
ಸೆಲೆಬ್ರಿಟಿಗಳಿಗೆ ಸೋಷಿಯಲ್ ಮೀಡಿಯಾ ಎಕೌಂಟ್‌ಗಳನ್ನು ಕಾಪಾಡಿಕೊಳ್ಳೋದೆ ಸವಾಲಿನ ಕೆಲಸ ಆಗಿ ಬಿಟ್ಟಿದೆ. ಇತ್ತೀಚೆಗಂತೂ ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡಲಾಗುತ್ತಿದ್ದು, ನಟ, ನಟಿಯರು ತಮ್ಮ ಖಾತೆಗಳನ್ನು ಕಾಪಾಡಿಕೊಳ್ಳುವುದೇ ಕಷ್ಟವಾಗಿಬಿಟ್ಟಿದೆ.
ನಟ ನಟಿಯರ ಅಕೌಂಟ್ ಹ್ಯಾಕ್ ಆಗಿದೆ ಎಂಬ ಪೋಸ್ಟ್‌ಗಳು ಕಾಣುತ್ತಿರುತ್ತವೆ. ಇದಕ್ಕೆ ಹೊರತಾಗಿಲ್ಲ ಸ್ಯಾಂಡಲ್‌ವುಡ್ ನಟಿ ಶಾನ್ವಿ ಶ್ರೀವಾಸ್ತವ್. ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಪೋಸ್ಟ್ ಹಾಕಿ ಅಭಿಮಾನಿಗಳನ್ನು ಮೆಚ್ಚಿಸುವ ನಟಿಯ ಖಾತೆ ಸದ್ಯ ಹ್ಯಾಕರ್ಸ್ ಕಪಿಮುಷ್ಟಿಯಲ್ಲಿದೆ. ಸ್ವತಃ ನಟಿ ಇದನ್ನು ತಿಳಿಸಿದ್ದಾರೆ.
ಶಾನ್ವಿ ವಿತ್ ಸುವರ್ಣ; ಹೊಸ ವರ್ಷದ ಸೆಲಬ್ರೇಶನ್‌ಗೆ ತುಂಬಿದ್ರು ಒಂದಷ್ಟು ಬಣ್ಣ!
ತಮ್ಮ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ ಎಂದು ನಟಿ ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದ್ದು, ಇದನ್ನು ಆದಷ್ಟು ಬೇಗ ಸರಿ ಮಾಡಲಿರುವುದಾಗಿಯೂ ತಿಳಿಸಿದ್ದಾರೆ.
ಇಬ್ಬರು ಕನ್ನಡ ನಟಿಯರ ಅಕೌಂಟ್ ಹ್ಯಾಕ್; ಇದರ ಹಿಂದಿರುವ ಆ ವ್ಯಕ್ತಿ ಯಾರು ?
ರಕ್ಷಿತ್ ಶೆಟ್ಟಿ -ಶಾನ್ವಿ ಶ್ರೀವಾಸ್ತವ್ ಅವನೇ ಶ್ರೀಮನ್ನರಾಯಣ ಪ್ರೇಕ್ಷಕರ ಮನ ಗೆದ್ದಿತ್ತು. ಈ ಚಿತ್ರದ ಸಿಗ್ನೇಚರ್ ಸ್ಟೆಪ್ ಅಂತೂ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಲಾಕ್‌ಡೌನ್ ನಂತ್ರ ಮನೆಯಲ್ಲೇ ಕುಕ್ಕಿಂಗ್ ಮಾಡೋದ್ರಲ್ಲೂ ನಟಿ ಬ್ಯುಸಿ ಇದ್ರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.