
ಸ್ಯಾಂಡಲ್‌ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ತಮ್ಮ 43ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿರುವುದು ಗೊತ್ತೇ ಇದೆ. ಬರ್ತ್ಡೇ ಸಂಭ್ರಮದ ವೇಳೆ ಮುಂದೆ ಬರಲಿರೋ ಪ್ರಾಜೆಕ್ಟ್, ಇಂಡಸ್ಟ್ರಿಯಲ್ಲಿ ಓಡ್ತಿರೋ ಗಾಸಿಪ್, ಪ್ಯಾನ್ ಇಂಡಿಯಾ ಜರ್ನಿ, ಸಿನಿಮಾ ಇಂಡಸ್ಟ್ರಿಯ ಸ್ಥಿತಿಗತಿ ಎಲ್ಲದರ ಬಗ್ಗೆ ಉತ್ತರ ಕೊಟ್ಟಿದ್ದಾರೆ ರಿಷಬ್. ಹಾಗಾದ್ರೆ ರಿಷಬ್ ಹೇಳಿದ ಆ ಗುಟ್ಟುಗಳು ಏನು..? ವಾಚ್ ದಿಸ್ ಸ್ಟೋರಿ.
ಬರ್ತ್ಡೇ ದಿನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯವರು ಈ ಮೂರು(3) ಗುಟ್ಟುಗಳನ್ನು ಹೇಳಿದ್ದಾರೆ.
ಜೈ ಹನುಮಾನ್ ತೆಲುಗು ಚಿತ್ರವಲ್ಲ.. ಅಪ್ಪಟ ಕನ್ನಡ ಚಿತ್ರ..!
ವಿವಾದಕ್ಕೆ ತಲೆ ಕೆಡಿಸಿಕೊಳ್ಳಲ್ಲ.. ಶಿವಾಜಿ ಸಿನಿಮಾ ಬಿಡಲ್ಲ..!
ಕಾಂತಾರ ಹೊಸ ಅಧ್ಯಾಯ ರೆಡಿಯಾಗ್ತಿರೋದು ಸುಳ್ಳಲ್ಲ..!
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದು, ಚಿತ್ರರಂಗದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ, ಸಣ್ಣ ಪುಟ್ಟ ಪಾತ್ರ ಮಾಡ್ತಾ ಒಂದೊಂದೇ ಹೆಜ್ಜೆ ಇಟ್ಟುಕೊಂಡು ಬಂದವರು ರಿಷಬ್. ಸದ್ಯ ಶೆಟ್ರು ಗ್ಲೋಬಲ್ ಸ್ಟಾರ್ ಪಟ್ಟ ಪಡೆದುಕೊಂಡಿದ್ದಾರೆ.
ಕಾಂತಾರ ರಿಷಬ್ ಬದುಕಿನ ಟರ್ನಿಂಗ್ ಪಾಯಿಂಟ್. ಕಾಂತಾರದಿಂದ ಸಿಕ್ಕ ಜಾಗತಿಕ ಮನ್ನಣೆ ರಿಷಬ್ಅವರನ್ನು ರಾತ್ರೋರಾತ್ರಿ ಗ್ಲೋಬಲ್ ಸ್ಟಾರ್ ಆಗಿಸಿದೆ. ಕಾಂತಾರ ಚಾಪ್ಟರ್-1 ಮತ್ತೊಂದು ಲೆವೆಲ್ ಎತ್ತರಕ್ಕೆ ಕೊಂಡೊಯ್ದಿದೆ.
ಸದ್ಯ ರಿಷಬ್ ಎರಡು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಮೊದನೇಯದ್ದು ಜೈ ಹನುಮಾನ್. ಪ್ರಶಾಂತ್ ವರ್ಮಾ ನಿರ್ದೇಶನದ ಮೈತ್ರಿ ಮೂವೀಸ್ ನಿರ್ಮಾಣದ ಜೈ ಹನುಮಾನ್ ತೆಲುಗು ಮೂವಿನಾ..? ಇಲ್ಲಾ ಅಂತಾರೆ ರಿಷಬ್. ಬೇರೆ ಬೇರೆ ಭಾಷೆಯ ನಟರು ಇರೋ ಸಿನಿಮಾ ಅದು. ಅವರವರು ಅವರವರ ಭಾಷೆಯಲ್ಲಿ ಮಾತನಾಡ್ತಾರೆ, ಬಳಿಕ ಡಬ್ಬಿಂಗ್ ಆಗುತ್ತೆ. ಹನುಮಂತನೂ ಕನ್ನಡದವನು.. ರಿಷಬ್ ಕೂಡ ಕನ್ನಡಿಗ.. ಸೋ ಇದು ಅಪ್ಪಟ ಕನ್ನಡ ಸಿನಿಮಾ ಅಂತಾರೆ ರಿಷಬ್.
ಇದಾದ ಬಳಿಕ ರಿಷಬ್ ನಟಿಸ್ತಾ ಇರೋ ನೆಕ್ಸ್ಟ್ ಸಿನಿಮಾ ಛತ್ರಪತಿ ಶಿವಾಜಿ ಮಹಾರಾಜ್. ಅಸಲಿಗೆ ಈ ಸಿನಿಮಾ ಅನೌನ್ಸ್ ಆದಾಗ ಹಲವು ಕನ್ನಡ ಪರ ಸಂಘಟನೆಗಳು ರಿಷಬ್ ಈ ಸಿನಿಮಾ ಮಾಡಬಾರದು ಅಂತ ಒತ್ತಾಯಿಸಿದ್ವು. ಶಿವಾಜಿ ಕನ್ನಡ ವಿರೋಧಿ.. ಅವರ ಬಯೋಪಿಕ್ನಲ್ಲಿ ಕನ್ನಡಿಗರ ನಟಿಸೋದು ಎಷ್ಟು ಸರಿ ಅಂತ ವಾದ ಮಾಡಿದ್ರು.
ಆದ್ರೆ ಈ ವಿವಾದದ ಹೊರತಾಗಿಯೂ ರಿಷಬ್ ಈ ಪ್ರಾಜೆಕ್ಟ್ನಿಂದ ಹಿಂದೆ ಸರಿದಿಲ್ಲ. ಶಿವಾಜಿ ಪಾತ್ರ ಮಾಡಿಯೇ ಸಿದ್ಧ ಅಂದಿದ್ದಾರೆ. ಜೈ ಹನುಮಾನ್ ಬಳಿಕ ಈ ಸಿನಿಮಾ ಶುರುವಾಗಲಿದೆ.
ಇನ್ನು, ಕಾಂತಾರದ ಇನ್ನೊಂದು ಅಧ್ಯಾಯ ಕೂಡ ಬರೋದು ಫಿಕ್ಸ್. ಸದ್ಯ ನಟನೆಯ ಚಿತ್ರಗಳ ಜೊತೆ ಜೊತೆಗೆ ಕಾಂತಾರ ಚಾಪ್ಟರ್ 2 ಸ್ಕ್ರಿಪ್ಟ್ ರೆಡಿಯಾಗ್ತಾ ಇದೆಯಂತೆ. ರಿಷಬ್ ರೈಟರ್ಸ್ ಟೀಂ ಆ ಸ್ಕ್ರಿಪ್ಟ್ನ ಸಿದ್ದಮಾಡ್ತಾ ಇದೆ.
ಕರಾವಳಿ ಪ್ರವಾಸೋಧ್ಯಮ ರಾಯಭಾರಿ ಆಗಿದ್ದು ನಿಜಾನಾ..?
ಇತ್ತೀಚಿಗೆ ರಿಷಬ್, ಸಿಎಂ ಡಿ.ಕೆ ಶಿವಕುಮಾರ್ಅವರನ್ನು ಭೇಟಿ ಮಾಡಿದ್ರು. ರಿಷಬ್ಅವರನ್ನು ಕರ್ನಾಟಕ ಕರಾವಳಿ ಪ್ರವಾಸೋದ್ಯಮ ರಾಯಭಾರಿ ಮಾಡಲಾಗಿದೆ ಅನ್ನೋ ನ್ಯೂಸ್ ಹರಿದಾಡಿದ್ವು. ಆದ್ರೆ ಅದು ಇನ್ನೂ ಅಧಿಕೃತ ಆಗಿಲ್ಲ. ಈ ಕುರಿತ ಮಾತುಕತೆಗೆ ಅಂತಲೇ ರಿಷಬ್ ಸಿಎಂ ಭೇಟಿ ಮಾಡಿದ್ದಾರೆ.
ಒಟ್ಟಿನಲ್ಲಿ, ರಿಷಬ್ ಕೈಯಲ್ಲಿ ಮೂರು ಚಿತ್ರಗಳಿವೆ. ತಲೆಯಲ್ಲಿ ಮತ್ತೊಂದಿಷ್ಟು ಕನಸುಗಳಿವೆ. ಇವೆಲ್ಲ ಕನಸುಗಳ ನಡುವೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿರೋ ರಿಷಬ್ ಹೊಸ ಅಧ್ಯಾಯ ಸ್ಟಾರ್ಟ್ ಅಂದಿದ್ದಾರೆ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.