ಸಪ್ತಸಾಗರದ ಚೆಲುವೆ, ಬಘೀರನ ಬ್ಯೂಟಿಗೆ ಜಾಕ್ ಪಾಟ್ ಹೊಡೆದಿದೆ. ಈಗಾಗ್ಲೇ ಕಾಲಿವುಡ್ನಲ್ಲಿ ಬಿಗ್ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿರೋ ರುಕ್ಮಿಣಿಗೆ ಟಾಲಿವುಡ್ನ ಮೆಗಾ ಪ್ರಾಜೆಕ್ಟ್ NTR-ನೀಲ್ ಮೂವಿಯ ಭಾಗವಾಗೋ ಗೋಲ್ಡನ್ ಚಾನ್ಸ್ ಸಿಗ್ತಾ ಇದೆ..
ಕನ್ನಡ 'ಸಪ್ತಸಾಗರದಾಚೆ ಎಲ್ಲೋ' ಹಾಗೂ 'ಬಘೀರ' ಚಿತ್ರಗಳ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ಟಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅದೂ ಕೂಡ ಅಂತಿಂಥವರ ಜೋಡಿಯಾಗಿ ಅಲ್ಲ, ಆರ್‌ಆರ್‌ಆರ್ ಸಿನಿಮಾದ ನಟ ಜೂನಿಯರ್ ಎನ್‌ಟಿಆರ್ ಜತೆ! ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ ಎಂದು ಇಡೀ ಕನ್ನಡ ಹಾಗೂ ಟಾಲಿವುಡ್ ಚಿತ್ರರಂಗ ಮೂಗಿನ ಮೇಲೆ ಬೆರಳಿಟ್ಟಿದೆ.
ಸಲಾರ್ ನಂತ್ರ ಪ್ರಶಾಂತ್ ನೀಲ್ ಯಂಗ್ ಟೈಗರ್ ಜ್ಯೂ.ಎನ್.ಟಿ.ಆರ್ ಜೊತೆ ಸಿನಿಮಾ ಮಾಡ್ತಿರೋ ಸಂಗತಿ ನಿಮಗೆ ಗೊತ್ತೇ ಇದೆ. ಈಗಾಗ್ಲೇ ನೀಲ್-NTR ಪ್ರಾಜೆಕ್ಟ್ಗೆ ಚಾಲನೆಯೂ ಸಿಕ್ಕಿದೆ. ಜೊತೆಗೆ ಈ ಸಿನಿಮಾ ಬಗ್ಗೆಯಗ ಒಂದು ಇನ್ಟ್ರೆಸ್ಟಿಂಗ್ ಅಪ್ಡೇಟ್ ಸಿಕ್ಕಿದೆ. ಈ ಮೆಗಾಪ್ರಾಜೆಕ್ಟ್ನಲ್ಲಿ ತಾರಕ್ ಜೊತೆಯಾಗಲಿರೋ ನಾಯಕಿ ಕನ್ನಡತಿ ಅನ್ನೋ ಸುದ್ದಿ ಸದ್ದು ಮಾಡ್ತಾ ಇದೆ.
ಸೋಲು ನಿಮ್ಮನ್ನು ಕಾಡುತ್ತಿದ್ದರೆ ಒಮ್ಮೆ ಅಮಿತಾಭ್ ಬಚ್ಚನ್ ಹೇಳಿದ್ದು ಕೇಳಿ, ಉದ್ಧಾರ ಆಗ್ತೀರಾ!
ಬಘೀರ ಬ್ಯೂಟಿ ರುಕ್ಮಿಣಿ ವಸಂತ್ಗೆ ಜಾಕ್ಪಾಟ್, ನೀಲ್ ಸಿನಿಮಾದಲ್ಲಿ ಕನ್ನಡತಿ ನಾಯಕಿ..!
ಸಪ್ತಸಾಗರದ ಚೆಲುವೆ, ಬಘೀರನ ಬ್ಯೂಟಿಗೆ ಜಾಕ್ ಪಾಟ್ ಹೊಡೆದಿದೆ. ಈಗಾಗ್ಲೇ ಕಾಲಿವುಡ್ನಲ್ಲಿ ಬಿಗ್ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿರೋ ರುಕ್ಮಿಣಿಗೆ ಟಾಲಿವುಡ್ನ ಮೆಗಾ ಪ್ರಾಜೆಕ್ಟ್ NTR-ನೀಲ್ ಮೂವಿಯ ಭಾಗವಾಗೋ ಗೋಲ್ಡನ್ ಚಾನ್ಸ್ ಸಿಕ್ತಾ ಇದೆ.
ಸಲಾರ್ ಸಿನಿಮಾದ ಸೂಪರ್ ಡೂಪರ್ ಸಕ್ಸಸ್ ಬಳಿಕ ಕೆಜಿಎಫ್ ಮಾಂತ್ರಿಕ ನೀಲ್ ಕೈಗೆತ್ತಿಕೊಂಡಿರೋದು NTR ಪ್ರಾಜೆಕ್ಟ್ನ. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾಗೆ ಬಂಡವಾಳ ಹೂಡ್ತಿದ್ದು , NTR ಕರೀಯರ್ನಲ್ಲೇ ಬಿಗ್ಗೆಸ್ಟ್ ಆಕ್ಷನ್ ಡ್ರಾಮಾ ಮಾಡೋಕೆ ನೀಲ್ ಸಜ್ಜಾಗಿದ್ದಾರೆ.
ಸದ್ಯ ಈ ಸಿನಿಮಾದ ಕಾಸ್ಟಿಂಗ್ ನಡೀತಾ ಇದ್ದು , ಸಪ್ತಸಾಗರದ ಪುಟ್ಟಿಗೆ ಈ ಸಿನಿಮಾದ ನಾಯಕಿ ಪಟ್ಟ ಕೊಡೋದಕ್ಕೆ ನೀಲ್ ಪ್ಲಾನ್ ಮಾಡಿದ್ದಾರೆ. ಈಗಾಗ್ಲೇ ರುಕ್ಮಿಣಿ ತಮಿಳಿನಲ್ಲಿ ವಿಜಯ್ ಸೇತುಪತಿ ಮತ್ತು ಶಿವಕಾರ್ತಿಕೇಯನ್ ಜೊತೆ ನಟಿಸ್ತಾ ಇದ್ದಾರೆ. ಟಾಲಿವುಡ್ ನಲ್ಲೂ ಹಲವು ಆಫರ್ಸ್ ಬರ್ತಾ ಇವೆ. ಇದೀಗ ಟಾಲಿವುಡ್ ಯಂಗ್ ಟೈಗರ್ಗೆ ಜೊತೆಯಾಗೋ ಬಿಗ್ ಆಫರ್ ರುಕ್ಕು ಮಡಿಲಿಗೆ ಬಂದಿದೆ.
ಸಾವಿನ ದೃಶ್ಯಕ್ಕೆ ಸಂಬಂಧಿಸಿದ ಅದೊಂದು ಪ್ರಾಕ್ಟೀಸ್ ಕನ್ನಡ ಚಿತ್ರರಂಗದಲ್ಲಿದೆ, ಏನದು?
ಮಾಂತ್ರಿಕ ನೀಲ್ ಸಿನಿಮಾಗಳಲ್ಲಿ ಕನ್ನಡಿಗರಿಗೆ ಮಣೆ: ಹೌದು, KGF ಮಾಂತ್ರಿಕ ಪ್ರಶಾಂತ್ ನೀಲ್ ಸದ್ಯ ಟಾಲಿವುಡ್ನಲ್ಲೇ ಸೆಟಲ್ ಆಗಿದ್ದಾರೆ. ಆದ್ರೆ ತಮ್ಮ ಸಿನಿಮಾಗಳಲ್ಲಿ ಕನ್ನಡದ ಪ್ರತಿಭೆಗಳಿಗೆ ಆದಷ್ಟು ಅವಕಾಶ ಕೊಡ್ತಾ ಬಂದಿದ್ದಾರೆ. ಸಲಾರ್ ಮೂವಿಯಲ್ಲಿ ಪ್ರಮೋದ್, ವಜ್ರಂಗ್ ಶೆಟ್ಟಿ, ಸೌರವ್ ಲೋಕಿ ಸೇರಿದಂತೆ ಹಲವು ಸ್ಯಾಂಡಲ್ವುಡ್ ಪ್ರತಿಭಾನ್ವಿತರಿಗೆ ಚಾನ್ಸ್ ಕೊಟ್ಟಿದ್ರು.
ಮತ್ತೀಗ ತಮ್ಮ ಹೊಸ ಮೂವಿಯಲ್ಲಿ ನಾಯಕಿ ಪಾತ್ರವನ್ನೆ ಕನ್ನಡತಿಗೆ ಕೊಡ್ತಾ ಇದ್ದಾರೆ. ಸದ್ಯ ಬಘೀರ ರಿಲೀಸ್ ಸಂಭ್ರಮದಲ್ಲಿರೋ ರುಕ್ಮಿಣಿ ವಸಂತ್, ತನಗೆ ಬಂದಿರೋ ಈ ಬಿಗ್ ಆಫರ್ ನಿಂದ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.