
ನಟ ಶಂಕರ್ ಅಶ್ವಥ್ (Shankar Ashwath) ಉವಾಚ.. 'ಇವತ್ತು ಒಂದು ಊಬರ್ ಪಾರ್ಟಿ ಸಿಕ್ಕಿದ್ದರು.. ಬೆಳಿಗ್ಗೆ ಕರ್ಕೊಂಡು ಬಂದು, ಡ್ರಾಪ್ ಮಾಡೋಕೆ ಅಂತ ಬಂದು ಬಿಟ್ಟೆ.. ಒಂದ್‌ಕಡೆ ಬಿಟ್ ಮೇಲೆ ಅವ್ರು ಇನ್ನೂ ನಾಲ್ಕೈದು ಕಡೆ ಹೋಗ್ಬೇಕು, ಬರ್ತಿರಾ ಅಂತ ಕೇಳಿದ್ರು.. ನಂಗೂ ಬಾಡಿಗೆ ಬೇಕಾಗಿತ್ತು, ಆಯ್ತು ಸರ್ ಬರ್ತೀನಿ ಅಂದೆ.. ಆದ್ರೆ ಸ್ವಲ್ಪ ಹೊತ್ತು ಆಗುತ್ತೆ ಟೈಮ್ ಅಂದ್ರು. ಆಯ್ತು ಸರ್ ವೇಟ್ ಮಾಡ್ತೀನಿ ಅಂದೆ.. ಈ ವಿಷ್ಯ ಇಲ್ಲಿ ಈಗ ಯಾಕೆ ಹೇಳ್ತಾ ಇದೀನಿ ಅಂದ್ರೆ, ಒಬ್ಬ ಡ್ರೈವರ್ ಜೀವನ ಹೇಗಿರುತ್ತೆ ಅಂತಾ ಹೇಳೋಕೆ ಅಷ್ಟೇ..
ಒಬ್ಬ ಕ್ಯಾಬ್ ಅಥವಾ ಆಟೋ ಡ್ರೈವರ್ ಜೀವನ ಹೇಗಿರುತ್ತೆ ಅಂದ್ರೆ, ನಾನೂ ಒಬ್ಬ ಕ್ಯಾಬ್ ಡ್ರೈವರ್ ಆಗಿ ಅನುಭವ ಪಡೆಯೋ ಜೊತೆಗೆ, ನನ್ನ ತಿಳುವಳಿಕೆನ ನಿಮ್ಗೆ ಹೇಳ್ತಾ ಇದೀನಿ.. ಪಾಪ, ಅದೆಷ್ಟೋ ಡ್ರೈವರ್‌ಗಳಿಗೆ ಪ್ಯಾಸೆಂಜರ್ಸ್ ಎಲ್ಲೋ ಕರ್ಕೊಂಡು ಹೋಗಿ ನಿಲ್ಲಿಸಿಬಡ್ತಾರೆ.. ಅವ್ರಿಗೆ ಅಲ್ಲಿ ದೇಹ ಬಾಧೆ ತೀರಿಸಿಕೊಳ್ಳೋಕೂ ಆಗಲ್ಲ.. ಇಲ್ಲ ಊಟ ತಿಂಡಿಗೆ ಪ್ರಾಬ್ಲಂ ಆಗುತ್ತೆ.. ಈಗ ನಂಗೆ ಆಗಿರೋದೂ ಅದೇ.. ನಂಗೆ ಇವತ್ತು ದೇಹ ಬಾಧೆಗೆ ಏನೂ ತೊಂದ್ರೆಯಿಲ್ಲ. ಆದ್ರೆ ಊಟಕ್ಕೆ ಹೋಗೋಕೆ ಆಗ್ತಿಲ್ಲ.. ಈಗ ಮೂರೂವರೆ ಆಗಿದೆ..
ಇದೇನು ಪ್ರೀತಿ ತೋರಿಸೋ ಅವತಾರವೋ ಅವಮಾನವೋ ಗೊತ್ತಿಲ್ಲ; ನಟ ಶಂಕರ್ ಅಶ್ವಥ್ ಬೇಸರ!
ನಾನು ಬೆಳಿಗ್ಗೆ ಮನೆಯಿಂದ ತಿಂಡಿ ತಿಂದು ಬಂದಿದ್ದು ಸುಮಾರು 7.30ಕ್ಕೆ.. ಅದಾದ್ಮೇಲೆ ಹೊಟ್ಟೆಗೆ ಏನೂ ಇಲ್ಲ. ಒಬ್ಬ ಡ್ರೈವರ್ ಆದ್ಮೇಲೆ ನಾನು ಡ್ರೈವರ್ ಆಗಿನೇ ಇರ್ಬೇಕು ಅಲ್ವಾ? ಫಿಲಂ ಆಕ್ಟರ್ ಅಂದ್ರೆ ಯಾರು ಕೇಳ್ತಾರೆ? ಯಾರಾದ್ರೇನು, ಹಸಿವೆ ಯಾರಿಗಾದ್ರೂ ತಡೆಯೋಕೆ ಆಗಲ್ಲ ಅಲ್ವಾ? ನಂಗೆ 68 ವರ್ಷ, ನೀರು ಕುಡಿದು ಹೊಟ್ಟೆ ತುಂಬಿಸಿಕೊಂಡೆ..' ಎಂದು ಹೇಳಿ ವಿಡಿಯೋ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಅವರ ವಿಡಿಯೋ ನೋಡಿ ನೊಂದು ಬಹಳಷ್ಟು ವಿಭಿನ್ನ ಕಾಮೆಂಟ್‌ಗಳು ಹರಿದು ಬಂದಿವೆ.
ಅದಕ್ಕೆ ಒಬ್ಬ ನೆಟ್ಟಿಗರು- 'ಅಶ್ವತ್ಥ್ ಏನಾದ್ರೂ ಈ ಪರಿಸ್ಥಿತಿ ನೋಡಿದ್ದರೆ ಬಹಳ ಸಂಕಟ ಪಡೋ ರೂ. ಏನೇ ಆಗಲಿ ಪ್ರಾಮಾಣಿಕವಾಗಿ ದುಡೀತ ಇದ್ದೇರಿ ನಿಮಗೆ ಧನ್ಯ ವಾದಗಳು.ಮಕ್ಕಳನ್ನು ಚೆನ್ನಾಗಿ ಓದಿಸಿ ವಿದ್ಯಾವಂತರನ್ನಾಗಿ ಮಾಡಿ. ಸಿನಿಮಾ ನಾಟಕ ಟಿವಿ ಇಂಡಸ್ಟ್ರಿಗೆ ಮಾತ್ರ ಕಳುಹಿಸಬೇಡಿ. ಬೇರೆ ಇಂಜಿನಿಯರ್ ಇಲ್ಲ ಡಾಕ್ಟರ್ ಸೈಂಟಿಸ್ಟ್ ಕೆಲಸಕ್ಕೆ ಪ್ರಯತ್ನ ಪಡಿ..' ಎಂದಿದ್ದಾರೆ.
ತೆಲುಗು-ತಮಿಳಿನಲ್ಲಿ ಹೆಚ್ಚಾಗಿ ನಟನೆ, ಆದ್ರೂ ಕೇರಳಕ್ಕೆ ಆಗಾಗ ಹೋಗೋದ್ಯಾಕೆ ನಟಿ ರಮ್ಯಾ ಕೃಷ್ಣನ್?
ಇನ್ನೊಬ್ಬರು- 'ನೀವು ಸರಿಯಾಗಿ ನಿಮ್ಮ ಜೀವನ plan ಮಾಡಿಲ್ಲ ಅನಿಸುತ್ತದೆ.... ನೀವು ನಿಮ್ಮ ತಂದೆಯ ಹೆಸರಮೇಲೆ ಕೆಲವು ದಿನಗಳ ಕಳೆಯಬಹುದು.... ultimately you have to ನಿಮ್ಮ ಜೀವನ ರೂಪಿಸಬೇಕು. ನಿಮಗೆ ತುಂಬಾ ಕೋಪ, ಅಹಂಕಾರ, short temper ಅಂಥ ಕೇಳಿರುವೆ...ಇದ್ದರೆ ಅವನೆಲ್ಲ ಬಿಡಿ...ನಿಮಗೆ ಒಳ್ಳೆಯ acting ಇದೆ...but some where it's missing... ಕಾಲ ಬಂದಾಗ ಕತ್ತೆ ಕಾಲು ಹಿಡಿಬೇಕಂತೆ... ಹಾಗೇ ನೀವು ಸ್ವಲ್ಪ ಸ್ವಲ್ಪ directors, producers ಹತ್ತಿರ ನೆಡೆದುಕೊಳ್ಳಿ please..' ಎಂದು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.