ಸಾನ್ವಿ ಸುದೀಪ್ ಅವರು ತಮ್ಮ ತಂದೆ ಸುದೀಪ್ ಮತ್ತು ನಟ ನಾನಿ ಜೊತೆಗಿನ ಹಳೆಯ ಮತ್ತು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಇದು ಈಗಾ ಚಿತ್ರದ ಮುಂದುವರಿದ ಭಾಗದ ಊಹಾಪೋಹಗಳಿಗೆ ಕಾರಣವಾಗಿದೆ.
ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ (Sanvi Sudeep) ತುಂಬಾ ಆ್ಯಕ್ಟೀವ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸಾನ್ವಿ ಸುದೀಪ್ ತುಂಬಾನೆ ಆ್ಯಕ್ಟಿವ್ ಇದ್ದಾರೆ. ಸಿನಿಮಾ ನಂಟು ಇದ್ದೇ ಇದೆ. ಸಂಗೀತ ಬಗ್ಗೆ ತುಂಬಾನೆ ಆಸಕ್ತಿ ಇದೆ. ಇದೆಲ್ಲದರ ನಡುವೆ ಈಗ ಹೊಸದೊಂದು ಫೋಟೋವನ್ನು ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.
ನಟ ನಾನಿ ಮತ್ತು ಅಪ್ಪ ಸುದೀಪ್ ಜೊತೆಗಿರುವ 12 ವರ್ಷಗಳ ಹಿಂದಿನ ಫೋಟೋ ಮತ್ತು ಈಗಿನ ಫೋಟೋ ಹಾಕಿದ್ದು, 12 ವರ್ಷಗಳ ಅಂತರದಲ್ಲಿ, ಸ್ಪಷ್ಟವಾಗಿ ವಯಸ್ಸಾಗುತ್ತಿರುವ ಏಕೈಕ ವ್ಯಕ್ತಿ ನಾನು. ಈ ಇಬ್ಬರು ಸ್ತಂಭಗಳನ್ನು ಹೊಂದಿದ್ದಕ್ಕಾಗಿ ಎಂದೆಂದಿಗೂ ಕೃತಜ್ಞ ಎಂದು ಬರೆದುಕೊಂಡಿದ್ದಾರೆ.
ಹಂಸಲೇಖ ಇದ್ರೆ ಶೋ ನೋಡಲ್ಲ, ಸರಿಗಮಪ ಬಹಿಷ್ಕಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕರೆ!
ಸಾನ್ವಿ ಸುದೀಪ್ ಈ ಫೋಟೋ ಹಾಕಿದ ತಕ್ಷಣವೇ ಹಲವು ಮಂದಿ ಈಗಾ ಸಿನೆಮಾದ ಭಾಗ 2 ಬರುತ್ತಿರುವುದು ಕನ್ಫರ್ಮ್ ಎಂದು ಕಾಮೆಂಟ್ ಮಾಡಿದ್ದಾರೆ. 2012 ರಲ್ಲಿ ಬಂದ ಸಿನೆಮಾ ಇದಾಗಿದ್ದು, ಕಿಚ್ಚ ಸುದೀಪ್ ವಿಲನ್ ಪಾತ್ರದಲ್ಲಿ ನಟಿಸಿದ್ದರು. ತೆಲುಗು ಭಾಷೆಯ ಫ್ಯಾಂಟಸಿ ಆಕ್ಷನ್ ಚಿತ್ರವಾಗಿದ್ದು ಎಸ್ಎಸ್ ರಾಜಮೌಳಿ ಬರೆದು ನಿರ್ದೇಶಿಸಿದ್ದರು. ಚಿತ್ರದಲ್ಲಿ ನಾನಿ , ಸಮಂತಾ , ಸುದೀಪ ನಟಿಸಿದ್ದರು. ತೆಲುಗು ಜೊತೆಗೆ ತಮಿಳಿನಲ್ಲಿ ನಾನ್ ಈ ಎಂಬ ಹೆಸರಿನಲ್ಲಿ ಏಕಕಾಲಕ್ಕೆ ಬಂದಿತ್ತು.
ಈ ಸಿನೆಮಾ ಮಲಯಾಳಂಗೆ ಕೂಡ ಡಬ್ ಆಯ್ತು. 30 ರಿಂದ 40 ಕೋಟಿ ವೆಚ್ಚದ ಸಿನೆಮಾ ಆದ 125 ಕೋಟಿ ಕಲೆಕ್ಷನ್ ಮಾಡಿತ್ತು. ಈಗ ಸಾನ್ವಿ ಸುದೀಪ್ ಪೋಸ್ಟ್ ಮಾಡಿರುವ ಫೋಟೋದಲ್ಲಿ ಹಳೆಯ ಫೋಟೋ ಈಗಾ ಸಿನೆಮಾದ ಶೂಟಿಂಗ್ ಸಮಯದಲ್ಲಿ ತೆಗೆದ ಫೋಟೋವಾಗಿದೆ. ಹೀಗಾಗಿ ಈಗಾ-2 ಬರಲಿದ್ದು ನಾನಿ ಮತ್ತು ಸುದೀಪ್ ಮತ್ತೆ ಭೇಟಿಯಾಗಿದ್ದಾರೆಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ನಾದಬ್ರಹ್ಮ ಹಂಸಲೇಖರ ಮಕ್ಕಳು ಏನ್ಮಾಡ್ತಿದ್ದಾರೆ? ಪ್ರೀತಿಯ ಮಗಳ ಸಾಧನೆ ಇದು
60 ನೇ ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಚಲನಚಿತ್ರ , ಅತ್ಯುತ್ತಮ ನಿರ್ದೇಶಕ ಅತ್ಯುತ್ತಮ ಪೋಷಕ ನಟ - ತೆಲುಗು (ಸುದೀಪ್). ಸೇರಿದಂತೆ ಐದು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಸುದೀಪ ಈ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರೀಯ ಮನ್ನಣೆ ಪಡೆದರು. ಅನೇಕ ನಟರು ನೆಗೆಟಿವ್ ರೋಲ್ ಮೆಚ್ಚಿದರು.