
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ (Renukaswamy Murder Case) ಬರೋಬ್ಬರಿ 131 ದಿನಗಳ ಕಾಲ ಜೈಲಿನಲ್ಲಿದ್ದ ನಟ ದರ್ಶನ್ (Actor Darshan) ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಕೋರ್ಟ್‌ನಿಂದ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಈ ಬಗ್ಗೆ ನಟ ದರ್ಶನ್ ಸ್ನೇಹಿತೆ ಹಾಗೂ ಸ್ಯಾಂಡಲ್‌ವುಡ್ ನಟಿ ರಕ್ಷಿತಾ ಪ್ರೇಮ್ (Rakshitha Prem) ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ 'ಇವತ್ತು ಅತ್ಯಂತ ಖುಷಿಯ ದಿನ..' ಎಂದು ನಟಿ ರಕ್ಷಿತಾ ಪ್ರೇಮ್ ತಮ್ಮ ಅಪರಿಮಿತ ಖುಷಿಯನ್ನು ಹಂಚಿಕೊಂಡಿದ್ದಾರೆ. ದರ್ಶನ್ ಅಭಿಮಾನಿಗಳ ಸಂತಸ ಕೂಡ ಮುಗಿಲು ಮುಟ್ಟಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಂತೋಷ ವ್ಯಕ್ತಪಡಿಸುತ್ತಿರುವ ಬಹಳಷ್ಟು ಪೋಸ್ಟ್‌ಗಳು ಹರಿದು ಬರುತ್ತಿವೆ. ಸಹಜವಾಗಿಯೇ ನಟ ದರ್ಶನ್ ಆಪ್ತರು, ಹಿತೈಷಿಗಳು ಹಾಗೂ ಅಭಿಮಾನಿಗಳು ತೀವ್ರ ಸಂತಸಗೊಂಡಿದ್ದಾರೆ.
ಕಿಚ್ಚ ಸುದೀಪ್ 'ಬಿಗ್ ಬಾಸ್ ಬಿಡೋ ಸೀಕ್ರೆಟ್' ಬಿಚ್ಚಿಟ್ಟ ನಟ ಪ್ರಥಮ್, ಹೀಗೆಲ್ಲಾ ಇದ್ಯ ವಿಷ್ಯ?
ನಟ ದರ್ಶನ್ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಕೋರ್ಟ್‌ನಿಂದ 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕರೂ ಇದು ಷರತ್ತುಬದ್ಧ! ಜಾಮೀನು ಪಡೆದು ಹೊರಗೆ ಹೋಗುವ ಮುನ್ನ 7 ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ. ಬಳ್ಳಾರಿಯ ವಿಮ್ಸ್ ವೈದ್ಯರ ತಪಾಸಣೆಯ ನಂತರ ನಟ ದರ್ಶನ್‌ಗೆ ಬೆನ್ನು ಹುರಿಯಲ್ಲಿ ತೀವ್ರ ಸಮಸ್ಯೆ ಉಂಟಾಗಿದ್ದು, ಸಕಾಲಕ್ಕೆ ಚಿಕಿತ್ಸೆ ಕೊಡಿಸದಿದ್ದರೆ ಪ್ಯಾರಾಲಿಸಿಸ್, ಸ್ಟ್ರೋಕ್ ಹಾಗೂ ನಂಬ್ನೆಸ್ (ಮರಗಟ್ಟುವಿಕೆ) ಕಾಯಿಲೆ ಬರಬಹುದು ಎಂದು ವೈದ್ಯರು ಕೊಟ್ಟ ವರದಿಯನ್ನು ಆಧರಿಸಿ ಜಾಮೀನು ನೀಡಲಾಗಿದೆ.
ನಟ ದರ್ಶನ್ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯೋದಕ್ಕೆ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಲಾಯಿತು. ಇನ್ನು ಕೋರ್ಟ್‌ನಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಲಹೆ ನೀಡಿದರೂ ನಿರಾಕರಣೆ ಮಾಡಲಾಗಿದ್ದು, ನಟ ದರ್ಶನ್ ಸೂಚಿಸಿದ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು.
ಜಯಲಲಿತಾ ಬಳಿಕ 'ವಿಜಯ' ಪರ್ವ'ನಾ; ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳಿಗೆ ನಡುಕ..!
ಹೈಕೋರ್ಟ್‌ನಿಂದ ಬುಧವಾರ ನಟ ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಇನ್ನು ಪ್ರತಿ ವಾರವೂ ಚಿಕಿತ್ಸೆ ಪಡೆದಿರುವ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ಇನ್ನು ಮಧ್ಯಂತರ ಜಾಮೀನು ಮಂಜೂರು ಮಾಡಿದ ಬೆನ್ನಲ್ಲಿಯೇ, ಕೋರ್ಟ್‌ನಿಂದ 7 ಷರತ್ತುಗಳನ್ನು ವಿಧಿಸಲಾಗಿದೆ.
ನಟ ದರ್ಶನ್ ಮಧ್ಯಂತರ ಜಾಮೀನಿಗೆ ಕೊಟ್ಟ ಏಳು ಷರತ್ತುಗಳು:
1. ಪಾಸ್ ಪೋರ್ಟ್ ಸರಂಡರ್
2. 2 ಲಕ್ಷ ರೂಪಾಯಿ ಬಾಂಡ್
3. ಇಬ್ಬರು ವ್ಯಕ್ತಿಗಳ ಶ್ಯೂರಿಟಿ
4. ಜಾಮೀನಿನ ದುರುಪಯೋಗ ಮಾಡಿಕೊಳ್ಳಬಾರದು
5. ಒಂದು ವಾರದಲ್ಲಿ ವೈದ್ಯಕೀಯ ಶಿಫಾರಸು ವರದಿ ಸಲ್ಲಿಸ ಬೇಕು
6. ಸಾಕ್ಷಿ ನಾಶಕ್ಕೆ ಪ್ರಯತ್ನ ಮಾಡಬಾರದು
7. ಸಾಕ್ಷಿಗಳ ಸಂಪರ್ಕ ಮಾಡಬಾರದು
8. ಸಾಕ್ಷಿ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷ ಬೆದರಿಕೆ ಹಾಕಬಾರದು
ಕನ್ನಡತಿ 'ಬಘೀರ' ಬ್ಯೂಟಿ ರುಕ್ಮಿಣಿ ವಸಂತ್ಗೆ ಜಾಕ್ಪಾಟ್: ಟಾಲಿವುಡ್ ಸ್ಟಾರ್‌ಗೆ ನಾಯಕಿ?
ನಟ ದರ್ಶನ್‌ಗೆ ಕೋರ್ಟ್‌ನಿಂದ ಜಾಮೀನು ಮಂಜೂರು ಆಗುತ್ತಿದ್ದಂತೆಯೇ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ಕಾಮಾಕ್ಯ ಶಕ್ತಿಪೀಠದ ಫೋಟೋವನ್ನು ಹಂಚಿಕೊಂಡು ಧನ್ಯವಾದವನ್ನು ಅರ್ಪಿಸಿದ್ದಾರೆ. ಡಿ ಬಾಸ್ ಅಭಿಮಾನಿಗಳು ದೇವರಿಗೆ ಹರಕೆ, ಪೂಜೆ ಸಲ್ಲಿಸಲು ಮುಂದಾಗಿದ್ದಾರೆ. ಇದೀಗ, ನಟಿ ರಕ್ಷಿತಾ ಪ್ರೇಮ್ ಅವರು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.