ಸ್ಯಾಂಡಲ್‌ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ ಅವರ ಎಂಗೇಜ್‌ಮೆಂಟ್ ಇಂದು ನಡೆಯುತ್ತಿದೆ, ನವೆಂಬರ್‌ನಲ್ಲಿ ಮದುವೆ ನಡೆಯಲಿದೆ ಎಂದೆಲ್ಲಾ ಗಾಳಿ ಸುದ್ದಿ ಜೋರಾಗಿ ಹಬ್ಬಿತ್ತು. ಬಹುಕಾಲದ ಉದ್ಯಮಿ ಗೆಳೆಯನ ಜೊತೆ ನಟಿ ರಮ್ಯಾ...
ಸ್ಯಾಂಡಲ್‌ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ (Ramya alias Divya Spandana) ಅವರ ಎಂಗೇಜ್‌ಮೆಂಟ್ ಇಂದು ನಡೆಯುತ್ತಿದೆ, ನವೆಂಬರ್‌ನಲ್ಲಿ ಮದುವೆ ನಡೆಯಲಿದೆ ಎಂದೆಲ್ಲಾ ಗಾಳಿ ಸುದ್ದಿ ಜೋರಾಗಿ ಹಬ್ಬಿತ್ತು. ಬಹುಕಾಲದ ಉದ್ಯಮಿ ಗೆಳೆಯನ ಜೊತೆ ನಟಿ ರಮ್ಯಾ, ದಿವ್ಯ ಸ್ಪಂದನ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಹೊಟೆಲ್ ಒಂದರಲ್ಲಿ ಎಂಗೇಜ್‌ಮೆಂಟ್ ನಡೆದಿದೆ. ಅವರ ಹುಟ್ಟುಹಬ್ಬದ ದಿನ (ನವೆಂಬರ್ 29) ಮದುವೆ ನಡೆಯಲಿದೆ ಎಂದು ಸುದ್ದಿ ಹರಡಿತ್ತು. ಆದರೆ ಅದು ನಿಜವೇ?
ಆದರೆ, ಈ ಸುದ್ದಿ ನಿಜವೇ ಎಂದು ಕನ್ಫರ್ಮ್ ಮಾಡಿಕೊಂಡಾಗ, ಅದು ನಿಜವಲ್ಲ, ನಟಿ ರಮ್ಯಾ ಅವರು ಆಪ್ತರೊಬ್ಬರ ಫಂಕ್ಷನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೇ ಈ ಸುದ್ದಿ ಹಬ್ಬಿದೆ ಎನ್ನಲಾಗಿದೆ. ಈ ಸುದ್ದಿ ಹಬ್ಬಿದಾಗ ಬಹಳಷ್ಟು ಮಂದಿ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಚರ್ಚೆ ಮಾಡತೊಡಗಿದ್ದರು ಕಾರಣ, ನಟಿ ರಮ್ಯಾ ಅವರನ್ನು ಹೋದಲ್ಲಿ ಬಂದಲ್ಲಿ ಎಲ್ಲರೂ ಮದುವೆ ಬಗ್ಗೆ ಕೇಳುತ್ತಿದ್ದರು. ಅವರ ಮದುವೆ ಬಗ್ಗೆ ಎಲ್ಲರೂ ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದಾರೆ.
ಆರ್ಮುಗಂ ರವಿಶಂಕರ್ ಪುತ್ರನಿಗೆ ಶಿವಣ್ಣ ಸಾಥ್; ಅದ್ವೇ ಕನಸು 'ಸುಬ್ರಹ್ಮಣ್ಯ' ಫಸ್ಟ್ ಲುಕ್ ರಿಲೀಸ್
ನಟಿ ರಮ್ಯಾ ಅವರು ಕನ್ನಡದಲ್ಲಿ ಒಂದು ದಶಕಗಳಿಗೂ ಹೆಚ್ಚು ಕಾಲ ಸ್ಟಾರ್ ನಟಿಯಾಗಿ ಮೆರೆದವರು. ಪಕ್ಕದ ತಮಿಳು ಚಿತ್ರರಂಗದಲ್ಲಿ ಕೂಡ ನಟಿಸಿ ಸೈ ಎನ್ನಿಸಿಕೊಂಡವರು. ಆ ಬಳಿಕ ರಾಜಕೀಯಕ್ಕೆ ಪ್ರವೇಶಿಸಿದ್ದ ನಟಿ ರಮ್ಯಾ, ಮಂಡ್ಯದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಎಂಪಿ ಕೂಡ ಆಗಿದ್ದವರು. ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾವನ್ನು ಹ್ಯಾಂಡಲ್ ಮಾಡಿ ಸಾಕಷ್ಟು ಸುದ್ದಿಯಾಗಿದ್ದವರು.
ಸ್ಯಾಂಡಲ್‌ವುಡ್ ಚಿತ್ರರಂಗದಲ್ಲಿ ನಟಿ ರಮ್ಯಾ ಅವರು ಮತ್ತೆ ನಟಿಯಾಗಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾವನ್ನು ನಿರ್ಮಿಸಿ ತಾವು ಚಿತ್ರರಂಗದಿಂದ ದೂರವಾಗಿಲ್ಲ ಎಂಬುದನ್ನು ಖಾತ್ರಿ ಪಡಿಸಿದ್ದಾರೆ ಎನ್ನಬಹುದು. ಆಗಾಗ ನಟಿ ರಮ್ಯಾ ಮದುವೆ ಬಗ್ಗೆ ಗಾಸಿಪ್ ಹಬ್ಬುತ್ತಲೇ ಇದೆ. ಆದರೆ, ಇನ್ನೂ ಅ ಸುದ್ದಿ ಕನ್ಫರ್ಮ್ ಆಗುವ ಕಾಲ ಬಂದಿಲ್ಲ ಎನ್ನಬಹುದು. ಆದರೆ, ಯಾವಾಗ ಬೇಕಾದರೂ ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಮದುವೆ ಸುದ್ದಿ ನಿಜವಾಹಬಹುದು, ಕಾಯುತ್ತಿರಿ!
ಅಘೋರಿ ಪಾತ್ರಕ್ಕಾಗಿ ವಿಭೂತಿ ಬಳಿದುಕೊಂಡಿದ್ದಕ್ಕೆ ರಾಧಿಕಾ ಕುಮಾರಸ್ವಾಮಿಗೆ ಏನಾಗಿತ್ತು ಗೊತ್ತಾ?