ಕ್ರೇಜಿಸ್ಟಾರ್, ಕನಸುಗಾರ ರವಿಚಂದ್ರನ್‌ಗೆ ಗೌರವ ಡಾಕ್ಟರೇಟ್

By Web DeskFirst Published Oct 30, 2019, 4:17 PM IST
Highlights

ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್|  ಸಿಎಂ‌ಆರ್ ಯೂನಿವರ್ಸಿಟಿಯಿಂದ ಕನಸುಗಾರನಿಗೆ ಡಾಕ್ಟರೇಟ್| ಕನ್ನಡ ಚಿತ್ರರಂಗದಲ್ಲಿ ಪ್ರೇಮಲೋಕ ಸೃಷ್ಟಿಸಿದ್ದ ರಾಮಾಚಾರಿ

ಬೆಂಗಳೂರು(ಅ. 30)  ರವಿಮಾಮ ಇನ್ನು ಡಾಕ್ಟರ್!  ಕ್ರೇಜಿಸ್ಟಾರ್ ಇನ್ನು ಮುಂದೆ ಡಾ. ರವಿಚಂದ್ರನ್ ಆಗಲಿದ್ದಾರೆ.  ಸಿಎಂ‌ಆರ್ ಯೂನಿವರ್ಸಿಟಿ ಕ್ರೇಜಿಸ್ಟಾರ್ ಗೆ ನವೆಂಬರ್ 3 ರಂದು ಡಾಕ್ಟರೇಟ್ ಪ್ರದಾನ ಮಾಡಲಿದೆ.

30 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗ ಮಾಡಿಕೊಂಡೇ ಬಂದಿರುವ ಕನಸುಗಾರನಿಗೆ ಗೌರವ ಸಿಗುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಇಮ್ಮಡಿಗೊಳಿಸಿದೆ. ಪ್ರೇಮಲೋಕ ಚಿತ್ರದ ಮೂಲಕ ಸಂಗೀತ ಮತ್ತು ಕಲಾತ್ಮಕತೆಗೆ ಹೊಸ ಅರ್ಥ ನೀಡಿದ ಕಿಂದರ ಜೋಗಿಗೆ ಇನ್ನು ಮುಂದೆ ಡಾ. ರವಿಚಂದ್ರನ್.

ರವಿಚಂದ್ರನ್ ಕೇವಲ ಒಬ್ಬ ನಟ ಮಾತ್ರವಲ್ಲ. ಅನೇಕ ಚಿತ್ರಗಳ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿಯೂ ಸೈ ಎನಿಸಿಕೊಂಡಿದ್ದಾರೆ. ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಮೆಚ್ಚುಗೆ ಗಳಿಸಿಕೊಂಡವರು.

ಕೊಡಗಿನ ಕಾಫಿ ಕೇಳಿ ಪಡೆದ ರವಿಚಂದ್ರನ್

ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ, ಯುಗಪುರುಷ, ಯುದ್ದಕಾಂಡ, ರಾಮಾಚಾರಿ, ಅಂಜದ ಗಂಡು, ಸ್ವಾಭಿಮಾನ, ನಾನು ನನ್ನ ಹೆಂಡ್ತಿ, ಮನೆದೇವ್ರು, ಗೋಪಿಕೃಷ್ಣ, ಬಣ್ಣದಗೆಜ್ಜೆ, ಶ್ರೀರಾಮಚಂದ್ರ, ಆಣ್ಣಯ್ಯ, ಗಡಿಬಿಡಿ ಗಂಡ, ರಸಿಕ, ಕಲಾವಿದ, ಸಿಪಾಯಿ, ಪುಟ್ನಂಜ, ಕನಸುಗಾರ, ಮಾಂಗಲ್ಯಂ ತಂತುನಾನೇನ, ಪ್ರೀತ್ಸೋದ್ ತಪ್ಪಾ, ಯಾರೇ ನೀನು ಚೆಲುವೆ, ನಾನು ನನ್ನ ಹೆಂಡ್ತೀರು, ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ರಾಮಕೃಷ್ಣ, ಕೋದಂಡರಾಮ, ಅಹಂ ಪ್ರೇಮಾಸ್ಮಿ, ಸಾಹುಕಾರ, ಹಠವಾದಿ ಹೀಗೆ ಒಂದಕ್ಕಿಂತ ಒಂದು ಭಿನ್ನ ಚಿತ್ರ ನೀಡಿರುವ ರವಿಚಂದ್ರನ್ ಅವರಿಗೆ ಡಾಕ್ಟರೇಟ್ ದೊರೆಯುತ್ತಿದೆ.

'ರಾಮಾಚಾರಿ' ಚಿತ್ರವು ಆಗಿನ ಕಾಲದಲ್ಲೇ ಕೆನಡಾದ ಓಂಟಾರಿಯೋ ಫ಼್ಹಿಲಂ ಫ಼ೆಸ್ಟಿನಲ್ಲಿ ಪ್ರದರ್ಶನಗೊಂಡಿತ್ತು. ನಾದಬ್ರಹ್ಮ ಹಂಸಲೇಖ ಮತ್ತು ರವಿಚಂದ್ರನ್ ಒಂದಾದದರೆ ಆ ಸಿನಿಮಾದ ಹಾಡುಗಳೆಲ್ಲ ಸೂಪರ್ ಹಿಟ್ ಎನ್ನುವ ಕಾಲವೊಂದಿತ್ತು. ಪ್ರೇಮಲೋಕ', 'ರಣಧೀರ' ಸಿನಿಮಾಗಳ ಆಡಿಯೋ ಕ್ಯಾಸೆಟ್ಟುಗಳು ದಾಖಲೆಯ ಮಾರಾಟ ಕಂಡು ಇತಿಹಾಸ ಬರೆದಿದ್ದವು.

ಜೂಹಿ ಚಾವ್ಲಾ, ಖುಷ್ಬೂ, ಮೂನ್ ಮೂನ್ ಸೇನ್, ಮಧುಬಾಲ, ಮೀನಾ, ರೋಜಾ, ಭಾನುಪ್ರಿಯ, ಶಿಲ್ಪಾಶೆಟ್ಟಿ ಮುಂತಾದ ಹೆಸರಾಂತ ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ತಂದಿದ್ದು ವಿ.ರವಿಚಂದ್ರನ್. ಕನ್ನಡಕ್ಕೆ ದೊಡ್ಡ ಬಜೆಟ್ ಸಿನಿಮಾಗಳ ಮೂಲಕ ದೃಶ್ಯಶ್ರೀಮಂತಿಕೆಯನ್ನು ತಂದು ಕೊಟ್ಟವರು ರವಿಚಂದ್ರನ್.

ಹಂಸಲೇಖ ಮಾತ್ರವಲ್ಲದೆ ಎಲ್.ಎನ್.ಶಾಸ್ತ್ರಿ, ಸುಮಾ ಶಾಸ್ತ್ರಿ, ಹರಿಕೃಷ್ಣ, ಗೌತಮ್ ಶ್ರೀವತ್ಸ ಮುಂತಾದ ಸಂಗೀತ ನಿರ್ದೇಶಕರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ಇತ್ತೀಚೆಗೆ ಬಿಡುಗಡೆಯಾಗಿ ಸೂಪರ್ ಹಿಟ್ ಆದ ಕುರುಕ್ಷೇತ್ರದಲ್ಲಿ ರಚಿಚಂದ್ರನ್ ಶ್ರೀಕೃಷ್ಣ ಪಾತ್ರ ನಿರ್ವಹಿಸಿದ್ದರು.

ಅಕ್ಟೋಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!