'ಆಮ್ಲೆಟ್‌' ಹಾಕೋದ್ರಲ್ಲಿ ಸಂಯುಕ್ತ ಹೊರನಾಡು ಎತ್ತಿದ ಕೈ!

Published : Oct 17, 2019, 10:17 AM IST
'ಆಮ್ಲೆಟ್‌' ಹಾಕೋದ್ರಲ್ಲಿ  ಸಂಯುಕ್ತ ಹೊರನಾಡು ಎತ್ತಿದ ಕೈ!

ಸಾರಾಂಶ

ಹೆಸರು ರಮ್ಯಾ. ತುಂಬಾ ಕೋಪಿಷ್ಟೆ. ಯಾರಿಗೂ ಕೇರ್‌ ಮಾಡದ ಸ್ವಭಾವ. ಮದುವೆ-ಗಿದುವೆ ಅಂತ ತಲೆ ಕೆಡಿಸಿಕೊಳ್ಳದೆ, ತಾನಾಯಿತು ತನ್ನ ಪಾಡಾಯಿತು ಎನ್ನುವ ವ್ಯಕ್ತಿತ್ವ. ಹಾಗಿದ್ದರೂ ತುಂಬಾ ಕನಸುಗಳನ್ನು ಹೊತ್ತ ಚೆಲುವೆ. ಸದಾ ತನ್ನ ಕೆರಿಯರ್‌ ಕುರಿತು ಆಲೋಚಿಸುವ ಯುವತಿ...!

- ಇಷ್ಟುಹೇಳಿದಾಕ್ಷಣ ರಮ್ಯಾ ಅಂತ ಇನ್ಯಾರನ್ನೋ ಕಲ್ಪಿಸಿಕೊಳ್ಳಬೇಕಿಲ್ಲ. ಇವಳು ‘ಆಮ್ಲೆಟ್‌’ ರಮ್ಯಾ. ಅಂದ್ರೆ ‘ಕೆಂಪಿರ್ವೆ’ ಖ್ಯಾತಿಯ ನಿರ್ದೇಶಕ ವೆಂಕಟ್‌ ಭಾರದ್ವಾಜ್‌ ನಿರ್ದೇಶನದ ಹೊಸ ಚಿತ್ರ ‘ಆಮ್ಲೆಟ್‌’ನ ಕಥಾ ನಾಯಕಿ. ಈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವವರು ನಟಿ ಸಂಯುಕ್ತ ಹೊರನಾಡು. ಆಮ್ಲೆಟ್‌ ಚಿತ್ರದ ಚಿತ್ರೀಕರಣ ಶುರುವಾಗಿದೆ.

ಕಿರಿಕ್ ಬೆಡಗಿಯ ಲಿಪ್ ಲಾಕ್ ವೈರಲ್, ರಶ್ಮಿಕಾ ಅಲ್ಲ ಸಂಯುಕ್ತಾ!

‘ಪಾತ್ರದ ಹೆಸರು ರಮ್ಯಾ. ವಿದ್ಯಾವಂತೆ. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌. ಇದುವರೆಗೂ ನಾನು ಅಭಿನಯಿಸಿದ ಪಾತ್ರಗಳಿಗಿಂತ ಇದು ಡಿಫರೆಂಟ್‌. ತಾನಾಯಿತು , ತನ್ನ ಪಾಡಾಯಿತು ಎನ್ನುವ ಹುಡುಗಿ. ತುಂಬಾ ಕೋಪಿಷ್ಟೆ. ತಾನೊಬ್ಬಳೇ ಇರಬೇಕೆಂದು ಬಯಸುವ ವಿಚಿತ್ರ ಸ್ವಭಾವ. ಆದರೂ ಆಕೆಯದ್ದು ಅಸಾಧ್ಯಎನಿಸುವುದನ್ನು ಸಾಧಿಸಿ ತೋರಿಸುವ ಛಲ. ಸಾಕಷ್ಟುಕನಸು ಕಟ್ಟಿಕೊಂಡವಳು. ಸದಾ ತನ್ನ ಕೆರಿಯರ್‌ ಬಗ್ಗೆಯೇ ಆಲೋಚಿಸುವ ಹುಡುಗಿ. ಆಕೆಯ ಬದುಕಿನ ಸುತ್ತಲ ಘಟನೆಗಳ ಕತೆಯಿದು. ನನ್ನ ವ್ಯಕ್ತಿತ್ವಕ್ಕೆ ಕೊಂಚ ವಿರುದ್ಧವಾದದ್ದು ಈ ಪಾತ್ರ’ ಎನ್ನುತ್ತಾರೆ ಸಂಯುಕ್ತ ಹೊರನಾಡು.

ಸಂಯುಕ್ತಾ ಹೆಗ್ಡೆ ಹೀಗೂ ಇದ್ದಾರಾ? ಹೇಳ್ತಾರೆ ಕೇಳಿ ಬಾಯ್‌ಫ್ರೆಂಡ್!

ವಿಭಿನ್ನ ಸಿನಿಮಾ ಹೊಂದಿಸಿ ಬರೆಯಿರಿ

ಈ ನಡುವೆ ಸಂಯುಕ್ತ ಹೊರನಾಡು ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ‘ಹೊಂದಿಸಿ ಬರೆಯಿರಿ’ ಎನ್ನುವುದು ಆ ಚಿತ್ರದ ಹೆಸರು. ಜಗನ್ನಾಥ್‌ ಅದರ ನಿರ್ದೇಶಕ. ಅಲ್ಲೂ ಸಂಯುಕ್ತ ಅವರದ್ದು ವಿಭಿನ್ನವಾದ ಪಾತ್ರವಂತೆ. ‘ಪರಿಸರದ ಬಗ್ಗೆ ಅಪಾರ ಪ್ರೀತಿ ಇರುವಂತಹ ಹುಡುಗಿ.ಅನಾಥರು, ಅನಾಥಶ್ರಮಗಳ ಬಗ್ಗೆ ತುಂಬಾ ಕಾಳಜಿ ಹೊಂದಿದವಳು. ಹಾಗೆ ನೋಡಿದರೆ ನಟನೆಯ ಜತೆಗೆ ನಿತ್ಯ ನಾನು ಮಾಡುತ್ತಾ ಬರುವ ಚಟುವಟಿಕೆಗಳೇ ಆ ಪಾತ್ರದಲ್ಲೂ ಕಾಣುತ್ತಿವೆ’ ಎನ್ನುತ್ತಾರೆ ಸಂಯುಕ್ತ ಹೊರನಾಡು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್