ಮೈಸೂರಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ದರ್ಶನ್ ಆಸೆಗೆ ತಣ್ಣೀರೆರಚಿದ ಕೋರ್ಟ್!

By Sathish Kumar KHFirst Published Oct 30, 2024, 2:05 PM IST
Highlights

ನಟ ದರ್ಶನ್ ತೂಗುದೀಪ ಅವರ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಗೆ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುವ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಬೆಂಗಳೂರಿನಲ್ಲಿಯೇ ಚಿಕಿತ್ಸೆ ಪಡೆಯುವಂತೆ ಆದೇಶಿಸಿದೆ.

ಬೆಂಗಳೂರು (ಅ.30): ನಟ ದರ್ಶನ್ ತೂಗುದೀಪ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮೈಸೂರಿನ ಅಪೋಲೋ ಆಸ್ಪತ್ರೆಗೆ ಹೋಗಬೇಕು ಎಂಬುದನ್ನು ವಕೀಲರ ಮೂಲಕ ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಆದರೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು 6 ವಾರ್ಗಳ ಕಾಲ ಜಾಮೀನು ಮಂಜೂರು ಮಾಡಿದ ಕೋರ್ಟ್ ವಿಚಾರಣಾಧೀನ ಕೋರ್ಟ್ ವ್ಯಾಪ್ತಿಯಾದ ಬೆಂಗಳೂರಿನಲ್ಲಿಯೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಹೈಕೋರ್ಟ್‌ನಿಂದ ಷರತ್ತು ವಿಧಿಸಿದೆ. ಈ ಮೂಲಕ ಮೈಸೂರಿನಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳಲು ದರ್ಶನ್ ಇಟ್ಟುಕೊಂಡಿದ್ದ ಆಸೆಗೆ ಕೋರ್ಟ್ ತಣ್ಣೀರೆರಚಿದೆ.

ನಟ ದರ್ಶನ್ ತೂಗುದೀಪ ಅವರಿಗೆ ವಿಪರೀತ ಬೆನ್ನುನೀವು ಕಾಣಿಸಿಕೊಂಡಿದೆ. ಎಲ್ 5,ಎಸ್ 1ನಲ್ಲಿ ಬಲ್ಜ್ ಆಗಿದ್ದು ಗಂಭೀರವಾದ ಸಮಸ್ಯೆ ಇದೆ. ಸ್ಪೈನಲ್ ಕಾರ್ಡ್ ನಲ್ಲಿ ಸಮಸ್ಯೆ ಇದೆ. ಹೀಗಾಗಿ ದರ್ಶನ್ ಗೆ ಸರ್ಜಿಕಲ್ ಚಿಕಿತ್ಸೆ ಅಗತ್ಯವಿದೆ. ಕನ್ಸರ್ವೇಟಿವ್ ಟ್ರೀಟ್‌ಮೆಂಟ್‌ನಿಂದ ನೋವು ಕಡಿಮೆ ಆಗಬಹುದು. ಆದರೆ ಸಮಸ್ಯೆ ಕ್ಲಿಯರ್ ಆಗಲ್ಲ. ಹೀಗಾಗಿ ಸರ್ಜಿಕಲ್ ಟ್ರಿಟ್ಮೆಂಟ್ ಅಗತ್ಯ ಇದೆ. ಎಲ್ 4, ಎಲ್ 5 ಡಿಸ್ಕ್ ಕೂಡ ಬಲ್ಜ್ ಆಗಿದೆ. ಈ ಸಮಸ್ಯೆ 2022ರಿಂದ ಸಮಸ್ಯೆ ಇತ್ತು. ಆದರೆ ಇತ್ತೀಚೆಗೆ ಸಮಸ್ಯೆ ಹೆಚ್ಚಾಗಿದೆ. ತಕ್ಷಣ ಚಿಕಿತ್ಸೆ ಪಡೆಯದಿದ್ದರಡ ಲಂಬ್ನೆಸ್ ಹಾಗೂ ಪ್ಯಾರಲಿಸಿಸ್ ಆಗುವ ಸಾಧ್ಯತೆ ಇದೆ. ಹೀಗಾಗಿ, ನಟ ದರ್ಶನ್ ಅವರ ಇಚ್ಛೆಯಂತೆ ಮೈಸೂರಿನ ಅಪೋಲೋ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ನಟ ದರ್ಶನ್ ಪರ ವಕೀಲರಾದ ಸಿ.ವಿ. ನಾಗೇಶ್ ಅವರು ವಾದ ಮಂಡಿಸಿದ್ದರು. ಆದರೆ, ಕೋರ್ಟ್‌ನಿಂದ ಅವರ ಮನವಿಯನ್ನು ಪರಿಗಣಿಸದೇ ಬೆಂಗಳೂರಿನಲ್ಲಿ ತಮ್ಮ ಇಚ್ಛೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಆದೇಶ ಹೊರಡಿಸಲಾಗಿದೆ.

Latest Videos

ಇದನ್ನೂ ಓದಿ: ನಟ ದರ್ಶನ್ 6 ವಾರಗಳ ಜಾಮೀನಿಗೆ 7 ಷರತ್ತುಗಳನ್ನು ವಿಧಿಸಿ ಕೋರ್ಟ್; ಕಾನೂನಿಗೆ ವಂಚಿಸೋಕೆ ಆಗೊಲ್ಲ!

ನಟ ದರ್ಶನ್‌ ಶಸ್ತ್ರಚಿಕಿತ್ಸೆ ಪಡೆಯುವುದಕ್ಕೆ ಷರತ್ತುಗಳು:

  • ದರ್ಶನ್ ಶಸ್ತ್ರಚಿಕಿತ್ಸೆಗೆಂದು ಟ್ರಯಲ್ ಕೋರ್ಟ್ ವ್ಯಾಪ್ತಿ ಬಿಟ್ಟು ಬೇರೆಡೆ ಹೋಗುವಂತಿಲ್ಲ.
  • ಆಸ್ಪತ್ರೆಗೆ ದಾಖಲಾದ ನಂತರವೇ ಒಂದು ವಾರದೊಳಗೆ ಕೋರ್ಟ್‌ಗೆ ಚಿಕಿತ್ಸಾ ಕ್ರಮದ ಬಗ್ಗೆ ಮಾಹಿತಿ ನೀಡಬೇಕು.
  • ದರ್ಶನ್ ಮಾಧ್ಯಮಗಳಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡುವಂತಿಲ್ಲ.
  • ಮಧ್ಯಂತರ ಜಾಮೀನು ಅವದಿ ಮುಗಿದ ಬಳಿಕ ಸೆಷನ್ಸ್ ಕೋರ್ಟ್ ಮುಂದೆ ದರ್ಶನ್ ಹಾಜರಾಗಬೇಕು.
  • ಬೆಂಗಳೂರಿನ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ.
click me!