
ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಮತ್ತೆ ಗುನುಗಬೇಕೆನಿಸುವ ಅದ್ಭುತ ಲವ್ ಸಾಂಗ್‌ಗಳನ್ನು ಕೊಟ್ಟಿರೋ ಖ್ಯಾತ ಕಂಪೋಸರ್ ಅರ್ಜುನ್ ಜನ್ಯ ಈಗ ಮತ್ತೊಂದು ಸೂಪರ್ ಲವ್ ಸ್ಟೋರಿ ಸಿನಿಮಾಗೆ ಸಂಗೀತ ಸಂಯೋಜಿಸಲಿದ್ದಾರೆ.
ಸ್ಯಾಂಡಲ್‌ವುಡ್ ನಿರ್ದೇಶಕ ಶಶಾಂಕ್ ಅವರ ಮುಂದಿನ ಸಿನಿಮಾದಲ್ಲಿ ಅರ್ಜುನ್ ಜನ್ಯ ಹಾಡಿನ ಸೊಗಸು ಸೇರಲಿದೆ. ಶಶಾಂತ್ ಸಿನಿಮಾದಲ್ಲಿ ಕೆಲಸ ಮಾಡೋದಾಗಿ ಹೇಳಿದ್ದಾರೆ ಅರ್ಜುನ್.
ಈ ವಿಚಾರವನ್ನು ಸ್ವತಃ ಟ್ವೀಟ್ ಮಾಡಿದ ಅರ್ಜುನ್ ಜನ್ಯ, ಲವ್ ಸ್ಟೋರಿಗಳಲ್ಲಿ ಕೆಲಸ ಮಾಡುವುದು ಯಾವಾಗಲೂ ಬಹಳ ಸಂತೋಷದ ವಿಚಾರ. ಶಶಾಂಕ್ ಅವರಿಂದ ನಿರೂಪಿಸಲ್ಪಟ್ಟ ಅತ್ಯಂತ ವಿಶಿಷ್ಟ ಮತ್ತು ತೀವ್ರವಾದ ಪ್ರೇಮಕಥೆಯ ಕೆಲಸವನ್ನು ಪ್ರಾರಂಭಿಸಿದೆ. ಯಾವಾಗಲೂ ನಿಮ್ಮ ಶುಭಾಶಯಗಳು ಬೇಕು ಎಂದಿದ್ದಾರೆ.
ಬಹಳಷ್ಟು ಅಭಿಮಾನಿಗಳು ಅರ್ಜುನ್ ಜನ್ಯ ಅವರ ನ್ಯೂ ಪ್ರಾಜೆಕ್ಟ್‌ಗೆ ಶುಭಾಶಯ ತಿಳಿಸಿದ್ದಾರೆ. ಅಂತೂ ಸ್ಯಾಂಡಲ್‌ವುಡ್ ಪ್ರಿಯರಿಗೆ ಅರ್ಜುನ್ ಜನ್ಯ ಅವರಿಂದ ಮತ್ತೊಂದಷ್ಟು ರೊಮ್ಯಾಂಟಿಕ್ ಸಾಂಗ್‌ಗಳು ಸಿಗೋದ್ರಲ್ಲಿ ಡೌಟೇ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.