
ನಟ ಜಗ್ಗೇಶ್ ಉವಾಚ-
ಸ್ಯಾಂಡಲ್‌ವುಡ್‌ನ ಹಿರಿಯ ನಟ, ನವರಸನಾಯಕ ಖ್ಯಾತಿಯ ಜಗ್ಗೇಶ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೊಸ್ಟ್ ಒಮದನ್ನು ಮಾಡಿದ್ದು, ಅದೀಗ ಬಹಳಷ್ಟು ವೈರಲ್ ಆಗಿದೆ. ಅದರಲ್ಲಿ ಅವರು ತಮ್ಮ ಮದುವೆ ಹಾಗೂ ಇಂದಿನ ಆಧುನಿಕ ಮದುವೆ ಬಗ್ಗೆ ಬರೆದು ಹಲವರ ಕಣ್ತೆರೆಸುವ ಪ್ರಯತ್ನ ಮಾಡಿದ್ದಾರೆ. ಅದೇನು ಬರೆದಿದ್ದಾರೆ ನೋಡಿ..
'1984 ಮಾರ್ಚ್ 22 ಮದುವೆಯಾದ ದಿನ..
ಇಂದಿಗೆ 42ವರ್ಷ..
ಮದುವೆ ಆಗುವುದು ಮುಖ್ಯವಲ್ಲಾ ಅನ್ಯೋನ್ಯವಾಗಿ ಇದ್ದುದ್ದರಲ್ಲೆ ಸುಖವಾಗಿ ಬಾಳೋದು ಜೀವನ ಗೆಲ್ಲೋದು ಮುಖ್ಯ..
ಇಂದು ಪ್ರತಿ ಮನೆಗಳಲ್ಲಿ ಮದುವೆ ಆಗದ ಅನೇಕ ಹುಡುಗರು ಸಿಗುತ್ತಾರೆ ಯಾಕೆ ಎಂದು ಪ್ರಶ್ನೆ ಕೇಳಿದಾಗ ಅವರ ಉತ್ತರ ಕೇಳಿ ಗಾಬರಿಯಾಗುತ್ತೆ ಕಾರಣ ಹುಡುಗಿ ಹಾಗು ಅವರ ಮನೆಯವರು ಮದುವೆಗೆ ಹಾಕುವ ಕ್ಲಾಸ್ ಗಳು!!!
ಹುಡುಗನಿಗೆ ಅಮ್ಮ ಇರಬಾರದು,
ಮನೆಯಲ್ಲಿ ವಯಸ್ಸಾದವರು ಅಥವ ಖಾಯಿಲೆ ಇದ್ದವರು ಇರಬಾರದು,
ಹುಡುಗನಿಗೆ ಸರ್ಕಾರಿ ಉದ್ಯೋಗ ಅಥವ ಲಕ್ಷದ ಮೇಲೆ ವರಮಾನ ಇರಬೇಕು,
ಹಳ್ಳಿಯಲ್ಲಿ ಹುಟ್ಟಿದರು ಹಳ್ಳಿಯ ಹುಡುಗನಿಗೆ ಹೆಣ್ಣು ನೀಡುವುದಿಲ್ಲಾ ಒಟ್ಟಿನಲ್ಲಿ ಹುಡುಗ ಸಿಟಿಯಲ್ಲಿ ಇರಬೇಕು ಮತ್ತು ಸ್ವಂತ ಮನೆ ಕಡ್ಡಾಯ..
ಇಂದು ಮದುವೆಯ ವಯಸ್ಸು 36 ನಂತರ ಹುಡುಗ 30ನಂತರ ಹುಡುಗಿ ಅಂತೆ...ಅದರಲ್ಲು ಎಲ್ಲದಕ್ಕು ಎಲ್ಲರ ಮೇಲೆ ಅನುಮಾನ..
ಓ ದೇವರೆ ಎತ್ತ ಸಾಗುತ್ತಿದೆ ಮನುಷ್ಯರ ಚಿಂತನೆ?
ನನ್ನ ಮಡದಿ ಪರಿಮಳ ಹಣವಂತಳು ಆದರು ನನ್ನ ಆಯ್ಕೆ ಮಾಡಿಕೊಂಡು ದೃಡವಾಗಿ ನನ್ನ ನಂಬಿ ಬಂದಳು...ನನ್ನ ಶಕ್ತಿಮೀರಿ ಅವಳು ನನ್ನ ಮೇಲೆ ಇಟ್ಟ ನಂಬಿಕೆ ಇಂದಿಗು ಕಾಪಾಡಿಕೊಂಡು ಬದುಕುತ್ತಿರುವೆ..
ಅವಳ ಎಲ್ಲಾ ಸಾಧನೆಗೆ ಭುಜ ನೀಡುವೆ:
ಮದುವೆ ಲೆಕ್ಕ ಹಾಕಿ ಏನು ಸಿಗುತ್ತದೆ? ಏನು ಆಗುತ್ತದೆ? ಎಂದು ಆದವರು ವಿಚ್ಚೇದನ ಕಟಕಟೆಯಲ್ಲಿ, ಮದುವೆ ಮನಗಳು ಒಪ್ಪಿ ಇದ್ದುದ್ದರಲ್ಲೆ ಸುಖಸಂಸಾರ ನಡೆಸುವವರು,ಇರುವಲ್ಲೆ ಸ್ವರ್ಗ ಸ್ಥಾಪನೆ, ಕಾಲಕ್ಕೆ ತಕ್ಕಂತೆ ಏನು ಆಗಬೇಕು ಎಂದು ಯುಗಗಳಿಂದ ನಿರ್ಣಯ ಆಗಿದೆ ಹಾಗೆ ಬಾಳಿದರೆ ಮನುಷ್ಯ ಜನ್ಮ ಸಾರ್ಥಕ..
Life is beautiful if understood
ರಾಯರಲ್ಲಿ ಬೇಡುವೆ.. ಕರುನಾಡಿನ ನನ್ನ ಆತ್ಮೀಯ ಯುವಮಿತ್ರರಿಗು ಬೇಗ ಮದುವೆಯಾಗಿ ಅದ್ಭುತ ಸಂಸಾರಸುಖ ಸಿಗುವಂತಾಗಲಿ..
ಶುಭದಿನ..
ಎಂದು ಕನ್ನಡದ 'ನವರಸನಾಯಕ' ಜಗ್ಗೇಶ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.