ಅತ್ತಿಗೆ ಕಳೆದುಕೊಂಡು ನೋವಿನಲ್ಲಿದ್ದೇವೆ: ಫ್ಯಾನ್ಸ್‌ ಬಳಿ ಕೈ ಮುಗಿದು ಶ್ರೀಮುರಳಿ ಮನವಿ!

Published : Dec 16, 2023, 01:19 PM IST
ಅತ್ತಿಗೆ ಕಳೆದುಕೊಂಡು ನೋವಿನಲ್ಲಿದ್ದೇವೆ: ಫ್ಯಾನ್ಸ್‌ ಬಳಿ ಕೈ ಮುಗಿದು ಶ್ರೀಮುರಳಿ ಮನವಿ!

ಸಾರಾಂಶ

ಸ್ಯಾಂಡಲ್‌ವುಡ್‌ನ ಮದಗಜ ರೋರಿಂಗ್‌ ಸ್ಟಾರ್‌ ಶ್ರೀಮುರಳಿ, ಹುಟ್ಟುಹಬ್ಬಕ್ಕೆ ಇನ್ನೊಂದು ದಿನ ಬಾಕಿ ಇದೆ. ಡಿ. 17ರಂದು ಶ್ರೀಮುರಳಿ ಅವರ ಜನ್ಮದಿನ. ಇಲ್ಲಿಯವರೆಗೂ ಯಾವತ್ತೂ ಸಾರ್ವಜನಿಕವಾಗಿ ಬರ್ತ್‌ಡೇ ಆಚರಿಸಿಕೊಳ್ಳದ ಶ್ರೀಮುರಳಿ, ಈ ಸಲ ಮನದಲ್ಲಿನ ನೋವನ್ನು ಬದಿಗಿಟ್ಟು, ಅಭಿಮಾನಿಗಳ ಮುಂದೆ ಬರಲು ನಿರ್ಧರಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಮದಗಜ ರೋರಿಂಗ್‌ ಸ್ಟಾರ್‌ ಶ್ರೀಮುರಳಿ, ಹುಟ್ಟುಹಬ್ಬಕ್ಕೆ ಇನ್ನೊಂದು ದಿನ ಬಾಕಿ ಇದೆ. ಡಿ. 17ರಂದು ಶ್ರೀಮುರಳಿ ಅವರ ಜನ್ಮದಿನ. ಇಲ್ಲಿಯವರೆಗೂ ಯಾವತ್ತೂ ಸಾರ್ವಜನಿಕವಾಗಿ ಬರ್ತ್‌ಡೇ ಆಚರಿಸಿಕೊಳ್ಳದ ಶ್ರೀಮುರಳಿ, ಈ ಸಲ ಮನದಲ್ಲಿನ ನೋವನ್ನು ಬದಿಗಿಟ್ಟು, ಅಭಿಮಾನಿಗಳ ಮುಂದೆ ಬರಲು ನಿರ್ಧರಿಸಿದ್ದಾರೆ. ಅದಕ್ಕಾಗಿಯೇ ವಿಶೇಷ ಮನವಿಯೊಂದನ್ನು ಶ್ರೀಮುರಳಿ ಮಾಡಿಕೊಂಡಿದ್ದಾರೆ  ಈ ಹಿಂದೆಯೇ ಘೋಷಣೆ ಆಗಿದ್ದ ಬಘೀರ ಸಿನಿಮಾದಿಂದ ಪೋಸ್ಟರ್‌ ಬಿಡುಗಡೆ ಆಗಿದ್ದನ್ನು ಬಿಟ್ಟರೇ ಬೇರಾವುದೇ ಅಪ್‌ಡೇಟ್‌ ಸಿಕ್ಕಿರಲಿಲ್ಲ. ಸಣ್ಣ ಟೀಸರ್‌ ಝಲಕ್‌ ಸಹ ಹೊಂಬಾಳೆಯಿಂದ ಹೊರಬಂದಿರಲಿಲ್ಲ. 

ಇದೀಗ ಶ್ರೀಮುರಳಿ ಬರ್ತ್‌ಡೇಗೆ ಬಘೀರ ಬತ್ತಳಿಕೆಯಿಂದ ಟೀಸರ್‌ ರಿಲೀಸ್‌ ಆಗಲಿದೆ. ಡಿ. 17ರಂದು ಬೆಳಗ್ಗೆ 9:45ಕ್ಕೆ ಬಘೀರ ಟೀಸರ್‌ ರಿಲೀಸ್‌ ಆಗಲಿದೆ. ಇದರ ಜತೆಗೆ ಈ ಸಲದ ಬರ್ತ್‌ಡೇಯನ್ನೂ ಅಷ್ಟೇ ಗ್ರ್ಯಾಂಡ್‌ ಆಗಿ ಶ್ರೀಮುರಳಿ ಆಚರಿಸಿಕೊಳ್ಳಲಿದ್ದಾರೆ. ಆದರೆ, ಆ ಅದ್ಧೂರಿತನ ಯಾರಿಗಾಗಿ? ಎಂಬುದನ್ನೂ ಹೇಳಿಕೊಂಡಿದ್ದಾರೆ. ಅಂದರೆ, ಕಳೆದ ಕೆಲ ತಿಂಗಳ ಹಿಂದಷ್ಟೇ, ಅತ್ತಿಗೆ ಸ್ಪಂದನಾ ಅವರ ಅಕಾಲಿಕ ಸಾವಿನಿಂದ ವಿಜಯ್‌ ರಾಘವೇಂದ್ರ, ಶ್ರೀಮುರಳಿ ಇನ್ನೂ ಆಚೆ ಬಂದಿಲ್ಲ. ಇಂದಿಗೂ ಅವರ ನೆನಪಿನಲ್ಲಿಯೇ ಕಾಲ ಕಳೆಯುತ್ತಿದೆ. ಈ ನೋವಿನಲ್ಲಿ ಅದ್ಧೂರಿ ಬರ್ತ್‌ಡೇಗೆ ಶ್ರೀಮುರಳಿ ಮನಸು ಮಾಡಿರಲಿಲ್ಲ. ಅಭಿಮಾನಿಗಳ ಒತ್ತಾಯಕ್ಕೆ ಮಣಿದು, ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
 


'ಎಲ್ಲರಿಗೂ ನಮಸ್ಕಾರ. ಇಷ್ಟು ವರ್ಷದ ಹುಟ್ಟುಹಬ್ಬಕ್ಕೆ ಸೇರಲು ಆಗಿರಲಿಲ್ಲ. ಯಾಕೆ ಎಂಬುದು ನಿಮಗೂ ಗೊತ್ತು. ಈ ಬಾರಿಯೂ ಸೇರುವ ಪರಿಸ್ಥಿತಿ ಇರಲಿಲ್ಲ. ಆದ್ರೂ, ಅಭಿಮಾನಿಗಳ ಒತ್ತಾಯದ ಮೇರೆಗೆ , ನೀವು ಕೊಡ್ತಿರೋ ಪ್ರೀತಿ, ಏನ್‌ ಹೇಳಬೇಕು ಅಂತ ಗೊತ್ತಾಗ್ತಿಲ್ಲ. ನಿಮ್ಮ ಆಜ್ಞೆಯಂತೆಯೇ ನಡೀಬೇಕು. ಹಾಗಾಗಿ ಈ ವರ್ಷ ನಿಮ್ಮನ್ನೆಲ್ಲ ಭೇಟಿ ಮಾಡೋಕೆ ನನಗೊಂದು ಅವಕಾಶ ಸಿಕ್ಕಿದೆ. ಇದೇ ಡಿಸೆಂಬರ್‌ 17ನೇ ತಾರೀಖು, ವಸಂತ ನಗರದ ದೇವರಾಜ್‌ ಅರಸ್‌ ಭವನ್‌, ಮಿಲರ್ಸ್‌ ರೋಡ್‌, ಅಂಬೇಡ್ಕರ್‌ ಭವನ್‌ ಹಿಂದಿರುವ ಜಾಗದಲ್ಲಿ ಬೆಳಗ್ಗೆ 10:30 ನಂತರ ನಾನು ನಿಮಗೆ ಸಿಗ್ತಿನಿ'.

Chocolate ಡ್ರೆಸ್ ಲುಕ್‌ನಲ್ಲಿ​ Rashmika Mandanna: ಟೆಡ್ಡಿಬೇರ್‌ಗಿಂತ ನೀವೆ ಸುರಸುಂದರಿ ಎಂದ ಫ್ಯಾನ್ಸ್‌!

"ಯಾರ್ಯಾರು ನೋಡಬೇಕು, ಮೀಟ್‌ ಮಾಡಬೇಕೋ, ಜೊತೆಗೆ ಸೇರೋಣ. ಮತ್ತೊಂದು ಮನವಿ. ಯಾರೂ ಹಾರ ತುರಾಯಿ, ಮತ್ತೊಂದು ಮಗದೊಂದು ಗಿಫ್ಟ್‌ ತರಬೇಡಿ. ಹಣ ಖರ್ಚು ಮಾಡಬೇಡಿ. ಅದು ನಿಮ್ಮ ದುಡಿಮೆ. ಇದಕ್ಕೆಲ್ಲ ಖರ್ಷು ಮಾಡಬೇಡಿ. ಮನಸ್ಸಿದ್ದರೆ, ಅನಾಥಾಶ್ರಮಕ್ಕೆ ನೀಡಿ, ದಾನ ಧರ್ಮ ಮಾಡಿ. ಖಾಲಿ ಕೈಯಲ್ಲಿ ಬನ್ನಿ. ಮನಸ್ಸು ಬಿಚ್ಚಿ ಮಾತನಾಡೋಣ. ನಿಮಗಾಗಿ, ನಿಮ್ಮನ್ನು ಭೇಟಿ ಮಾಡುವ ಉದ್ದೇಶಕ್ಕೆ ಮಾತ್ರ ಈ ಭೇಟಿ. ಬನ್ನಿ ಸಿಗೋಣ, ಜೈ ಹಿಂದ್‌' ಎಂದು ಶ್ರೀಮುರಳಿ ಹೇಳಿದ್ದಾರೆ.ಅಂದಹಾಗೆ, ಬಘೀರ ಚಿತ್ರವನ್ನು ಹೊಂಬಾಳೆ ಫಿಲಂಸ್‌ ನಿರ್ಮಾಣ ಮಾಡುತ್ತಿದೆ. ಡಾ. ಸೂರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಪ್ರಶಾಂತ್‌ ನೀಲ್‌ ಕಥೆ ಒದಗಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?