ಫಿಲ್ಮ್ ಚೇಂಬರ್​ನ ಮಾಜಿ ಅಧ್ಯಕ್ಷ ಹಾಗೂ ಸಿನಿಮಾ ನಿರ್ಮಾಪಕ ಭಾಮಾ ಹರೀಶ್​ಗೆ ಹೃದಯಾಘಾತ!

By Shriram Bhat  |  First Published Mar 28, 2024, 1:33 PM IST

ಫಿಲ್ಮ್ ಚೇಂಬರ್​ನ ಮಾಜಿ ಅಧ್ಯಕ್ಷ ಹಾಗೂ ಸಿನಿಮಾ ನಿರ್ಮಾಪಕರಾದ ಭಾಮಾ ಹರೀಶ್​ಗೆ ಹೃದಯಾಘಾತ ಆಗಿದೆ. ಇಂದು ಬೆಳಿಗ್ಗೆ ಭಾಮಾ ಹರೀಶ್​ಗೆ ಹೃದಯಾಘಾತ ಆಗಿದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 


ಫಿಲ್ಮ್ ಚೇಂಬರ್​ನ ಮಾಜಿ ಅಧ್ಯಕ್ಷ ಹಾಗೂ ಸಿನಿಮಾ ನಿರ್ಮಾಪಕರಾದ ಭಾಮಾ ಹರೀಶ್​ಗೆ ಹೃದಯಾಘಾತ ಆಗಿದೆ. ಇಂದು ಬೆಳಿಗ್ಗೆ ಭಾಮಾ ಹರೀಶ್​ಗೆ ಹೃದಯಾಘಾತ ಆಗಿದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭಾಮಾ ಹರೀಶ್ ಅವರನ್ನು ತೀವ್ರ ನಿಗಾ ಘಟನದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. 

ದರ್ಶನ್ ಮೊಟ್ಟ ಮೊದಲ ಸಿನಿಮಾ ‘ಮೆಜೆಸ್ಟಿಕ್’ ಸಹ ನಿರ್ಮಾಣ ಸೇರಿದಂತೆ ಕೆಲವು ಕನ್ನಡ ಸಿನಿಮಾಗಳನ್ನು ಭಾಮಾ ಹರೀಶ್ ನಿರ್ಮಾಣ ಮಾಡಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಹಿಸಿ ಅವರು ಸಿನಿಮಾ ಉದ್ಯಮದಲ್ಲಿ ತಮ್ಮದೇ ಆದ ಹೆಸರು ಸಂಪಾದಿಸಿಕೊಂಡಿದ್ದಾರೆ. 

Tap to resize

Latest Videos

ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ, ಐಸಿಯು ನಲ್ಲಿ ಅಡ್ಮಿಟ್ ಆಗಿ ಭಾಮಾ ಹರೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಿಗ್ಗೆ ಅವರಿಗೆ ಹೃದಯ
ಆಘಾತವಾಗಿದ್ದು, ತಕ್ಷಣವೇ ಅವರನ್ನು ಜಯದೇವ ಆಸ್ಪತ್ರೆಗೆ ಸೇರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ.

click me!