ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ಶ್ರೀ ಮುರಳಿಗೆ ಚಿಕಿತ್ಸೆ ನಡೆಯುತ್ತಿದೆ. ಹೊಂಬಳೆ ಸಂಸ್ಥೆಯ ಬಘೀರ ಚಿತ್ರಿಕರಣದ ಸಮಯದಲ್ಲಿ ಚಿತ್ರದಲ್ಲಿನ ಮುಖ್ಯವಾಗಿ ನಡೆಯುವ ಸನ್ನಿವೇಶದ ಬಹು ದೊಡ್ಡ ಸ್ಟಂಟ್ ಸೀನ್ ಫೈಟಿಂಗ್..
ಸ್ಯಾಂಡಲ್‌ವುಡ್ ನಟ ಶ್ರೀಮುರಳಿಗೆ (Sri Murali) ಅಪಘಾತವಾಗಿದೆ. ಬಘೀರ ಸಿನಿಮಾ ಶೂಟಿಂಗ್ ವೇಳೆ ನಡೆದ ಘಟನೆಯಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಗಾಯಗೊಂಡಿದ್ದಾರೆ. ಬಘೀರ ಆ್ಯಕ್ಷನ್ ದೃಶ್ಯದ ಚಿತ್ರೀಕರಣದ ಸಂಧರ್ಭ ಕಾಲಿಗೆ ಪೆಟ್ಟು ಬಿದ್ದಿದ್ದು ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬಘೀರ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ.
ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ಶ್ರೀ ಮುರಳಿಗೆ ಚಿಕಿತ್ಸೆ ನಡೆಯುತ್ತಿದೆ. ಹೊಂಬಳೆ ಸಂಸ್ಥೆಯ ಬಘೀರ ಚಿತ್ರಿಕರಣದ ಸಮಯದಲ್ಲಿ ಚಿತ್ರದಲ್ಲಿನ ಮುಖ್ಯವಾಗಿ ನಡೆಯುವ ಸನ್ನಿವೇಶದ ಬಹು ದೊಡ್ಡ ಸ್ಟಂಟ್ ಸೀನ್ ಫೈಟಿಂಗ್ ಚಿತ್ರಿಸುವ ಸಮಯದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಗೆ ಕಾಲಿಗೆ ಪೆಟ್ಟಾಗಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತಂತದ ಪರಿಸ್ಥಿತಿಯೇನೂ ಇಲ್ಲ ಎನ್ನಲಾಗಿದೆ.
ದ್ವಾರಕೀಶ್‌ರನ್ನು ಚಿತ್ರರಂಗಕ್ಕೆ ತಂದವರು ಯಾರು, ಕುಳ್ಳನನ್ನು ಮದ್ರಾಸ್‌ಗೆ ಯಾಕೆ ಕಳಿಸಿದ್ರು?
ನಟ ಶ್ರೀಮುರಳಿ ಸದ್ಯ ಬಘೀರ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಅದಕ್ಕೂ ಮೊದಲು ತೆರೆಯ ಮೇಲೆ 'ರಥಾವರ' ಸಿನಿಮಾ ಮೂಲಕ ನಟ ಶ್ರೀಮುರಳಿ ತೆರೆಯ ಮೇಲೆ ಅಬ್ಬರಿಸಿದ್ದರು. ನರ್ತನ್ ನಿರ್ದೇಶನದ, ನಟ ಶಿವಣ್ಣ ಜತೆ ಶ್ರೀಮುರಳಿ ಅಭಿನಯಿಸಿದ್ದ 'ಮಫ್ತಿ' ಚಿತ್ರವು ಸಾಕಷ್ಟು ಮೆಚ್ಚುಗೆ ಪಡೆಯುವದರ ಜತೆಗೆ ಸೂಪರ್ ಹಿಟ್ ಎನಿಸಿತ್ತು. ಅದಕ್ಕೂ ಮೊದಲು ಬಹುತೇಕರಿಗೆ ಗೊತ್ತಿರುವಂತೆ ನಟ ಶ್ರೀಮುರಳಿ ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಸಿನಿಮಾದಲ್ಲಿ ನಟಿಸಿ ಆಕ್ಷನ್ ಪಾತ್ರದಲ್ಲಿ ಮಿಂಚಿದ್ದರು.
ಮುಂಬೈ ಬೆಡಗಿ ದೀಪಿಕಾ ಕನ್ನಡ ಚಿತ್ರಕ್ಕೆ ಆಯ್ಕೆಯಾದ ಸೀಕ್ರೆಟ್ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!
ಎಸ್ ನಾರಾಯಣ್ ನಿರ್ದೇಶನದ 'ಚಂದ್ರ ಚಕೋರಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿರುವ ನಟ ಶ್ರೀಮರುಳಿ, ನಟ ವಿಜಯರಾಘವೇಂದ್ರರ ಸಹೋದರ. ಸದ್ಯ ಶ್ರೀಮುರಳಿಗೆ ಬಘೀರ ಚಿತ್ರೀಕರಣದಲ್ಲಿ ಕಾಲಿಗೆ ಗಾಯವಾಗಿದ್ದು, ಮೈಸೂರು ಮಣಿಪಾಲ ಆಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್ ಪಡೆಯುತ್ತಿದ್ದಾರೆ.
ವಿಷ್ಣುವರ್ಧನ್‌ಗೆ ಮತ್ತೊಂದು ಸಿನಿಮಾಗೆಂದು ಸೀಕ್ರೆಟ್ಟಾಗಿ ಲಂಡನ್‌ನಿಂದ ಏನೋ ತಂದಿದ್ರು ಪುಟ್ಟಣ್ಣ ಕಣಗಾಲ್?