ಲಾಕ್‌ಡೌನ್‌ನಿಂದ ಪೋಷಕರೇ ಗುರುಗಳು; ಮಕ್ಕಳ ತೊಂದರೆ ಬಗ್ಗೆ ರಕ್ಷಿತಾ ಪ್ರೇಮ್ ಮಾತು!

By Suvarna NewsFirst Published Jun 5, 2021, 12:53 PM IST
Highlights

ಪುತ್ರ ಸೂರ್ಯ ಶಾಲೆ ಮಿಸ್ ಮಾಡಿಕೊಳ್ಳುತ್ತಿರುವುದರ ಬಗ್ಗೆ ನಟಿ ರಕ್ಷಿತಾ ಪ್ರೇಮ್ ಬರೆದುಕೊಂಡಿದ್ದಾರೆ. ಲಾಕ್‌ಡೌನ್‌ನಿಂದ ಪೋಷಕರು ಗುರುಗಳಾಗಿದ್ದಾರೆ. ಅವರೆಲ್ಲರಿಗೂ ದೊಡ್ಡ ಸಲಾಂ ಎಂದಿದ್ದಾರೆ. 
 

ಕೊರೋನಾ ವೈರಸ್ ಮೊದಲನೇ ಅಲೆ ಹಾಗೂ ಎರಡನೇ ಅಲೆಯಿಂದ ಮಕ್ಕಳ ಅಮೂಲ್ಯ ಎರಡು ಶೈಕ್ಷಣಿಕ ವರ್ಷಗಳನ್ನು ಆನ್‌ಲೈನ್‌ ಮೂಲಕ ಕಳೆಯುವಂಥ ಪರಿಸ್ಥಿತಿ ಎದುರಾಗಿದೆ. ಬೆಳಗ್ಗೆ ಬೇಗ ಎದ್ದು ಮೊದಲ ಬೆಲ್ ಹೊಡೆಯುವಷ್ಟರಲ್ಲಿಯೇ ಶಾಲೆ ತಲುಪಬೇಕಿತ್ತು, ಪಿಟಿ ಪೀರಿಯಡ್, ಲ್ಯಾಬ್, ಮ್ಯೂಸಿಕ್ ಕ್ಲಾಸ್ ಹೀಗೆ ನಗು ನಗುತ್ತಾ ದಿನ ಕಳೆದು ಬರುತ್ತಿದ್ದರು. ಆದರೀಗ ಮನೆಯಲ್ಲಿ ಎದ್ದು ಮುಖ ತೊಳೆದು ಲ್ಯಾಪ್‌ಟಾಪ್‌ ಮುಂದೆ ಕೂರುವ ಪರಿಸ್ಥಿತಿ ಎದುರಾಗಿದೆ. ಬೇರೆ ಆಯ್ಕೆ ಇಲ್ಲದೇ, ಸುಮ್ಮನಿರುವ ಮಕ್ಕಳ ಗೋಳು ಅಪ್ಪ-ಅಮ್ಮನಿಗೆ ಮಾತ್ರ ಗೊತ್ತು..

ರಕ್ಷಿತಾ ಪೋಸ್ಟ್: 
'ಈ ಲಾಕ್‌ಡೌನ್‌ ಮಕ್ಕಳಿಗೆ ನಿಜಕ್ಕೂ ಕಷ್ಟ. ಪುತ್ರ ಸೂರ್ಯ ಪದೇ ಪದೇ ಹೇಳುತ್ತಾನೆ ಸ್ಕೂಲ್, ಟೀಚರ್ ಮತ್ತು ಆಟದ ಮೈದಾನ ಎಷ್ಟು ಮಿಸ್ ಮಾಡಿಕೊಳ್ಳುತ್ತಾನೆ ಎಂದು. ಸ್ನೇಹಿತರ ಜೊತೆ ಕ್ರಿಕೆಟ್ ಆಡುತ್ತಾ ಮಜಾ ಮಾಡುತ್ತಿದ್ದವ ಈಗ ಗೂಗಲ್ ಮೀಟ್‌ನಲ್ಲಿ ಅವರನ್ನು ಮಾತನಾಡಿಸಬೇಕು. ಸಮ್ಮರ್ ರಜೆ, ರಜೆಯಲ್ಲಿ ಸಂಬಂಧಿಕರ ಮನೆಗೆ ಹೋಗುವುದು, ಅಕ್ಕ ಪಕ್ಕದ ಹುಡುಗರ ಜೊತೆ ಆಟವಾಡುವುದು ಎಲ್ಲವೂ ಮಿಸ್ ಮಾಡಿಕೊಳ್ಳುತ್ತಾನೆ ಈ ವರ್ಷ. ಶಾಲೆ ಆರಂಭವಾಗಿದೆ. ಈಗ ಅದೇ ಲ್ಯಾಪ್‌ಟಾಪ್‌, ಅಸೈನ್ಮೆಂಟ್, ಅದೇ ದಿನಚರಿ ಶುರುವಾಗಿದೆ. ಎಷ್ಟು ಹಟ ಮಾಡುತ್ತಾರೆ ಅಂದ್ರೆ ಕೆಲವೊಮ್ಮೆ ನಾವೇ ತಾಳ್ಮೆ ಕಳೆದುಕೊಳ್ಳುತ್ತೇವೆ.  ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಆದಷ್ಟು ಬೇಗ ಎಲ್ಲವೂ ನಾರ್ಮಲ್ ಆದರೆ ನಾವು ನೆಮ್ಮದಿಯಾಗ ಇರಬಹುದು,' ಎಂದು ರಕ್ಷಿತಾ ಬರೆದುಕೊಂಡಿದ್ದಾರೆ.

ರಕ್ಷಿತಾ ಹುಟ್ಟುಹಬ್ಬಕ್ಕೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ರಮ್ಯಾ: ಬೆಸ್ಟ್‌ ಫ್ರೆಂಡ್ಸ್‌ ಬಗ್ಗೆ ಚರ್ಚೆ ಶುರು! 

'ಮನೆಯಲ್ಲಿ ತಾಳ್ಮೆಯಿಂದ ಒಳ್ಳೆಯ ದಿನಗಳಿಗೆ ಕಾಯುತ್ತಿರುವವರಿಗೆ ಹಾಗೂ ಪೋಷಕರೇ ಮನೆಯಲ್ಲಿ ಈಗ ಗುರುಗಳಾಗಿರುವುದಕ್ಕೆ ನನ್ನದೊಂದು ದೊಡ್ಡ ಧನ್ಯವಾದಗಳು. ಮನೆ ನಿಭಾಯಿಸಿ, ಮಕ್ಕಳ ಹೋಮ್ ವರ್ಕ್ ನಿಭಾಯಿಸುವುದು ಸುಲಭದ ಮಾತಲ್ಲ. ಆನ್‌ಲೈನ್‌ನಲ್ಲಿ ಮಕ್ಕಳ ಜೊತೆಗೆ ತಾಳ್ಮೆಯಿಂದ ಇರುವ ಗುರುಗಳು ಗ್ರೇಟ್. ತಮ್ಮ ಪ್ರೀತಿಯ ಮನೆಯಲ್ಲಿ ಶಾಲೆ ಆರಂಭಿಸಿದ ಪೋಷಕರಿಗೂ ಶಾಲಾ ದಿನಗಳು ಶುರುವಾಗಿದೆ,' ಎಂದಿದ್ದಾರೆ ಮಿಸಸ್ ಪ್ರೇಮ್.

 

click me!