ಹೀರೋ ಪಟ್ಟಕ್ಕೆ ಟವೆಲ್ ಹಾಕಿದ ಪಾರು ಸೀರಿಯಲ್ ಆದಿ; ಯಾರದು ಸಿನಿಮಾ, ಯಾವಾಗ ಬರ್ತಿದೆ?

Published : Mar 28, 2024, 12:28 PM ISTUpdated : Mar 28, 2024, 12:30 PM IST
ಹೀರೋ ಪಟ್ಟಕ್ಕೆ ಟವೆಲ್ ಹಾಕಿದ ಪಾರು ಸೀರಿಯಲ್ ಆದಿ; ಯಾರದು ಸಿನಿಮಾ, ಯಾವಾಗ ಬರ್ತಿದೆ?

ಸಾರಾಂಶ

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಿಮಾ ಸಿನಿಮಾ ಕೊನೆ ಹಂತದ ಚಿತ್ರೀಕರಣದಲ್ಲಿದೆ.  ಬೆಂಗಳೂರು, ಸಕಲೇಶಪುರ, ಮಡಿಕೇರಿ, ಹುಲಿಯೂರು ದುರ್ಗ ಸುತ್ತಮುತ್ತ ಈಗಾಗ್ಲೇ ಶೂಟಿಂಗ್ ನಡೆಸಲಾಗಿದೆ. 

ಪಾರು ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮನ ಗೆದ್ದಿರುವ ಆದಿ ಊರೂಫ್ ಶರತ್ ಪದ್ಮನಾಭ್ ನಾಯಕನಾಗಿ ಸ್ಯಾಂಡಲ್ ವುಡ್  ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಶರತ್ ನಾಯಕನಾಗಿ ಬಣ್ಣ ಹಚ್ಚಿರುವ ಚೊಚ್ಚಲ ಸಿನಿಮಾಗೆ ಅನಿಮಾ ಎಂಬ ಶೀರ್ಷಿಕೆ ಇಡಲಾಗಿದೆ. ಅನಿಮಾ ಎಂದರೆ ಪ್ರತಿಬಿಂಬ ಕಾಣದ ಕನ್ನಡಿ ಎಂದರ್ಥ. ಹೊಸತನದ ಕಥೆಯೊಂದಿಗೆ, ವಿಭಿನ್ನ ನಿರೂಪಣೆ ಹೊತ್ತು ಅನಿಮಾ ಸಿನಿಮಾ ಮೂಡಿಬರಲಿದೆ ಎಂದಿದೆ ಈ ಸಿನಿಮಾ ಟೀಮ್.

ಅನಿಮಾಗೆ ವರ್ಧನ್ ಎಂ ಎಚ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ರೈತರ ಕುರಿತ ಹೊನ್ನು ಬಿತ್ಯಾರು ಎಂಬ ಕಿರುಚಿತ್ರ ಮಾಡಿದ್ದ ವರ್ಧನ್ ಈ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಟೈಟಲ್ ಪೋಸ್ಟರ್ ವಿಭಿನ್ನವಾಗಿದ್ದು, ದಟ್ಟ ಕಾಡಿನ ಮಧ್ಯೆ ಸಾಗುತ್ತಿರುವ ಕಾರು ನಾನಾ ಕಥೆಯನ್ನು ಬಿಚ್ಚಿಡುತ್ತಿದೆ.

ಖಾಯಿಲೆ ಬಿದ್ದರೂ ಕಂಗಾಲಾಗದ ನಟಿ ಸಮಂತಾ ಹೇಳ್ಬಿಟ್ರು ಲೈಫ್‌ ಮಹಾ ಸೀಕ್ರೆಟ್, ರಿಯಲಿ ಗ್ರೇಟ್!

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಿಮಾ ಸಿನಿಮಾ ಕೊನೆ ಹಂತದ ಚಿತ್ರೀಕರಣದಲ್ಲಿದೆ.  ಬೆಂಗಳೂರು, ಸಕಲೇಶಪುರ, ಮಡಿಕೇರಿ, ಹುಲಿಯೂರು ದುರ್ಗ ಸುತ್ತಮುತ್ತ ಈಗಾಗ್ಲೇ ಶೂಟಿಂಗ್ ನಡೆಸಲಾಗಿದೆ. ಎ ಡ್ರೀಮರ್ಸ್ ಸ್ಟುಡಿಯೋ ಬ್ಯಾನರ್‌ ಅಡಿಯಲ್ಲಿ ಈ  ಚಿತ್ರ ನಿರ್ಮಾಣವಾಗ್ತಿದೆ.

ನರಸಿಂಹರಾಜು ಡೆಂಚರ್‌ ಪ್ಲಸ್ ಬಗ್ಗೆ ಹೇಳ್ಬಿಟಿದ್ರು ನೋಡಿ ವಿಷ್ಣುವರ್ಧನ್; ವೈರಲ್ ವೀಡಿಯೋದಲ್ಲೇನಿದೆ?

ಶರತ್ ನಾಯಕನಾಗಿ ನಟಿಸ್ತಿದ್ದು, ಅನುಷಾ ಕೃಷ್ಣ ನಾಯಕಿಯರಾಗಿ ಬಣ್ಣ ಹಚ್ಚಿದ್ದು, ಪಂಕಜ್ ಎಸ್ ನಾರಾಯಣ್, ಯುವ ಶೆಟ್ಟಿ, ವಾಣಿ, ಸೂರಿ, ಸುಷ್ಮಿತಾ,  ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.  ಎನ್ ಕೆ ರಾಜ್ ಛಾಯಾಗ್ರಹಣ, ವಿರಾಜ್ ವಿಶ್ವ ಸಂಭಾಷಣೆ, ರೋನಾದ ಬಕ್ಕೇಶ್ ಹಿನ್ನೆಲೆ ಸಂಗೀತ, ಉಜ್ವಲ್ ಚಂದ್ರ ಸಂಕಲನ ಅನಿಮಾನ ಚಿತ್ರಕ್ಕಿದೆ.

ಯಶ್ ಕೊಟ್ರು ಶಾಕಿಂಗ್ ಸ್ಟೇಟ್‌ಮೆಂಟ್, ರಾಕಿಂಗ್ ಸ್ಟಾರ್ ಮಾತಿಗೆ ಫುಲ್ ಫಿದಾ ಆಗೋದ್ರು ಫ್ಯಾನ್ಸ್!

ಅಂದಹಾಗೆ, ಆದಿ ಖ್ಯಾತಿಯ ನಟ ಶರತ್ ಪದ್ಮನಾಭ್ ಅವರು ಪಾರು ಸೀರಿಯಲ್‌ನಲ್ಲಿ ನಟಿಸಿ ಬಹಳಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಆದಿಗೆ ಮಹಿಳಾ ಮಣಿಗಳು ಬಹಳಷ್ಟು ಸಂಖ್ಕ್ಯೆಯಲ್ಲಿ ಫ್ಯಾನ್ಸ್ ಆಗಿದ್ದಾರೆ. ಈಗ ಸಿನಿಮಾದಲ್ಲೂ ನಟಿಸಲಿರುವ ಶರತ್ ಪದ್ಮನಾಭ್ ಇಲ್ಲಿಯೂ ಕೂಡ ಸಖತ್ ಮಿಂಚಿದರೆ ಅಚ್ಚರಿಯೇನೂ ಇಲ್ಲ ಎನ್ನಬಹುದು. ಏಕೆಂದರೆ, ಯಾರ ಹಣೆಬರಹದಲ್ಲಿ ಏನಿದೆಯೋ ಅಂತಾರಲ್ಲ, ಹಾಗೇ...!

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?