ಹಿರಿಯ ನಟ ನರಸಿಂಹರಾಜು ಬಗ್ಗೆ ವಿಷ್ಣುವರ್ಧನ್ ಹೇಳಿದ್ದೇನು; ವೈರಲ್ ವೀಡಿಯೋದಲ್ಲೇನಿದೆ?

By Shriram Bhat  |  First Published Mar 27, 2024, 7:15 PM IST

ನಟ ನರಸಿಂಹರಾಜು ಅವರು ತಮ್ಮ ಕಾಲದಲ್ಲಿ, ಅಂದರೆ 50-60ರ ದಶಕದಲ್ಲಿ ಸ್ಟಾರ್ ನಟರಾಗಿದ್ದವರು. ಅವರ ಕಾಲ್‌ಶೀಟ್‌ ಪಡೆಯವುದೇ ಮಹಾ ಕಷ್ಟವಾಗಿತ್ತು ಎನ್ನಲಾಗಿದೆ. ಅದರಲ್ಲೂ ಡಾ ರಾಜ್‌ಕುಮಾರ್ ಸಿನಿಮಾದ ಹಾಸ್ಯ ಪಾತ್ರಕ್ಕೆ ಹೆಚ್ಚಾಗಿ ನರಸಿಂಹರಾಜು ಅವರನ್ನೇ ಅಯ್ಕೆ ಮಾಡಲಾಗುತ್ತಿತ್ತು. 


ಸ್ಯಾಂಡಲ್‌ವುಡ್ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ (Vishnuvardhan) ಹಿರಿಯ ನಟ, ಕಾಮಿಡಿ ಕಿಂಗ್ ನರಸಿಂಹರಾಜು (Narasimharaju) ಬಗ್ಗೆ ಮಾತನಾಡಿರುವ ಹಳೆಯ ವೀಡಿಯೋವೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗತೊಡಗಿದೆ. ವಿಷ್ಣುವರ್ಧನ್ ಅವರು ನರಸಿಂಹರಾಜು ಕಾಲದಲ್ಲಿ ಇದ್ದಂತಹ ನಟರು, ಅವರಿಬ್ಬರೂ ಸಿನಿಮಾದಲ್ಲಿ ಸಹನಟರು ಮಾತ್ರವಲ್ಲ, ಅಂದಿನ ಕಾಲದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದವರು. ನರಸಿಂಹರಾಜು ಅವರನ್ನು ಸಿನಿಮಾದಲ್ಲಿ ಮಾತ್ರ ನೋಡಿದವರಲ್ಲ ವಿಷ್ಣುವರ್ಧನ್. ನರಸಿಂಹರಾಜು ಅವರು ಭಾರೀ ಸಂಭಾವನೆ ತೆಗೆದುಕೊಳ್ಳುತ್ತಿದ್ದು ಸ್ಟಾರ್ ನಟರಾಗಿದ್ದ ಕಾಲದಲ್ಲಿ ವಿಷ್ಣುವರ್ಧನ್ ಚಿತ್ರರಂಗಕ್ಕೆ ಯುವನಟರಾಗಿ ಕಾಲಿಟ್ಟವರು.

ನಟ ನರಸಿಂಹರಾಜು ಅವರು ತಮ್ಮ ಕಾಲದಲ್ಲಿ, ಅಂದರೆ 50-60ರ ದಶಕದಲ್ಲಿ ಸ್ಟಾರ್ ನಟರಾಗಿದ್ದವರು. ಅವರ ಕಾಲ್‌ಶೀಟ್‌ ಪಡೆಯವುದೇ ಮಹಾ ಕಷ್ಟವಾಗಿತ್ತು ಎನ್ನಲಾಗಿದೆ. ಅದರಲ್ಲೂ ಡಾ ರಾಜ್‌ಕುಮಾರ್ ಸಿನಿಮಾದ ಹಾಸ್ಯ ಪಾತ್ರಕ್ಕೆ ಹೆಚ್ಚಾಗಿ ನರಸಿಂಹರಾಜು ಅವರನ್ನೇ ಅಯ್ಕೆ ಮಾಡಲಾಗುತ್ತಿತ್ತು. ಆದರೆ, ಡಾ ರಾಜ್‌ ಕಾಲ್‌ಶೀಟ್ ಸಿಕ್ಕು ಶೂಟಿಂಗ್ ಪ್ರಾರಂಭಿಸುವುದಕ್ಕೂ ಮೊದಲು ನಟ ನರಸಿಂಹರಾಜು ಕಾಲ್‌ಶೀಟ್‌ಗೆ ತುಂಬಾ ಸಮಯ ಕಾಯಬೇಕಿತ್ತು. ಅಷ್ಟೇ ಅಲ್ಲ, ನಟ ನರಸಿಂಹರಾಜು ಸಂಭಾವನೆ ಅಂದಿನ ಎಲ್ಲ ಹೀರೋಗಳಿಗಿಂತಲೂ ಹೆಚ್ಚು ಇರುತ್ತಿತ್ತು ಎನ್ನಲಾಗಿದೆ. 

Tap to resize

Latest Videos

ಖಾಯಿಲೆ ಬಿದ್ದರೂ ಕಂಗಾಲಾಗದ ನಟಿ ಸಮಂತಾ ಹೇಳ್ಬಿಟ್ರು ಲೈಫ್‌ ಮಹಾ ಸೀಕ್ರೆಟ್, ರಿಯಲಿ ಗ್ರೇಟ್!

ಇಂತ ಮಹಾನ್ ನಟ, ಹಾಸ್ಯ ಚಕ್ರವರ್ತಿ ಬಿರುದು ಪಡೆದಿದ್ದ ನಟ ನರಸಿಂಹರಾಜು ಬಗ್ಗೆ ವಿಷ್ಣುವರ್ಧನ್ ಮನಬಿಚ್ಚಿ ಮಾತನಾಡಿದ್ದರು. '60 ವರ್ಷದ ಚಿತ್ರರಂಗದ ಬೆಳವಣಿಗೆ ಏನಿದೆ, ಅದಕ್ಕೆ ಬಹಳಷ್ಟು ಕಾಂಟ್ರಿಬ್ಯೂಟ್ ಮಾಡಿರೋ ಜನಗಳು ಅವರು. ಸಮಾಜವನ್ನು ಎದುರಿಸಿ, ಆವಾಗಿನ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಿ, ಅವರು ಹಗಲು ರಾತ್ರಿ ನಾಟಕಗಳನ್ನು ಮಾಡಿ,  ಜನರನ್ನು ಅದಕ್ಕೆ ಕರೆಸಿ, ಸಿನಿಮಾದಲ್ಲೂ ನಟಿಸಿ, ಅದಕ್ಕೊಂದು ಪ್ರತ್ಯೇಕ ಮರ್ಯಾದೆಯನ್ನು ಗಳಿಸಿಕೊಟ್ಟವರು ಅವರು. 

ಯಶ್ ಕೊಟ್ರು ಶಾಕಿಂಗ್ ಸ್ಟೇಟ್‌ಮೆಂಟ್, ರಾಕಿಂಗ್ ಸ್ಟಾರ್ ಮಾತಿಗೆ ಫುಲ್ ಫಿದಾ ಆಗೋದ್ರು ಫ್ಯಾನ್ಸ್!

ಸೃಷ್ಟಿನಲ್ಲಿ ಹೇಗೇ ಇದ್ರೂ ಅದಕ್ಕೊಂದು ಅಂದ ಇತ್ತು, ಅದಕ್ಕೊಂದು ಹೆಸರಿತ್ತು, ಜನರು ಅದನ್ನು ಎಂಜಾಯ್ ಮಾಡಿದ್ರು, ಇವತ್ತು ನರಸಿಂಹರಾಜು ಅಣ್ಣ ಇಲ್ಲದೇ ಇದ್ರೂ ಅವರ ಡೆಂಚರ್ ಟೈಪ್ ಇದ್ಯಲ್ಲಾ, ಅದಕ್ಕೆ ಅವ್ರದೇ ಹೆಸರು ಇದ್ಯಲ್ಲಾ, ಅದಕ್ಕೆ ಅದ್ಕೊಂಬಹುದು ನೀವು, ವ್ಯಕ್ತಿನಲ್ಲಿ ಯಾವುದೇ ಒಂದು ಮೈನಸ್ ಹೇಗೆ ಪ್ಲಸ್ ಆಗಬಹುದು ಅನ್ನೋದಕ್ಕೆ ನಮ್ ನರಸಿಂಹರಾಜು ಅಣ್ಣನೇ ದೊಡ್ಡ ದಂತಕಥೆ ಎನ್ನಬಹುದು. 

ಸಿನಿಮಾ ನಟ ಮಾತ್ರ ಹೀರೋ ಅಲ್ಲ, ಯಾರಾದ್ರೂ ಆಗಬಹುದು; ಯಾಕೆ ಹೀಗಂದ್ಬಿಟ್ರು ರಾಮ್‌ ಚರಣ್?

click me!