ಮೂಟೆ ಕಟ್ಟಿ ಕರ್ಕೊಂಡು ಬಂದಿಲ್ಲ ಕಿಡ್ನಾಪ್ ಅನ್ನೋಕೆ ಅವ್ನ ಅಲ್ವಾ; 'ಓಂ' ನಟ ಹರೀಶ್ ರಾಯ್!

By Shriram Bhat  |  First Published Jul 3, 2024, 7:29 PM IST

ನಾವು ಭಾರತೀಯರು ಹೆಣ್ಣಿಗೆ ತುಂಬಾ ಗೌರವ ಕೊಡುತ್ತೇವೆ. ಅದು ನಮ್ಮನೆ ಹೆಣ್ಣುಮಗಳೇ ಆಗಿರಲಿ ಅಥವಾ ಬೇರೆ ಯಾರೇ ಆಗಲಿ, ಆ ತರ ಅಶ್ಲೀಲ ಮೆಸೇಜ್ ಬಂದ್ರೆ ಅವ್ನ ವಿರುದ್ಧ ತಿರುಗಿ ನಿಂತೇ ನಿಲ್ತಾರೆ ಗಂಡಸ್ರು.. 


ನಟ ಹರೀಶ್ ರಾಯ್ (Harish Roy) ಮಾತನಾಡಿದ್ದಾರೆ 'ನಾನು ಇದನ್ನೆಲ್ಲಾ ಅನುಭವಿಸಿದವನು. ಲೈಫಲ್ಲಿ ಕ್ರೈಮ್‌, ಕೊಲೆ ಇವೆಲ್ಲಾ ಹೇಗೆ ಆಗುತ್ತೆ ಎಂಬುದನ್ನು ನೋಡಿದವನು ನಾನು, ಮಾಡದೇ ಇರುವ ಅಪರಾಧಕ್ಕೆ ಜೈಲಿಗೆ ಹೋಗಿ ಒಂಬತ್ತು ತಿಂಗಳು, ಒಂಬತ್ತು ದಿನ ಇದ್ದು ಬಂದವನು ನಾನು. ನಾನು ಕರೆಕ್ಟಾಗಿ ಒಂದು ಮಾತು ಹೇಳ್ತೀನಿ, ಹೆಚ್ಚಿನ ವಿಷಯಗಳು ಹೆಣ್ಣಿನ ವಿಷಯಕ್ಕೇ ಆಗೋದು. ನಮ್ಮ ತಂಗಿಗೋ ಅಕ್ಕಂಗೋ ಯಾರೋ ಚುಡಾಯಿಸಿದ ಅನ್ನೋ ಕಾರಣಕ್ಕೆ ನಾವು ಸ್ಕೂಲು-ಕಾಲೇಜು ಲೆವಲ್ಲಲ್ಲೇ ಬೇರೆ ಹುಡುಗ್ರಿಗೆ ಹೊಡೆದಿದ್ದು ಇದೆ. 

ಯಾರೇ ಆಗಲಿ ಅದು, ನಮ್ಮ ನೆರೆಹೊರೆಯ ಹೆಣ್ಣುಮಕ್ಕಳು, ಸಂಬಂಧಿಗಳು ಯಾರೇ ಆದರೂ ಕಷ್ಟಕ್ಕೆ ಸಿಕ್ಕಿಹಾಕಿಕೊಂಡರೆ ಯಾವುದೇ ಗಂಡು ಸಪೋರ್ಟಿಗೆ ನಿಲ್ತಾನೆ. ಅದು ಎಲ್ಲರಿಗು ಗೊತ್ತಿರೋ ವಿಷಯ. ಯಾರೇ ಒಬ್ಬ ನಿಜವಾದ ಗಂಡಸನ್ನು, ನಿಮಗೆ ಸಂಬಂಧಪಟ್ಟ ಹೆಣ್ಣುಮಗಳೊಬ್ಬಳಿಗೆ ಈ ತರ ಫೋಟೊ, ವೀಡಿಯೋ ಕಳಿಸಿದ್ರೆ ಏನ್ ಮಾಡ್ತೀರಾ ಅಂತ ಕೇಳಿ, ಅವ್ರು ಏನು ಉತ್ತರ ಕೊಡ್ತಾರೆ ನೋಡಿ. ಮೊದ್ಲು ಅವ್ನಿಗೆ ಎರಡೇಟು ಹೋಡಿತೀವಿ, ಆಮೇಲೆ ಪೊಲೀಸ್ ಕಂಪ್ಲೇಂಟು ಕೊಡತ್ತೇವೆ ಅಂತಾನೇ ಹೇಳ್ತಾರೆ ನೋಡಿ.. 

Tap to resize

Latest Videos

undefined

ಹೇಳಲು ಆಗದೇ ಇರುವ ಹಲವಾರು ಸಂಗತಿಗಳು ನಮ್ಮ ಬಳಿ ಇವೆ, ಇನ್ಮುಂದೆ ಅವೆಲ್ಲ ಬರಲಿವೆ; ನಟ ಯಶ್..!

ನಾವು ಭಾರತೀಯರು ಹೆಣ್ಣಿಗೆ ತುಂಬಾ ಗೌರವ ಕೊಡುತ್ತೇವೆ. ಅದು ನಮ್ಮನೆ ಹೆಣ್ಣುಮಗಳೇ ಆಗಿರಲಿ ಅಥವಾ ಬೇರೆ ಯಾರೇ ಆಗಲಿ, ಆ ತರ ಅಶ್ಲೀಲ ಮೆಸೇಜ್ ಬಂದ್ರೆ ಅವ್ನ ವಿರುದ್ಧ ತಿರುಗಿ ನಿಂತೇ ನಿಲ್ತಾರೆ ಗಂಡಸ್ರು.. ಆ ರೀತಿನಲ್ಲೇ ನಟ ದರ್ಶನ್ (Actor Darshan) ಕೂಡ ಯೋಚ್ನೆ ಮಾಡಿ ಅವ್ನನನ್ನು ಕರೆಸಿಕೊಂಡ್ರು. ಆ ರೇಣುಕಾಸ್ವಾಮಿನ ಏನೂ ಮೂಟೆ ಕಟ್ಟಿ ಕರ್ಕೊಂಡು ಬಂದಿಲ್ಲ. ಅವ್ನನ್ನು ಮಾತನಾಡಿಸಿ, ಬಾ ಅಂತ ಹೇಳಿನೇ ಕರ್ಕೊಂಡು ಬಂದಿದ್ದು. ನೀನು ಮಾಡಿರೀ ತಪ್ಪಿಗೆ ಸಾರಿ ಕೇಳು, ಮಾತಾಡು ಅಂತ ಹೇಳಿನೇ ಕೊರ್ಕೊಂಡು ಬಂದಿರೋದು. 

ಇಲ್ಲ ಅಂದ್ರೆ ಅವ್ನು ತುಮಕೂರಿನಲ್ಲಿ ತಿಂಡಿ ತಿಂದಾಗ ಎಲ್ಲರ ಬಿಲ್ಲನ್ನೂ ಕೊಡ್ತಾ ಇರ್ಲಿಲ್ಲ. ದರ್ಶನ್ ಮೀಟ್ ಮಾಡಿಸ್ತೀವಿ ಅಂತ ಹೇಳಳಿನೇ ಅವ್ನನ್ನ ಕರ್ಕೊಂಡು ಬಂದಿರೋವಾಗ ಅದು ಕಿಡ್ನಾಪ್ ಕೇಸ್ ಕೂಡ ಅಲ್ಲ. ಮಾತುಕತೆ ಆದಾಗ, ಏನು ಮಾತುಕತೆ ಆಯ್ತು, ಅವ್ನು ಕ್ಷಮೆ ಕೇಳೋಕೆ ಒಪ್ಪದೇ ವಾದ ಮಾಡಿರಬಹುದು, ಇವ್ರಲ್ಲಿ ಯಾರಿಗೋ ಕೋಪ ಬಂದಿರಬಹುದು. ಯಾರೋ ಎರಡೇಟು ಹೊಡೆದಿಬಹುದು. ಅಲ್ಲಿ ನಿಜವಾಗಿಯೂ ಏನು ನಡೀತು ಅಂತ ನಮಗ್ಯಾರಿಗೂ ಗೊತ್ತಿಲ್ಲ ಅಲ್ವ? 

ಯಾವ್ ಹೀರೋನೂ ನಂಗೆ ಹಾಗೆ ಹೇಳಿರ್ಲಿಲ್ಲ, ಅವ್ರು ಮಾತ್ರ ಅಂದಿದ್ರು: ಶಾಕ್ ಕೊಟ್ರು 'AK 47' ಓಂ ಪ್ರಕಾಶ್ ರಾವ್!

ಆಮೇಲೆ, ಕೊಲ್ಲುವ ವ್ಯಕ್ತಿ ಯಾವತ್ತೂ ಮಚ್ಚು-ಲಾಂಗು ಹಿಡ್ಕೊಂಡು ಓಡಾಡ್ತಾರೆ ಹೊರತೂ ಬೆಲ್ಟ್‌ನಲ್ಲಿ ಹೊಡೆಯೋದಿಲ್ಲ. ಪನಿಶ್‌ಮೆಂಟ್ ಕೊಡ್ಭೆಕು, ಕೊಲ್ಲಬಾರ್ದು ಅನ್ನೋರು ಮಾತ್ರವೇ ಬೆಲ್ಟು, ಕೋಲಲ್ಲಿ ಹೊಡಿತಾರೆ. ದರ್ಶನ್‌ ಅಂಡ್ ಟೀಮ್‌ಗೆ ಕೊಲ್ಲುವ ಉದ್ದೇಶ ಇರಲಿಲ್ಲ ಅನ್ನೋದು ಸ್ಪಷ್ಟ. ನಿಜವಾಗಿಯೂ ಕೊಲ್ಲುವ ಉದ್ಧೇಶ ಇದ್ದರೆ, ಇಲ್ಲಿಗೇ ಕರೆಸಿಕೊಳ್ಳಬೇಕಿಲ್ಲ, ಎಲ್ಲಿ ಬೇಕಾದ್ರೂ ಮಾಡಬಹುದಿತ್ತು. ಅಲ್ಲೇ ಜನರನ್ನು ಕಳಿಸಿ ಅಥವಾ ಅಲ್ಲಿರುವ ಜನರ ಕೈನಿಂದಲೇ ಕೊಲ್ಲಿಸಬಹುದಿತ್ತು' ಎಂದಿದ್ದಾರೆ 'ಓಂ' ಸಿನಿಮಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಟ ಹರೀಶ್ ರಾಯ್. 

click me!