ಅಂತ, ಶಂಕರ್‌ಗುರು, ಪ್ರೇಮದ ಕಾಣಿಕೆ, ಬೆಂಕಿ ಬಿರುಗಾಳಿ, ಖದೀಮ ಕಳ್ಳರು, ಮುನಿಯನ ಮಾದರಿ, ಹೇಳುತ್ತಾ ಹೋದರೆ ಪಟು ತುಂಬುವಷ್ಟು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿದ್ದಾರೆ ಜಯಮಾಲಾ. ತೆಲುಗು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಮಾಲಾ ಬಹಳಷ್ಟು ಪ್ರಸಿದ್ಧರು. ಸ್ಯಾಂಡಲ್‌ವುಡ್ ಮೇರು ನಟರೊಂದಿಗೆ ತೆರೆ ಹಂಚಿಕೊಂಡಿರುವ ನಟಿ ಜಯಮಾಲಾ ಡಾ ರಾಜ್‌ಕುಮಾರ್ (DR Rajkumar)ಜತೆ ಗಿರಿಕನ್ಯೆ, ದಾರಿ ತಪ್ಪಿದ ಮಗ, ಬಬ್ರುವಾಹನ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಮೇರು ನಟರಾದ ಡಾ ವಿಷ್ಣುವರ್ಧನ್, ಅಂಬರೀಷ್, ಶಂಕರ್‌ನಾಗ್, ಅನಂತ್‌ನಾಗ್, ಟೈಗರ್ ಪ್ರಭಾಕರ್ ಅವರುಗಳೊಂದಿಗೆ ಕೂಡ ಜಯಮಾಲಾ ನಾಯಕಿಯಾಗಿ ನಟಿಸಿ ಜನಮೆಚ್ಚುಗೆ ಪಡೆದಿದ್ದಾರೆ. ರೆಬೆಲ್ ಪಾತ್ರಗಳನ್ನು ಹೆಚ್ಚಾಗಿ ಮಾಡಿರುವ ನಟಿ ಜಯಮಾಲಾ ನಿಜ ಜೀವನದಲ್ಲಿ ಕೂಡ ತಮ್ಮ ನೇರ ನಡೆ-ನುಡಿಗೆ ಹೆಸರುವಾಸಿ.
ಅಂತ, ಶಂಕರ್‌ಗುರು, ಪ್ರೇಮದ ಕಾಣಿಕೆ, ಬೆಂಕಿ ಬಿರುಗಾಳಿ, ಖದೀಮ ಕಳ್ಳರು, ಮುನಿಯನ ಮಾದರಿ, ಹೇಳುತ್ತಾ ಹೋದರೆ ಪಟು ತುಂಬುವಷ್ಟು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿದ್ದಾರೆ ಜಯಮಾಲಾ. ತೆಲುಗು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇಂಥ ನಟಿ ಟೈಗರ್ ಪ್ರಭಾಕರ್ ಜತೆ ಪ್ರೇಮದಲ್ಲಿ ಬಿದ್ದು ಅವರನ್ನು 1985ರಲ್ಲಿ ಮದುವೆಯಾಗಿದ್ದರು. ಆದರೆ, ಸಂಸಾರದಲ್ಲಿ ಬಂದ ಮನಸ್ತಾಪದಿಂದ ಈ ಇಬ್ಬರೂ 1988ರಲ್ಲಿ ಪರಸ್ಪರ ದೂರವಾಗಿದ್ದಾರೆ. ಬಳಿಕ ನಟಿ ಜಯಮಾಲಾ ಅವರು ಫೋಟೋಗ್ರಾಫರ್ ಹೆಚ್ಎಂ ರಾಮಚಂದ್ರ ಅವರನ್ನು ಮದುವೆಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.
undefined
ಕಾರ್ತಿಕ್ ಮಹೇಶ್ ಜೊತೆ ನಮ್ರತಾ ಗೌಡ ಮದುವೆ; ಏಷ್ಯಾನೆಟ್ ಸುವರ್ಣಾ'ಗೆ ಸ್ಪಷ್ಟನೆ ಕೊಟ್ಟ ಬಿಗ್ ಬಾಸ್ ವಿನ್ನರ್
ಜಯಮಾಲಾ ಅವರಿಗೆ ಸೌಂದರ್ಯ (Soundarya)ಹೆಸರಿನ ಮಗಳು ಇದ್ದಾರೆ. ಅವರು ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Real Star Upendra)ಜೋಡಿಯಾಗಿ 'ಗಾಡ್ ಫಾದರ್ (God Father) ಎಂಬ ಸಿನಿಮಾದಲ್ಲಿ ನಟಿಸಿದ್ದರು. ನಟಿಯಾಗಿ ಜಯಮಾಲಾ ಅವರು ಸಾಕಷ್ಟು ಹೆಸರು ಮಾಡಿದ ಹಾಗೆಯೇ 1986ರಲ್ಲಿ 'ನಾನು ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಒಳಗೆ ಪ್ರವೇಶಿಸಿದ್ದೇನೆ ಹಾಗೂ ಅಯ್ಯಪ್ಪ ಸ್ವಾಮಿಯ ಪ್ರತಿಮೆಯನ್ನು ಮುಟ್ಟಿದ್ದೇನೆ' ಎಂದು ಹೇಳುವ ಮೂಲಕ ಭಾರೀ ವಿವಾದಕ್ಕೂ ಒಳಗಾಗಿದ್ದರು. ಆದರೆ, ಆ ಬಳಿಕ ಅವರು ಯಾವುದೇ ವಿವಾದದ ಸುಳಿಯಲ್ಲಿ ಸಿಲುಕಲಿಲ್ಲ.
ನಟಿ-ನಿರ್ಮಾಪಕಿ ಆಗುವ ಮೊದಲು 'ಸ್ಯಾಂಡಲ್‌ವುಡ್ ಸ್ವೀಟಿ' ರಾಧಿಕಾ ಲೈಫ್‌ನಲ್ಲಿ ಏನೇನೆಲ್ಲಾ ಆಗಿತ್ತು?
ನಟಿ ಜಯಮಾಲಾ ಅವರು ಸರ್ಕಾರದಲ್ಲಿ ಕೂಡ ಸೇವೆ ಸಲ್ಲಿಸಿದ್ದಾರೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮೂಲಕ (Member of the Karnataka Legislative Council-Year 2014–2020) ಆಡಳಿತದಲ್ಲಿದ್ದ ಸರ್ಕಾರದ ಭಾಗವಾಗಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ನಟಿಸುತ್ತಲೇ, ರಾಜಕೀಯ ಜೀವನ ನಡೆಸುತ್ತಲೇ ಜಯಮಾಲಾ ಅವರು 'ಪಿಹೆಚ್‌ಡಿ (PHD) ಪದವಿ ಕೂಡ ಪಡೆದಿದ್ದು ಅವರ ಹೆಚ್ಚುಗಾರಿಕೆ. ಇಂಥ ಖ್ಯಾತ ನಟಿ ಜಯಮಾಲಾಗೆ ಈಗ 65 ವರ್ಷ ವಯಸ್ಸು. ಆದರೆ ಇಂದಿಗೂ ಕೂಡ ಅವರದು ಬತ್ತದ ಸಲೆಯ ವ್ಯಕ್ತಿತ್ವ.
ಐಎಎಸ್ ಅಧಿಕಾರಿ, ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ನಟ ಕೆ ಶಿವರಾಮ್ ಆರೋಗ್ಯ ಸ್ಥಿತಿ ತೀವ್ರ ಗಂಭೀರ
ಈಗಲೂ ಅಧ್ಯಯನ, ಸಾಮಾಜಿಕ ಸೇವೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡುವತ್ತ ನಟಿ-ರಜಕಾರಣಿ ಜಯಮಾಲಾ ಸಕ್ರಿಯರಾಗಿದ್ದಾರೆ. ಮದುವೆ-ಸಂಸಾರಗಳಲ್ಲಿ ಸಮಸ್ಯೆಗಳು ಬಂದರೂ ಅವೆಲ್ಲವನ್ನೂ ಧೈರ್ಯವಾಗಿ ಎದುರಿಸಿ ಹಲವರಿಗೆ ಮಾದರಿಯಾಗಿದ್ದಾರೆ ಜಯಮಾಲಾ. ಬಹಳಷ್ಟು ಹಿರಿಯರು ಹೇಳಿರುವಂತೆ 'ನಮ್ಮ ಪಾಲಿಗೆ ಯಾವ ಸಮಸ್ಯೆ ಬರುತ್ತೆ ಎನ್ನುವುದು ನಮ್ಮ ಆಯ್ಕೆಯಲ್ಲ. ಆದರೆ, ಅದನ್ನು ಯಾವ ರೀತಿ ಪರಿಹರಿಸಿಕೊಂಡು ನಾವು ಜೀವನದಲ್ಲಿ ಮುಂದೆ ಸಾಗುತ್ತೇವೆ ಎಂಬುದು ಖಂಡಿತ ನಮ್ಮ ಆಯ್ಕೆಯೇ ಆಗಿದೆ' ಎಂಬ ಬಲ್ಲವರ ಮಾತಿನಂತೆ ಜಯಮಾಲಾ ಎನ್ನಬಹುದು. ಸಿನಿಮಾ ನಟನೆಗಾಗಿ, ನಿರ್ಮಾಣಕ್ಕಾಗಿ ಅವರಿಗೆ 'ರಾಷ್ಟ್ರೀಯ ಪ್ರಶಸ್ತಿ ಹಾಗೂ ಫಿಲಂ ಫೇರ್ ಅವಾರ್ಡ್‌ಗಳೂ ಕೂಡ ಸಂದಿವೆ.
ಬಿಗ್ ಬಾಸ್ ವಿಜೇತ ನಟ ಕಾರ್ತಿಕ್ ಮಹೇಶ್‌ಗೆ ಮತ್ತೊಂದು ಕಿರೀಟ; ಮೆಕ್ಸಿಕೋಕ್ಕೂ ಕಾಲಿಟ್ಟ ಡೊಳ್ಳು!