ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಒಂದುಕಡೆಯಾದರೆ, ಹೊಸಬರ ಪ್ರಯೋಗಾತ್ಮಕ ಚಿತ್ರಗಳ ಭರಾಟೆ ಇನ್ನೊಂದು ಕಡೆ.. ಕೆಜಿಎಫ್, ಕಾಂತಾರ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಂದ ಹಲವು ಸಿನಿಮಾಗಳು ಸೋಲು-ಗೆಲುವಿನ ತೂಗುಯ್ಯಾಲೆ ಆಡಿ..
'ನಿನ್ ಬಿಟ್ಟು ಬದುಕೋಕೆ ಆಗಲ್ಲ ಕಣೋ, ಐ ಲವ್ ಯೂ ಸೋ ಮಚ್ ಮುದ್ದು ಉಮ್ಮ ಉಮ್ಮ ಉಮ್ಮಾ.. ಸಿಕ್ತಾ' ಅಂತ ಒಂದು ಸ್ವೀಟ್ ಸೌಂಡ್ ಕೇಳಿಸುತ್ತೆ. ಆದರೆ, ಆ ಚೆಲುವೆಯ ಮುಖ ದರ್ಶನ ಆಗೋದಿಲ್ಲ.. ಅಷ್ಟರಲ್ಲೇ ಬಿರುಗಾಳಿ ಬಂದಂತೆ ಬೆಡಗಿಯೊಬ್ಬಳು ಕಾಳಿ ಅವತಾರ ತಾಳಿ 'ನಿಂದು ಆರು ವರ್ಷದ ಪ್ರೀತಿ, ನಮ್ಮಪ್ಪ ಅಮ್ಮಂದು 25 ವರ್ಷದ ಪ್ರೀತಿ.. ಇವೆರಡರ ಪ್ರೀತಿಲಿ ನಂಗೆ ನಮ್ಮಪ್ಪ ಅಮ್ಮನ ಪ್ರೀತಿನೆ ದೊಡ್ಡದು ಅನ್ನಿಸ್ತು..' ಎನ್ನುತ್ತಾಳೆ. ಲವರ್ ಬಾಯ್ ಕೋಪದಿಂದ 'ಹಾಗಾದ್ರೆ, ನನ್ನ ತರಿಯಕೆ ಲವ್ ಮಾಡ್ದಾ?' ಅಂತ ಶೌಟ್ ಮಾಡ್ತಾನೆ. ಅಲ್ಲಿಗೆ ಅದು ಮುಗಿಯುತ್ತದೆ!
ಇದು 'ಆಫ್ಟರ್ ಬ್ರೇಕ್‌ಅಪ್' ಸಿನಿಮಾದ (After Breakup) ಟೀಸರ್.. 'ನೀ ಹೋದಮೇಲೆ ನನ್ನ ಕಥೆ ಏನೇಲೇ..' ಅನ್ನೋ ಅಡಿಬರಹ ಇರೋ ಈ ಸಿನಿಮಾದಲ್ಲಿ ನವನಟ ಧನುಷ್ (Dhanush) ಹೀರೋ ಆಗಿ ನಟಿಸಿದ್ದಾರೆ. ನಿಸರ್ಗ ಮಂಜುನಾಥ್ (Nisarga Manjunath) ಹಾಗೂ ತನು (Thanu)ನಾಯಕಿಯರು. ಬಿಜು (Biju) ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ, ಪ್ರವೀಣ್ ಸಾಮ್ (Praveen Sam) ಸಂಗೀತ ನೀಡಿದ್ದಾರೆ. ಈ ಚಿತ್ರಕ್ಕೆ ವಿನೋದ್ ಲೋಕಣ್ಣವರ್ (Vinod Lokannanvar) ಕ್ಯಾಮೆರಾ ಕೈಚಳಕವಿದ್ದು, ಮೋರ (Mora) ಸಂಕಲನವಿದೆ. ಈ ಚಿತ್ರವನ್ನು ಫ್ರೈಡೇ ಮ್ಯಾಜಿಕ್ ಸ್ಟುಡಿಯೋ ಅಡಿಯಲ್ಲಿ ವಿಪಿ ಯೋಗೇಶ್, ನಿಸರ್ಗ ಹಾಗೂ ಪ್ರಿಯಾ ಎಸ್ ಕುಮಾರ್ ನಿರ್ಮಿಸಿದ್ದಾರೆ. ಈ ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುವ ಪ್ರಯತ್ನದಲ್ಲಿ ನಿರತವಾಗಿದೆ 'ಆಫ್ಟರ್ ಬ್ರೇಕಪ್' ಚಿತ್ರತಂಡ!
ಪುನೀತ್ ಹುಟ್ಟೋ ಮೊದಲೇ ಬಿ ಸರೋಜಾದೇವಿ ಹೇಳಿದ್ರಂತೆ ಪವರ್ ಸ್ಟಾರ್ ಬರೋದನ್ನ!
ಸ್ಯಾಂಡಲ್‌ವುಡ್‌ನಲ್ಲಿ ಹೊಸಹೊಸ ಪ್ರಯೋಗಗಳು ಹೊಸತೇನಲ್ಲ! ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಒಂದುಕಡೆಯಾದರೆ, ಹೊಸಬರ ಪ್ರಯೋಗಾತ್ಮಕ ಚಿತ್ರಗಳ ಭರಾಟೆ ಇನ್ನೊಂದು ಕಡೆ.. ಕೆಜಿಎಫ್, ಕಾಂತಾರ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಂದ ಹಲವು ಸಿನಿಮಾಗಳು ಸೋಲು-ಗೆಲುವಿನ ತೂಗುಯ್ಯಾಲೆ ಆಡಿ ಕೆಲವು ಸೋತು ಕೆಲವು ಗೆದ್ದು ಸುದ್ದಿಯಾಗಿವೆ.
ಇದೀಗ ಹೊಸಬರ ಸಿನಿಮಾವೊಂದು ಸದ್ದಗದ್ದಲವಿಲ್ಲದೇ ಶೂಟಿಂಗ್ ಮುಗಿಸಿ ಟೀಸರ್ ಹಂತಕ್ಕೆ ಬಂದು ಸಖತ್ ಸೌಂಡ್ ಮಾಡುತ್ತಿದೆ. ಹೊಸಬರ ಈ ತಂಡದ ಪ್ರಚಾರಕ್ಕೆ ಸಾಥ್ ನೀಡಲು ಸ್ಯಾಂಡಲ್‌ವುಡ್ ತಾರೆಯರು ಮುಂದಾಗಿದ್ದಾರೆ ಎನ್ನಲಾಗಿದೆ. ನಾಯಕರಾಗಿ ನಟಿಸುತ್ತಿರುವ ನಟ ಧನುಷ್ ನಟನೆಯಲ್ಲಿ ಈಗಾಗಲೇ ತರಬೇತಿ ಮುಗಿಸಿ ಪಳಗಿದ್ದಾರೆ. ನಟನೆ ಜೊತೆಗೆ ನಿರ್ದೇಶನದಲ್ಲೂ ಆಸಕ್ತಿ ಬೆಳೆಸಿಕೊಂಡಿರುವ ಧನುಷ್, ರಿಯಲ್ ಸ್ಟಾರ್ ಉಪೇಂದ್ರ ರೀತಿಯಲ್ಲಿ ಮುಂದೊಮ್ಮೆ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸುವ ಕನಸು ಹೊಂದಿದ್ದಾರಂತೆ.
ಮದಗಜ ಮಹೇಶ್ ಸಾರಥ್ಯದಲ್ಲಿ ಮತ್ತೆ 'ಅಯೋಗ್ಯ'ರಾಗಲು ಹೊರಟ ಸತೀಶ್-ರಚಿತಾ!
ಈ ಬಗ್ಗೆ ಅವರು 'ಸಿನಿಮಾರಂಗದ 'ಎಬಿಸಿಡಿ..'ಗಳನ್ನು ಇನ್ನೂ ಕಲಿಯುತ್ತಿದ್ದೇನೆ. ನಟನೆ-ನಿರ್ದೇಶನದ ಜೊತೆಗೆ ಸಿನಿಮಾರಂಗದ 'ಕಂಪ್ಲೀಟ್ ಪ್ಯಾಕೆಜ್' ಅರ್ಥ ಮಾಡಿಕೊಂಡು ಭವಿಷ್ಯದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ನೆಲೆ ನಿಲ್ಲುವ ನಿರ್ಧಾರ ನನ್ನದು' ಎಂದಿದ್ದಾರೆ ಧನುಷ್. ಹೊಸಬರ ಟೀಮ್ ಸಿನಿಮಾ 'ಆಫ್ಟರ್ ಬ್ರೇಕಪ್' ಬಿಡುಗಡೆ ಬಳಿಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಲಿದೆ ಎನ್ನಲಾಗುತ್ತಿದೆ.