ಮಾರುಕಟ್ಟೆಯಲ್ಲಿ ದರ್ಶನ್ ಶರ್ಟ್; ಅಭಿಮಾನಿಯಾದ್ರೆ ಇಲ್ಲಿ ಕೊಳ್ಳಿ!

By Web Desk  |  First Published Oct 17, 2019, 3:46 PM IST

ಮಾರುಕಟ್ಟೆಗೆ ಬಂದಿದೆ ದರ್ಶನ್ ಶರ್ಟ್ | ಅಭಿಮಾನಿಗಳ ಮೈಮೇಲೆ ರಾರಾಜಿಸುತ್ತಿದ್ದಾರೆ ದರ್ಶನ್ | ಕರ್ನಾಟಕದ ಧ್ವಜದ ಮಧ್ಯೆ ಡಿ ಬಾಸ್ | 


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನಿಮಾಗಳನ್ನು ನೋಡಿ ಒಂದಷ್ಟು ಜನ ಅಭಿಮಾನಿಗಳಿದ್ದರೆ, ಸಾಮಾಜಿಕ ಕಳಕಳಿಗೆ ಇನ್ನೊಂದಿಷ್ಟು ಅಭಿಮಾನಿಗಳಿದ್ದಾರೆ. 

ಸ್ಯಾಂಡಲ್ ವುಡ್ ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ ಇವರು. ಇವರ ಅಭಿಮಾನಿಗಳು ಬೇರೆ ಬೇರೆ ರೀತಿ ಅಭಿಮಾನವನ್ನು ಮೆರೆಯುತ್ತಿರುತ್ತಾರೆ. ಕೆಲವರು ಹಚ್ಚೆ ಹಾಕಿಸಿಕೊಂಡರೆ ಇನ್ನು ಕೆಲವರು ಚಿತ್ರ ಬಿಡಿಸಿಕೊಳ್ಳುತ್ತಾರೆ. ಅವರ ಹೆಸರಿನಲ್ಲಿ ಒಂದಿಷ್ಟು ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುತ್ತಾರೆ. 

Tap to resize

Latest Videos

undefined

ಒಂದಷ್ಟು ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಅಭಿಮಾನ ಮೆರೆದಿದ್ದಾರೆ. ದರ್ಶನ್ ಚಿತ್ರವಿರುವ ಶರ್ಟನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ. ಈ ಶರ್ಟ್ ಗೆ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ. ಅಭಿಮಾನಿಗಳು ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. 

ಒಂದು ಶರ್ಟ್ ನಲ್ಲಿ ಕರ್ನಾಟಕ ಫ್ಲಾಗ್ ನಲ್ಲಿ ದರ್ಶನ್ ಕಾಣಿಸುತ್ತಾರೆ. ಇನ್ನೊಂದು ಶರ್ಟ್ ನಲ್ಲಿ ದರ್ಶನ್, ಪಾಪ್ ಕಾರ್ನ್, ಕನ್ನಡಕದ ಚಿತ್ರಗಳಿವೆ. ಈ ಶರ್ಟ್ ಎಲ್ಲಿ ಸಿಗುತ್ತದೆ ಎಂದು ತಿಳಿದು ಬಂದಿಲ್ಲ. 

click me!