ ತುಂಬಾ ಕಿರುಚಾಟ ಇರುತ್ತೆ ಗಾಬರಿ ಆಗಿಬಿಟ್ಟೆ: ಪತ್ನಿ ಬಗ್ಗೆ ಧ್ರುವ ಸರ್ಜಾ

ಕಳೆದ ತಿಂಗಳು ಪತ್ನಿ ಪ್ರೇರಣಾ ಎರಡನೇ ಸೀಮಂತವನ್ನು ಧ್ರುವ ಸರ್ಜಾ ಅಣ್ಣನ ಸಮಾಧಿ ಇರುವ ತೋಟದ ಮನೆಯಲ್ಲಿ ಅದ್ಧೂರಿಯಾಗಿ ಮಾಡಿದ್ದರು. ಆಗ ವೈರಲ್ ಆದ ವಿಡಿಯೋ ಮತ್ತು ಫೋಟೋಗಳಲ್ಲಿ ಮೇಘನಾ ರಾಜ್ ಮತ್ತು ರಾಯನ್ ರಾಜ್ ಸರ್ಜಾ ಕಾಣಿಸಿಕೊಂಡಿರಲಿಲ್ಲ ಎಂದು ನೆಟ್ಟಿಗರು ಗಮನಿಸಿದ್ದರು. ಈ ವಿಚಾರವಾಗಿ ಮೇಘನಾ ಪರ ಅಭಿಮಾನಿಗಳು ಮಾತನಾಡಿದ್ದರು. ಮೇಘನಾ ಕಮ್ ಬ್ಯಾಕ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ಈ ಸಿನಿಮಾ ಕೈ ಹಿಡಿಯ ಬೇಕು ಆಗ ಅವಕಾಶಗಳು ಹುಡುಕಿ ಬರುತ್ತದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದರು. 

ಮಗನಿಗೆ ರಜನಿಕಾಂತ್-ಧ್ರುವ ಸರ್ಜಾ ಡೈಲಾಗ್ ಹೇಳಿಕೊಟ್ಟ ಮೇಘನಾ ರಾಜ್; ತಮಿಳು ಬೇಡ ಕನ್ನಡ ಕಲಿಸಿ ಎಂದ ನೆಟ್ಟಿಗರು!

ಮೊದಲ ಸಿನಿಮಾ ಡೈಲಾಗ್:

ರಾಯನ್ ಚೆನ್ನಾಗಿ ಓದ ಬೇಕು ದೊಡ್ಡವನಾದ ಮೇಲೆ ವೃತ್ತಿ ಜೀವನ ಆಯ್ಕೆ ಮಾಡಿಕೊಳ್ಳಿ ಎಂದು ಈ ಹಿಂದೆ ಮೇಘನಾ ಹೇಳಿದ್ದರು. 'ಈಗ ರಾಯನ್ ಡೈಲಾಗ್ಸ್‌ ಹೇಳಲು ಆರಂಭಿಸಿದ್ದಾನೆ. ಇದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಗೊತ್ತಿಲ್ಲ. ರಾಯನ್‌ಗೆ ಮೊದಲು ಹೇಳಿಕೊಟ್ಟಿದ್ದು ರಜನಿಕಾಂತ್ ಸರ್ ಡೈಲಾಗ್ ಆಮೇಲೆ ಧ್ರುವ ಸರ್ಜಾ ಮಾರ್ಟಿನ್ ಡೈಲಾಗ್ ಹೇಳುತ್ತಾನೆ. ಚಿರು ರಜನಿಕಾಂತ್ ಸರ್ ಅವರ ದೊಡ್ಡ ಅಭಿಮಾನಿ ಅಗಿದ್ದರು. ಮನೆಯಲ್ಲಿ ರಜನಿಕಾಂತ್ ಸರ್ ಪೋಸ್ಟರ್ ಅಂಟಿಸಿಕೊಂಡಿದ್ದರು' ಎಂದು ಮೇಘನಾ ರಾಜ್ ಹೇಳಿದ್ದಾರೆ.

'ರಜನಿಕಾಂತ್ ಸರ್ ಅವರ ಎನ್ ವಳೀ ತನೀ ವಳಿ' ಡೈಲಾಗ್ ಹೇಳುತ್ತಾನೆ ಮತ್ತೊಂದು ಹೋ ಇಟ್ಸ್‌ ಮಾರ್ಟಿನ್ ಡೈಲಾಗ್ ಹೇಳುತ್ತಾನೆ. ರಜನಿಕಾಂತ್ ಡೈಲಾಗ್ ಮೊದಲು ರಾಯನ್ ಹೇಳಿದ್ದು' ಎಂದಿದ್ದಾರೆ ಮೇಘನಾ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?