ಸ್ಯಾಂಡಲ್‌ವುಡ್‌ಗೆ ಆಘಾತ, ಯುವ ನಿರ್ದೇಶಕ ಅಭಿರಾಮ್ ಕೊರೋನಾಕ್ಕೆ ಬಲಿ

Published : May 28, 2021, 10:14 PM ISTUpdated : May 28, 2021, 10:17 PM IST
ಸ್ಯಾಂಡಲ್‌ವುಡ್‌ಗೆ ಆಘಾತ, ಯುವ ನಿರ್ದೇಶಕ ಅಭಿರಾಮ್ ಕೊರೋನಾಕ್ಕೆ ಬಲಿ

ಸಾರಾಂಶ

* ಕೊರೋನಾಕಕ್ಕೆ ಬಲಿಯಾದ ಸ್ಯಾಂಡಲ್‌ ವುಡ್ ನಿರ್ದೇಶಕ * ಕಳೆದೊಂದು ವಾರದಿಂದ ಕೊರೋನಾ‌ ಸೋಂಕಿನಿಂದ ಬಳಲುತ್ತಿದ್ದರು *  ಯುವ ನಿರ್ದೇಶಕ ಅಭಿರಾಮ್ ಇನ್ನಿಲ್ಲ * ಸಂಯುಕ್ತ 2, ಹಾಗು 0% ಲವ್ ಸಿನಿಮಾದ ನಿರ್ದೇಶಕ

ಬೆಂಗಳೂರು(ಮೇ 28) ಕ್ರೂರಿ ಕೊರೋನಾ ಸ್ಯಾಂಡಲ್‌ ವುಡ್ ಕಾಡುತ್ತಿದೆ. ಕೊರೋನಾಗೆ ನಿರ್ದೇಶಕ ಅಭಿರಾಮ್ ಬಲಿಯಾಗಿದ್ದಾರೆ. ಶುಕ್ರವಾರ ನಿರ್ದೇಶಕ  ಕೊನೆಯುಸಿರೆಳೆದಿದ್ದಾರೆ.

ಕಳೆದೊಂದು ವಾರದಿಂದ ಕೊರೋನಾ‌ ಸೋಂಕಿನಿಂದ ಬಳಲುತ್ತಿದ್ದರು.  ಚಿಕಿತ್ಸೆ ಪಡೆಯದೇ ಮನೆಯಲ್ಲೇ  ಇದ್ದರು. ಕೊನೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಬಳಿಕ ಟೆಸ್ಟ್ ಮಾಡಿಸಿದಾಗ ಕೊರೋನಾ ಪಾಸಿಟೀವ್ ಬಂದಿದೆ. ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದರು.

ಬೆಡ್ ಸಿಗದೆ ಮರೆಯಾದ ಹಿರಿಯ ಜೀವ ರಾಜಾರಾಂ

ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಭಿರಾಮ್ ನಿಧನರಾಗಿದ್ದಾರೆ. ಸಂಯುಕ್ತ 2, ಹಾಗು 0% ಲವ್ ಸಿನಿಮಾ ನಿರ್ದೇಶಿಸಿದ್ದರು. ಇತ್ತೀಚೆಗೆ 0% ಲವ್ ಸಿನಿಮಾದ ನಟ ನಿರ್ಮಾಪಕ ಮಂಜುನಾಥ್ ಕೊರೋನಾಗೆ ಬಲಿಯಾಗಿದ್ದರು. 

ಹಿರಿಯ ನಟ ರಾಜಾರಾಮ್, ಕೃಷ್ಣೇಗೌಡ ಸೇರಿದಂತೆ ಅನೇಕ ಕಲಾವಿದರು ಕೊರೋನಾ ಮಹಾಮಾರಿಯಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 

ರಾಮು ಕೋಟಿ ನಿರ್ಮಾಪಕರಾಗಿ ಬೆಳೆದ ಸ್ಟೋರಿ

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಶೂಟಿಂಗ್‌ನಲ್ಲಿ ಲಕ್ಷಾಂತರ ನಷ್ಟ, ಬಿಗ್‌ಬಾಸ್ ಮುಗಿದ ಬೆನ್ನಲ್ಲೇ ನಟ ಸುದೀಪ್ ವಿರುದ್ಧ ಬೆಂಗಳೂರು ಕಮಿಷನರ್‌ ಗೆ ದೂರು!
ನಟಿ ಪವಿತ್ರಾ ಗೌಡಗೆ 'ಮನೆ ಊಟ' ಕೊಡಲೇಬೇಡಿ; ಸೆಷನ್ಸ್ ಕೋರ್ಟ್ ಊಟದ ಆದೇಶಕ್ಕೆ ಹೈಕೋರ್ಟ್ ತಡೆ!