
ಮೂರು ವರ್ಷಗಳ ಹಿಂದೆ ಸೆಟ್ಟೇರಿದ್ದ ‘ಬೇತಾಳ’ ಬಹುತೇಕ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಆರಂಭಿಸಿದೆ. ಸ್ಮೈಲ್ ಶಿವು ನಾಯಕರಾಗಿರುವ, ಕಸ್ತೂರಿ ಜಗನ್ನಾಥ್ ನಿರ್ದೇಶನ ಮಾಡುತ್ತಿರುವ ಚಿತ್ರವಿದು.
ಬಿಗ್ ಬಾಸ್ ಸ್ಪರ್ಧಿ ಸೋನು ಪಾಟೀಲ್ ಸ್ಮೈಲ್ ಶಿವುಗೆ ಜೊತೆಯಾಗಿದ್ದರೆ, ಕಾವ್ಯ ಗೌಡ ಅಖಿಲ್‌ಗೆ ಜೋಡಿ. ಇಬ್ಬರು ನಾಯಕರು, ಇಬ್ಬರು ನಾಯಕಿಯರನ್ನು ಹೊಂದಿರುವ ಬೇತಾಳ ಹಾರರ್ ಸಿನಿಮಾ.
ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ ನಟಿ ಶ್ರಿಯಾ ಶರಣ್..!
‘ಒಳ್ಳೆಯ ಗ್ರಾಫಿಕ್ ವರ್ಕ್ ಮಾಡುವ ಮೂಲಕ ಚಿತ್ರವನ್ನು ಚೆನ್ನಾಗಿ ಮಾಡಿದ್ದೇವೆ. ಶೇ.90ರಷ್ಟುಶೂಟಿಂಗ್, ಡಬ್ಬಿಂಗ್ ಎಲ್ಲವೂ ಮುಗಿದಿದೆ’ ಎನ್ನುತ್ತಾರೆ ನಿರ್ದೇಶಕ ಕಸ್ತೂರಿ ಜಗನ್ನಾಥ್.
‘ಗೋಸಿ ಗ್ಯಾಂಗ್’ ಖ್ಯಾತಿಯ ಸ್ಮೈಲ್ ಶಿವು ಇಲ್ಲಿ ನಾಯಕ. ಬಾಡಿಗೆ ಮನೆಯಲ್ಲಿ ಏನೆಲ್ಲಾ ಆಗುತ್ತದೆ, ಅಲ್ಲಿರುವ ಬೇತಾಳ ತನ್ನ ಕಡೆಯ ಆಸೆ ತೀರಿಸಿಕೊಳ್ಳಲು ನಾಯಕನ ಸಹಾಯವನ್ನು ಹೇಗೆಲ್ಲಾ ಪಡೆದುಕೊಳ್ಳುತ್ತದೆ ಎನ್ನುವ ಭಿನ್ನವಾದ ಕತೆಗೆ ಜೀವ ತುಂಬಿದ್ದಾರೆ. ಭೂಮಿಕ ಸಿನಿ ಕ್ರಿಯೇಷನ್ ಚೊಚ್ಚಲ ನಿರ್ಮಾಣದ ಸಿನಿಮಾ ಇದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.