ನಟಿ ಮಾಲಾಶ್ರೀ ಕಾಲ್‌ಶೀಟ್ ಪಡೆಯಲು ನಿರ್ಮಾಪಕರು ಕ್ಯೂ ನಿಲ್ಲಬೇಕಾಯ್ತು. ಕನ್ನಡದ ಅಂದಿನ ಯಾವ ಸೂಪರ್ ಸ್ಟಾರ್ ಹೀರೋಗೂ ಇಲ್ಲದ ಬೇಡಿಕೆ ಮಾಲಾಶ್ರೀ ಅವರಿಗೆ ಬಂದುಬಿಟ್ಟಿತ್ತು. ಅದಕ್ಕೆ ತಕ್ಕಂತೆ ಮಾಲಾಶ್ರೀ ಕೂಡ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು.
ಕನ್ನಡದ ಕನಸಿನ ರಾಣಿ ಖ್ಯಾತಿಯ ನಟಿ ಮಾಲಾಶ್ರೀ, ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್ ಚಿತ್ರರಂಗವನ್ನು ಅಕ್ಷರಶಃ ಆಳಿದವರು. 80ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಮಾಲಾಶ್ರೀ (Malashri), 90ರ ದಶಕದಲ್ಲಿಯೂ ಕೂಡ ಕನ್ನಡ ಸಿನಿಮಾ ಉದ್ಯಮದಲ್ಲಿ ರಾಣಿಯಂತೆ ಮೆರೆದವರು. ಕಲ್ಪನಾ, ಆರತಿ, ಭಾರತಿ ಹೀಗೆ ಯಾರ ಹೆಸರನ್ನೇ ಹೇಳಿದರೂ, ಅಥವಾ ನಂತರದ ಪ್ರೇಮಾ, ರಮ್ಯಾ, ರಾಧಿಕಾ ಹಾಗೂ ರಕ್ಷಿತಾರನ್ನೇ ಲೆಕ್ಕಕ್ಕೆ ತೆಗೆದುಕೊಂಡರೂ ಮಾಲಾಶ್ರೀ ಅವರಷ್ಟು ಇಡೀ ಸಿನಿಮಾರಂಗವನ್ನೇ ಅಲ್ಲಾಡಿಸಿದವರು ಯಾರೂ ಇಲ್ಲ. ಈ ಮಾತನ್ನು ಎಲ್ಲರೂ ಒಪ್ಪುತ್ತಾರೆ.
ಡಾ ರಾಜ್‌ಕುಮಾರ್ (Dr Rajkumar) ಫ್ಯಾಮಿಲಿಯ ಶ್ರೀ ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್ ನಿರ್ಮಾಣದ 'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಕಾಲಿಟ್ಟವರು ಮಾಲಾಶ್ರೀ. ಡಾ ರಾಜ್‌ಕುಮಾರ್ ಎರಡನೇ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಜೋಡಿಯಾಗಿ ನಟಿಸಿದ ಮಾಲಾಶ್ರೀ, ಸಿನಿಮಾ ತೆರೆಗೆ ಬಂದ ದಿನವೇ ಸೂಪರ್ ಸ್ಟಾರ್ ಅಗಿಬಿಟ್ಟರು. ನಂಜುಂಡಿ ಕಲ್ಯಾಣ (Nanjundi Kalyana) ಸೂಪರ್ ಹಿಟ್ ಆಗುವ ಮೂಲಕ ನಟಿ ಮಾಲಾಶ್ರೀಗೆ ಮೊದಲ ಚಿತ್ರದಲ್ಲೇ ಲಾಟರಿ ಹೊಡೆದಿತ್ತು. ಜತೆಗೆ, ಮಾಲಾಶ್ರೀಯವರ ಅಮೋಘ ಅಭಿನಯ ಎಲ್ಲರ ಹೃದಯ ಗೆದ್ದಿಬಿಟ್ಟಿತ್ತು.
ಹಿಮಾಲಯಕ್ಕೆ ಹೊರಟ ರಜನಿಕಾಂತ್ ಮಾಧ್ಯಮಕ್ಕೆ ಹೇಳಿದ್ದೇನು? ಅಚ್ಚರಿ ಹೇಳಿಕೆ ವೈರಲ್!
ಮಡಿವಂತಿಕೆ, ಮೈ ಚಳಿ ಎಲ್ಲವನ್ನೂ ಬಿಟ್ಟು ಆ ಕಾಲದಲ್ಲಿ ನಟಿಯಾಗಿ ಅಮೋಘ ಅಭಿನಯ ನೀಡಿದ್ದ ಮಾಲಾಶ್ರೀ ಕನ್ನಡದ ಕನಸಿನ ರಾಣಿಯಾಗಿ ಮರೆದವರು. ಬಳಿಕ, ಪಾರ್ವತಮ್ಮನವರ ನಿರ್ಮಾಣದಲ್ಲೇ ಮತ್ತೆ ರಾಘವೇಂದ್ರ ರಾಜ್‌ಕುಮಾರ್ ಜೋಡಿಯಾಗಿ 'ಗಜಪತಿ ಗರ್ವಭಂಗ' ಹಾಗೂ ಶಿವರಾಜ್‌ಕುಮಾರ್ ಜೋಡಿಯಾಗಿ 'ಮೃತ್ಯುಂಜಯ' ಸಿನಿಮಾದಲ್ಲಿ ಮಾಲಾಶ್ರೀ ಅಭಿನಯಿಸಿ ತಮ್ಮ ಗೆಲುವು ಆಕಸ್ಮಿಕವಲ್ಲ ಎಂಬುದನ್ನೂ ಪ್ರೂವ್ ಮಾಡಿಬಿಟ್ಟರು. ಎಂಥಹ ಪಾತ್ರವನ್ನಾದರೂ ಲೀಲಾಜಾಲವಾಗಿ ಅಭಿನಯಿಸಬಲ್ಲ ಮಾಲಾಶ್ರೀ ಅವರನ್ನು ಕನ್ನಡ ಪ್ರೇಕ್ಷಕರು ಒಪ್ಪಿಕೊಂಡು ಅವರ ನಟನೆಯ ಚಿತ್ರಕ್ಕೆ ಖಾಯಂ ಪ್ರೇಕ್ಷಕರಾಗಿಬಿಟ್ಟರು.
ಹೀಗೂ ಉಂಟೇ..! ರಾಮಾಯಣಕ್ಕೆ ಪಡೆದ ಭಾರೀ ಸಂಭಾವನೆಯನ್ನು ಏನ್ಮಾಡಿದಾರೆ ಯಶ್?
ಹೀಗಾಗಿ ನಟಿ ಮಾಲಾಶ್ರೀ ಕಾಲ್‌ಶೀಟ್ ಪಡೆಯಲು ನಿರ್ಮಾಪಕರು ಕ್ಯೂ ನಿಲ್ಲಬೇಕಾಯ್ತು. ಕನ್ನಡದ ಅಂದಿನ ಯಾವ ಸೂಪರ್ ಸ್ಟಾರ್ ಹೀರೋಗೂ ಇಲ್ಲದ ಬೇಡಿಕೆ ಮಾಲಾಶ್ರೀ ಅವರಿಗೆ ಬಂದುಬಿಟ್ಟಿತ್ತು. ಅದಕ್ಕೆ ತಕ್ಕಂತೆ ಮಾಲಾಶ್ರೀ ಕೂಡ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ದಿನಕ್ಕೆ 2 ಅಥವಾ 3 ಕಾಲ್‌ಶೀಟ್‌ನಲ್ಲಿ ಮಾಲಾಶ್ರೀ ಕೆಲಸ ಮಾಡುತ್ತಿದ್ದರೂ ಹಲವು ನಿರ್ಮಾಪಕರು ಮಾಲಾಶ್ರೀ ಕಾಲ್‌ಶೀಟ್ ಸಿಗದೇ ಕಂಗಾಲಾಗಿದ್ದರು. ಅವರಲ್ಲಿ ನಟ-ನಿರ್ಮಾಪಕರಾದ ರವಿಚಂದ್ರನ್ ಸಹ ಒಬ್ಬರು.
ಆ್ಯಂಕರ್ ಅನುಶ್ರೀಗೆ ಆ ಗುಟ್ಟು ಹೇಳದ ರಕ್ಷಿತ್ ಶೆಟ್ಟಿ, ಸಾಯಿ ಪಲ್ಲವಿ ಬಗ್ಗೆ ಮೌನವಾಗಿದ್ದೇಕೆ?
ರಾಮಾಚಾರಿ ಚಿತ್ರಕ್ಕಾಗಿ ನಟ ರವಿಚಂದ್ರನ್ ಅವರು ಮಾಲಾಶ್ರೀ ಕಾಲ್‌ಶೀಟ್ ಕೇಳಿದ್ದರು. ಆದರೆ, ಮಾಲಾಶ್ರೀ ಅವರು ಆ ಸಮಯದಲ್ಲಿ ಅದೆಷ್ಟು ಬ್ಯುಸಿ ಇದ್ದರು ಎಂದರೆ, ರವಿಚಂದ್ರನ್ ಅವರ ಕನಸಿನ 'ರಾಮಾಚಾರಿ' ಸಿನಿಮಾಗೆ 10 ದಿನಗಳ ಕಾಲ್‌ಶೀಟ್ ಕೊಡವುದು ಸಾಧ್ಯವೇ ಇರಲಿಲ್ಲ. ಹೇಗೋ ಕೊನೆಗೆ ಸಾಕಷ್ಟು ಕಾಲದ ಬಳಿಕ ರಾಮಾಚಾರಿಗೆ ಕೆಲವೇ ದಿನಗಳ ಡೇಟ್ಸ್ ಕೊಟ್ಟು ನಾಯಕಿಯಾಗಿ ನಟಿಸಿದ್ದರು. ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಅಂದು ಸತತವಾಗಿ ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದ ರವಿಚಂದ್ರನ್ ಅವರು ರಾಮಾಚಾರಿ ಮಾಲಾಶ್ರೀ ನಟನೆಯ ರಾಮಾಚಾರಿ ಚಿತ್ರದ ಮೂಲಕ ಗೆಲುವಿನ ನಗೆ ಬೀರಿದ್ದರು.
ಪುನೀತ್ ರಾಜ್‌ಕುಮಾರ್ 'ಅಣ್ಣಾವ್ರ' ಚಪ್ಪಲಿ ಇಟ್ಟಿದ್ದೆಲ್ಲಿ? ಅಮ್ಮನ ನೆನಪಿಗೆ ಅಪ್ಪು ಮಾಡಿದ್ದೆನು?
ಕನ್ನಡದ ಸೂಪರ್ ಸ್ಟಾರ್ ಆಗಿ ಮಾಲಾಶ್ರೀ ಮಿಂಚಿದ್ದ ಕಾಲವನ್ನು ಕನ್ನಡದ ಸುವರ್ಣ ಯುಗ ಎಂದೂ ಹೇಳಬಹುದು. ಅದು ವೈಯಕ್ತಿಕವಾಗಿ ಮಾಲಾಶ್ರೀ ಅವರಿಗೂ ಗೋಲ್ಡನ್ ಕಾಲ. ಮಾಲಾಶ್ರೀ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿತ್ತು ಎಂದರೂ ಅತಿಶಯೋಕ್ತಿಯಲ್ಲ. ಮಾಲಾಶ್ರೀ ಕಾಲ್‌ಶೀಟ್‌ಗಾಗಿ ಅಂದು ಯಾರನ್ನೂ ಗೋಳು ಹುಯ್ದುಕೊಂಡವರಲ್ಲ. ಆದರೆ, ಪರಿಸ್ಥಿತಿ ಹೇಗಿತ್ತು ಎಂದರೆ, ಡಬಲ್ ಕಾಲ್‌ಶೀಟ್ ಹಾಗೂ ನೈಟ್ ಶಿಪ್ಟ್ ಕೆಲಸ ಮಾಡಿದ್ದರೂ ಮಾಲಾಶ್ರೀ ಹಲವರಿಗೆ ಕಾಲ್‌ಶೀಟ್ ಕೊಡಲು ಸಾಧ್ಯವೇ ಇರಲಿಲ್ಲ. ಅಂಥ ಸ್ಟಾರ್ ನಟಿಯಾಗಿದ್ದರು ಮಾಲಾಶ್ರೀ.
ಬಾಲಿವುಡ್ ಆಫರ್ ಮುಗಿದ ಹೋದ ಚಾಪ್ಟರ್ ಆಗಿರಬಹುದು; ಮೌನ ಮುರಿದ ಜ್ಯೋತಿಕಾ!