
ಸ್ಯಾಂಡಲ್‌ವುಡ್ ಸಿನಿಮಾ ತ್ರಿಮೂರ್ತಿಯಲ್ಲಿ ಡಾ. ರಾಜ್‌ಕುಮಾರ್ ಜೊತೆ ನಟಿಸಿದ್ದ ನಟಿ ಸುರೇಖಾ ಹೃದಯಾಘಾತದಿಂದ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. 66 ವರ್ಷದ ನಟಿಗೆ ಶಾರಾದ ಎಂಬ ಸಹೋದರಿ ಮತ್ತು ಡ್ಯಾನ್ಸ್ ಅಕಾಡೆಮಿ ನಡೆಸುತ್ತಿರುವ ಸಹೋದರಿ ಪ್ರೇಮ ಅವರನ್ನು ಅಗಲಿದ್ದಾರೆ.
ಸುಮಾರು 160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸುರೇಖಾ 6 ಸಿನಿಮಾಗಳಲ್ಲಿ ಡಾ. ರಾಜ್‌ಕುಮಾರ್‌ಗೆ ಜೋಡಿಯಾಗಿದ್ದರು. ಮಣ್ಣಿನ ಮಕ್ಕಳು, ಸಂಭ್ರಮ, ಕಿಂಗ್, ಶಂಕರ್ ಸುಂದರ್, ಆಲೆಮನೆ, ಬಿಳಿಗಿರಿಯ ಬನದಲ್ಲಿ ಸುರೇಖಾ ಅವರ ಕೆಲವರು ಪ್ರಮುಖ ಸಿನಿಮಾಗಳು.
ಸ್ಯಾಂಡಲ್‌ವುಡ್‌ಗೆ ಮತ್ತೊಂದು ನಷ್ಟ, ಹಿರಿಯ ನಟಿ ಬಿ.ಜಯಾ ಇನ್ನಿಲ್ಲ...
ಸುರೇಖಾ ಅವರು ಸೆನ್ಸಾರ್ ಬೋರ್ಡ್ ಸದಸ್ಯೆ ಹಾಗೂ ಸ್ಟೇಟ್ ಅವಾರ್ಡ್ ಕಮಿಟಿಯ ಸದಸ್ಯೆಯಾಗಿದ್ದರು. ತ್ರಿಮೂರ್ತಿ ಸಿನಿಮಾ 1975ರಲ್ಲಿ ಬಿಡುಗಡೆಯಾಗಿತ್ತು. ಸಿವಿ ರಾಜೇಂದ್ರ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದರು. ಜಿ.ಕೆ. ವೆಂಕಟೇಶ್ ಸಂಗೀತ ಒದಗಿಸಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಈ ಸಿನಿಮಾ ನಿರ್ಮಿಸಿದ್ದರು.
ನಟಿಗೆ ಆದ್ರೆ ವಿವಾಹವಾಗಿರಲಿಲ್ಲ. ರಾತ್ರಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಬದುಕುಳಿಯಲಿಲ್ಲ. ಇಂದು ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ನೃತ್ಯ ಕಲಾವಿದೆ ಕೂಡ ಆಗಿದ್ರಿಂದ ಸುರೇಖಾಗೆ ಆಗಾಗ ಮಂಡಿ ನೋವು ಕಾಡುತ್ತಿತ್ತು. ಟಿವಿ ನೋಡುತ್ತಾ ಚೆನ್ನಾಗಿಯೇ ಇದ್ದ ಹಿರಿಯ ನಟಿ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಕೊನೆಯುಸಿರಳೆದಿದ್ದಾರೆ.
ಸುರೇಖ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ನಡೆದಿದೆ. ಕುಟುಂಬದ ಆಪ್ತರು ಸಹೋದರಿಯರು ಮಾತ್ರ ಭಾಗಿಯಾಗಿದ್ದರು. ಪಾರ್ವತಿ ಪಾತ್ರ ಅಂದ್ರೆ ಸುರೇಖ ಅವರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.