
ದಕ್ಷಿಣ ಭಾರತದ ಸುಂದರ ಚೆಲುವೆ ಸಮಂತಾ ಅಭಿನಯದಲ್ಲೂ ಸೂಪರ್ ಫ್ಯಾಷನ್ ಸೆನ್ಸ್‌ನಲ್ಲೂ ಸೂಪರ್. ಇತ್ತೀಚಿಗೆ ತನ್ನದೇ ಬಟ್ಟೆ ಬ್ರ್ಯಾಂಡ್ ಕೂಡ ಆರಂಭಿಸಿದ್ದಾರೆ. 'ಸಖಿ' ಹೆಸರಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸಮಂತಾ ಕಲೆಕ್ಷನ್ ಪ್ರತಿ ಎಡಿಷನ್‌ನಲ್ಲೂ ಹೇಗಿರುತ್ತದೆ ಎಂಬ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ. ಈಗ ಸಮಂತಾ ತಪ್ಪದೆ ಹಿಡಿದುಕೊಂಡು ಹೋಗವ ಬ್ಯಾಗ್ ಬೆಲೆ ಎಷ್ಟು ಎಂಬ ಚರ್ಚೆ ಶುರುವಾಗಿದೆ.
ನಟಿ ಸಮಂತಾಗಿದೆ ಡಯಾಬಿಟೀಸ್; ಕೇಳಿ ಶಾಕ್ ಆದ ಅಭಿಮಾನಿಗಳು!
ಟ್ರ್ಯಾನ್ಸ್‌ಪರೆಂಟ್ ಬ್ಯಾಗ್‌ಗೆ ಇಷ್ಟೊಂದು ಬೆಲೆ?
ಸಿಂಪಲ್ ಹಾಗೂ ಏಲಿಗೆಂಟ್ ಆಗಿ ರೆಡಿಯಾಗುವ ಸಮಂತಾ ಏರ್‌ಪೋರ್ಟ್ ಲುಕ್‌ಗಳು ವೈರಲ್ ಅಗುತ್ತಿವೆ. ಪ್ರತಿ ಪೋಟೋದಲ್ಲೂ ಸಮಂತಾ ಈ ಬ್ರೌನ್ ಟ್ರ್ಯಾನ್ಸ್‌ಪರೆಂಟ್ ಬ್ಯಾಗ್ ಹಿಡಿದಿದ್ದಾರೆ. ಕೆಲವು ಮೂಲಗಳ ಪ್ರಕಾರ 'Tote see through bag'ಗೆ 72,000 ಸಾವಿರ ರೂಪಾಯಿ ಎನ್ನಲಾಗಿದೆ. ಸಿಕ್ಕಾಪಟ್ಟೆ ಬ್ಯಾಗ್ ಕ್ರೇಜ್ ಇರುವ ಸಮಂತಾ ಬಳಿ 60,000 ಸಾವಿರದಿಂದ 5 ಲಕ್ಷ ರೂಪಾಯಿ ಬೆಲೆ ಬಾಳುವ ಬ್ಯಾಗ್‌ಗಳಿವೆ.
ಪತಿಗೆ ಡಿವೋರ್ಸ್ ಕೊಡಿ ಎಂದ ಅಭಿಮಾನಿ: ಹೀಗಿತ್ತು ಸಮಂತಾ ಉತ್ತರ
ನೆಟ್ಟಿಗರ ಕಾಮೆಂಟ್:
ಸಮಂತಾ ಏನೇ ಮಾಡಿದರು ಮೆಚ್ಚಿಕೊಳ್ಳುತ್ತಿದ್ದ ಅಭಿಮಾನಿಗಳು ಈ ವಿಚಾರದಲ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇಷ್ಟೊಂದು ದುಡ್ಡು ಕೊಟ್ಟು ಖರೀದಿಸಿರುವ ಬ್ಯಾಗ್‌ನಲ್ಲಿ ಏನೇ ಇಟ್ಟರೂ ಕಾಣಿಸುತ್ತದೆ ಅಂದ್ಮೇಲೆ ಯಾಕೆ ಕೊಳ್ಳಬೇಕು. ಸಮಂತಾಗೆ ಈ ವಿಚಾರದಲ್ಲಿ ಪ್ರೈವೇಸಿ ಬೇಡವೇ? ಎಂದು ಪ್ರಶ್ನಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.