29 ವರ್ಷದ ಹಿಂದೆ ನನಗೆ ಈ ರೀತಿಯ ನೋವಾಗಿತ್ತು, ಸ್ಪಂದನಾ ಸಾವಿಗೆ ಸಾ.ರಾ.ಗೋವಿಂದ ತೀವ್ರ ಸಂತಾಪ

By Gowthami KFirst Published Aug 7, 2023, 4:05 PM IST
Highlights

ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್  ನಿಧನಕ್ಕೆ ಸಾ.ರಾ.ಗೋವಿಂದ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಳೆದ 30 ವರ್ಷದ ಹಿಂದಿನ ನೋವು ನನಗೆ  ನೆನಪು ಆಗ್ತಿದೆ ಎಂದಿದ್ದಾರೆ.

ಬೆಂಗಳೂರು (ಆ.7): ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್ ಅವರು ಆ.6ರಂದು ಬ್ಯಾಂಕಾಂಕ್‌ನಲ್ಲಿ ಮೃತಪಟ್ಟಿದ್ದು, ಅವರ ನಿಧನಕ್ಕೆ ಸಾ.ರಾ.ಗೋವಿಂದ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಳೆದ 30 ವರ್ಷದ ಹಿಂದಿನ ನೋವು ನನಗೆ  ನೆನಪು ಆಗ್ತಿದೆ. 29 ವರ್ಷದ ಹಿಂದೆ ಈ ರೀತಿಯ ನೋವು ನನಗೆ ಆಗಿತ್ತು. ಅದನ್ನು ತಡೆದುಕೊಳ್ಳುವುದು ಎಷ್ಟು ಕಷ್ಟ ಅನ್ನೋದು ನನಗೆ ಗೊತ್ತು. ಮಕ್ಕಳು ಹೆಚ್ಚಾಗಿ ತಂದೆಗಿಂತ ತಾಯಿಯ ಬಳಿ ಬೆಳೆಯುತ್ತಾರೆ. ತಾಯಿಯನ್ನ ಕಳೆದುಕೊಂಡು ಮಕ್ಕಳು ಹೇಗೆ ಇರಲು ಸಾಧ್ಯ ಎಂದು ಅತೀವ ದುಃಖ ವ್ಯಕ್ತಪಡಿಸಿದ್ದಾರೆ.

ವಿಜಯ್‌ ಪತ್ನಿ ಸ್ಪಂದನಾ ಅವರು  ಮೂರು ದಿನಗಳ ಹಿಂದೆ ಬ್ಯಾಂಕಾಕ್‌ (Bankok) ಪ್ರವಾಸಕ್ಕೆ ತೆರಳಿದ್ದರು. ನಿನ್ನೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. 

Latest Videos

ಇನ್ನು ಸ್ಪಂದನಾ ವಿಜಯ್ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರುವ ಬಗ್ಗೆ ಮಾತುಕತೆ ನಡೆದಿದ್ದು, ನಾಳೆ ಬೆಂಗಳೂರಿಗೆ ಪಾರ್ಥಿವ ಶರೀರ ಬರುವ ಸಾಧ್ಯತೆ ಇದೆ. ಪುನೀತ್ ರಾಜ್​ಕುಮಾರ್ ಸೇರಿ ಅನೇಕ ಸೆಲೆಬ್ರಿಟಿಗಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈಗ ಸ್ಪಂದನಾ ಕೂಡ ನಿಧನ ಹೊಂದಿದ್ದು ನಿಜಕ್ಕೂ ಶಾಕಿಂಗ್ ಆಗಿದೆ. 

RIP Spandana Vijay: ಸೌಮ್ಯ ಮುಖದ ಸುಂದರ ಹಠಮಾರಿ ಸ್ಪಂದನಾ ಸೀರೆ ಕ್ರೇಜ್

ನಿವೃತ್ತ ಪೊಲೀಸ್ ಅಧಿಕಾರಿ ಬಿಕೆ. ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನಾ ವಿಜಯ್, ಚಲನಚಿತ್ರ ನಿರ್ಮಾಪಕ ಚಿನ್ನೆಗೌಡರ ಹಿರಿಯ ಸೊಸೆ. ಈಗ ಇವರ ಹಠಾತ್ ನಿಧನದಿಂದ ಎರಡೂ ಕುಂಟುಂಬಗಳು ಕಂಗೆಟ್ಟು ಹೋಗಿದೆ.

ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರದ್ದು ಮುದ್ದಾದ ಜೋಡಿ. ಇಡೀ ಚಿತ್ರರಂಗ ಮಾತ್ರವಲ್ಲ ಅವರ ಅಭಿಮಾನಿಗಳಿಗೆ ಕೂಡ ಈ ಸುದ್ದಿ ಶಾಕ್ ತಂದಿದೆ. ಸ್ಪಂದನಾ ಇತ್ತೀಚೆಗೆ ತೂಕ ಇಳಿಸಿಕೊಂಡಿದ್ದರು. 16 ಕೆಜಿ ತೂಕ ಇಳಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದ್ದು, ಅವರಿಗೆ 39 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.

Breaking: ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ

ಇನ್ನು ಸ್ಪಂದನಾ ವಿಜಯ್ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರುವ ಬಗ್ಗೆ ಮಾತುಕತೆ ನಡೆದಿತ್ತು. ನಟ ರಾಘವೇಂದ್ರ ರಾಜ್‌ಕುಮಾರ್ ಅವರ ನಿವಾಸಕ್ಕೆ ಪೊಲೆಂಡ್ ರಾಯಭಾರ ಕಛೇರಿ ಸಿಬ್ಬಂದಿ ಭೇಟಿ ನೀಡಿದ್ದಾರೆ. ಥೈಲ್ಯಾಂಡ್ ರಾಯಭಾರಿ ಜೊತೆ ರಾಘಣ್ಣ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.  ರಾಯಭಾರ ಕಛೇರಿಯಲ್ಲಿ ಸಂಬಂಧಿಯೊಬ್ಬರು ಕೆಲಸ ಮಾಡುತ್ತಿದ್ದು, ಅವರ ಮುಖಾಂತರ ಮಾತುಕತೆ ನಡೆದಿದೆ ಎಂದು ವರದಿ ತಿಳಿಸಿದೆ. ಪಾರ್ಥಿವ ಶರೀರ ತರುವ ಬಗ್ಗೆ ರಾಯಭಾರಿ ಕಛೇರಿಯಿಂದ ಎನ್‌ಒಸಿ ಅಗತ್ಯವಿದೆ. ಹೀಗಾಗಿ ಎಲ್ಲಾ ರೀತಿಯ ಪ್ರಕ್ರಿಯೆಗಳು ಮುಗಿದ ಬಳಿಕ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುತ್ತದೆ. ಬುಧವಾರ ಬೆಳಗ್ಗೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

click me!