ಅಪ್ಪು-ಅಪ್ಪಾಜಿ ಸೀಕ್ರೆಟ್ ಬಿಚ್ಚಿಟ್ಟ ರಾಘಣ್ಣ: ಅದೆಷ್ಟೋ ಗುಟ್ಟು ಜಗತ್ತಿಗೆ ಗೊತ್ತೇ ಇಲ್ಲ! ಇಲ್ನೋಡಿ..

Published : Mar 02, 2025, 01:58 PM ISTUpdated : Mar 02, 2025, 02:31 PM IST
ಅಪ್ಪು-ಅಪ್ಪಾಜಿ ಸೀಕ್ರೆಟ್ ಬಿಚ್ಚಿಟ್ಟ ರಾಘಣ್ಣ: ಅದೆಷ್ಟೋ ಗುಟ್ಟು ಜಗತ್ತಿಗೆ ಗೊತ್ತೇ ಇಲ್ಲ! ಇಲ್ನೋಡಿ..

ಸಾರಾಂಶ

ಚಲಿಸುವ ಮೋಡಗಳು ಚಿತ್ರದಲ್ಲಿ ಪುನೀತ್ ಅವರು 'ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ.. ಚಂದ್ರ ಮೇಲೆ ಬಂದ..' ಅಂತ ಅಪ್ಪು ಹಾಡಿದಾಗ ಅವರಿಗೆ ಆಗಿನ್ನೂ 4 ವರ್ಷ. ಭಾಗ್ಯವಂತರು, ಭಕ್ತ ಪ್ರಹ್ಲಾದ, ಹೊಸ ಬೆಳಕು.. ಸೀಕ್ರೆಟ್ ಸ್ಟೋರಿ ನೋಡಿ.. 

ಡಾ ರಾಜ್‌ಕುಮಾರ್ (Dr Rajkumar) ಅವರು ಯಾವತ್ತೂ ತಮ್ಮ ಕಿರಿ ಮಗ ಪುನೀತ್‌ ರಾಜ್‌ಕುಮಾರ್ (Rajkumar) ಮೇಲೆ ಹೆಚ್ಚು ಅಕ್ಕರೆ ಇಟ್ಟಿಕೊಂಡಿದ್ದರು. ಅದನ್ನು ಸ್ವತಃ ಡಾ ರಾಜ್‌ಕುಮಾರ್ ಆಗಲೀ ಅಥವಾ ಪುನೀತ್ ರಾಜ್‌ಕುಮಾರ್ ಅವರಾಗಲೀ ಹೇಳಿಲ್ಲ. ಬದಲಿಗೆ ಅಣ್ಣಾವ್ರ ಎರಡನೇ ಮಗ ರಾಘವೇಂದ್ರ ರಾಜ್‌ಕುಮಾರ್ (Raghuvendra Rajkumar) ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನಟ ಪುನೀತ್ ಅವರು ಚಿಕ್ಕ ವಯಸ್ಸಿನಲ್ಲೇ (46) ತೀರಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ. ಆ ಬಳಿಕ ಮಾತನಾಡುತ್ತ ರಾಘವೇಂದ್ರ ರಾಜ್‌ಕುಮಾರ್ ಈ ಸಂಗತಿ ಹೇಳಿದ್ದಾರೆ. ಹಾಗಿದ್ದರೆ ಅವರೇನು ಹೇಳಿದ್ದಾರೆ ನೋಡಿ..

ಡಾ ರಾಜ್‌ಕುಮಾರ್ ಅವರು ಪುನೀತ್ ಅವರನ್ನು ಯಾವತ್ತೂ ಬಿಟ್ಟಿರಲು ಇಷ್ಟಪಡುತ್ತಿರಲಿಲ್ಲವಂತೆ. ಆ ಕಾರಣಕ್ಕಾಗಿಯೇ ನಟ ಪುನೀತ್ ಅವರನ್ನು ಅವರು ಹೋಗುವಲ್ಲಿ, ಎಲ್ಲಾ ಕಡೆ ಶೂಟಿಂಗ್ ಸೆಟ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಶೂಟಿಂಗ್‌ ಸೆಟ್‌ಗೆ ಮಾತ್ರವಲ್ಲ, ಜೊತೆಯಲ್ಲೇ ನಟಿಸಲು ಕೂಡ ಹೇಳುತ್ತಿದ್ದರು. ಆ ಕಾರಣಕ್ಕಾಗಿಯೇ ನಟ ಪುನೀತ್ ಅವರು ಕೇವಲ ಎರಡು ತಿಂಗಳು ಮಗುವಾಗಿದ್ದಾಗಲೇ ಸಿನಿಮಾದಲ್ಲಿ ಕಾಣಿಸಿಕೊಂಡರು. ನಾಲ್ಕು ವರ್ಷದವರಿದ್ದಾಗಲೇ ಹಾಡು ಹಾಡಿದ್ದಾರೆ. 

ಈ ಜಗತ್ತಿನಿಂದ ಹೋಗೋ 2 ದಿನದ ಮೊದ್ಲು ರಾಘಣ್ಣ ಬಳಿ ಅಪ್ಪು ಹೇಳಿದ್ದೇನು? ಕಣ್ಣೀರು ಬರದೇ ಇರದು!

ಚಲಿಸುವ ಮೋಡಗಳು ಚಿತ್ರದಲ್ಲಿ ಪುನೀತ್ ಅವರು 'ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ.. ಚಂದ್ರ ಮೇಲೆ ಬಂದ..' ಅಂತ ಅಪ್ಪು ಹಾಡಿದಾಗ ಅವರಿಗೆ ಆಗಿನ್ನೂ 4 ವರ್ಷ. ಭಾಗ್ಯವಂತರು, ಭಕ್ತ ಪ್ರಹ್ಲಾದ, ಹೊಸ ಬೆಳಕು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದು ಎಲ್ಲರಿಗೂ ಗೊತ್ತಿದೆ. 'ಭಕ್ತ ಪ್ರಹ್ಲಾದ' ಚಿತ್ರದ ನಟನೆಗೆ ಅಷ್ಟು ಚಿಕ್ಕ ವಯಸ್ಸಿನಲ್ಲೇ ಬಾಲನಟ ರಾಷ್ಟ್ರ ಪ್ರಶಸ್ತಿ ಪಡೆದಿದ್ದು ಚಿಕ್ಕ ಸಂಗತಿಯೇ ಅಲ್ಲ. 

ಇಷ್ಟೆಲ್ಲಾ ಆಗಿದ್ದು ಡಾ ರಾಜ್‌ ಅವರಿಗೆ ಪುನಿಥ್ ಬಿಟ್ಟು ಇರೋದಕ್ಕೆ ಆಗಲ್ಲ ಅನ್ನೋ ಕಾರಣಕ್ಕೆ ಎಂಬ ಗುಟ್ಟನ್ನು ನಟ, ಅಣ್ಣಾವ್ರ ಮಗ ರಾಘವೇಂದ್ರ ರಾಜ್‌ಕುಮಾರ್ ಅವರು ತಮ್ಮ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ಪುನೀತ್ ಜೊತೆಯಲ್ಲಿ ಇರಬೇಕು ಅನ್ನೋ ಕಾರಣಕ್ಕೆ ಅಪ್ಪಾಜಿಯವರು ಅಪ್ಪುವನ್ನು ಜೊತೆಯಲ್ಲೇ ಕರೆದುಕೊಂಡು ಹೋಗಿ, ಬಾಲಕಲಾವಿದನಾಗಿ ನಟಿಸಬೇಕಾದ ಸ್ಥಿತಿ ನಿರ್ಮಾಣವಾಯ್ತು ಅನ್ನೋ ಸೀಕ್ರೆಟ್ ಹೇಳಿದ್ದಾರೆ. 

ಚಿಕ್ಕ ವಯಸ್ಸಲ್ಲೇ ಹಾಡಿದ್ದ ಅಪ್ಪು, ಆ ಹಾಡು ಕೇಳಿ ಶಿವಣ್ಣ ಮಾಡಿದ್ದೇನು? ಸೀಕ್ರೆಟ್ ಓಡಾಡ್ತಿದೆ ಈಗ..!

ಅಂದಹಾಗೆ, ನಟ ಪುನೀತ್ ಅವರು ಬಾಲನಟರಾಗಿ ನಟಿಸಿದ ಮೇಲೆ ಬಹಳಷ್ಟು ವರ್ಷ ತೆರೆಯಲ್ಲಿ ಕಾಣಿಸಿಕೊಂಡಿರಲೇ ಇಲ್ಲ. ಅವರು ಬಿಸಿನೆಸ್ ಅದೂ ಇದೂ ಅಂತ ಇದ್ದರೇ ಹೊರತೂ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿರಲಿಲ್ಲ. ಆದರೆ, 'ಅಪ್ಪು' ಚಿತ್ರದ ಮೂಲಕ ಮತ್ತೆ ಕಮ್‌ಬ್ಯಾಕ್ ಮಾಡಿ ಬಳಿಕ ಸಾಯುವ ಮೊದಲು 25 ಸಿನಿಮಾಗಳಲ್ಲಿ ನಟಸಿದ್ದರು. ಇಂದು ಅವರ ನಟನೆಯ ಸಿನಿಮಾಗಳು ಇವೆ, ಆದರೆ ಅವರಿಲ್ಲ. ಆದರೆ, ಕನ್ನಡಿಗರ ಮನಸ್ಸಿನಲ್ಲಿ ಅವರ ಸಿನಿಮಾಗಳ ಮೂಲಕ ಯಾವತ್ತೂ ಜೀವಂತವಾಗಿ ಇದ್ದೇ ಇರುತ್ತಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ