ನಟಿ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಸಿನಿಮಾರಂಗದಿಂದ ಬ್ಯಾನ್ ಮಾಡಲಾಗುತ್ತಿದೆ ಎನ್ನುವ ಸುದ್ದಿ ವೈರಲ್ ಆಗಿದೆ.
ಕನ್ನಡ ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಸದ್ಯ ಬೇರೆ ಬೇರೆ ಭಾಷೆಯಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ರಿಷಬ್ ಶೆಟ್ಟಿ ನಿರ್ದೇಶನದ, ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬೆಳ್ಳಿ ಪರದೆ ಮೇಲೆ ಮಿಂಚಿದರು. ಮೊದಲ ಸಿನಿಮಾವೇ ರಶ್ಮಿಕಾಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಈ ಸಿನಿಮಾದ ಸಕ್ಸಸ್ ಬಳಿಕ ರಶ್ಮಿಕಾ ಪರಭಾಷೆಗೆ ಜಂಪ್ ಮಾಡಿದರು. ಬಳಿಕ ಕನ್ನಡ ಕಡೆ ರಶ್ಮಿಕಾ ಮುಖ ಮಾಡಿಲ್ಲ. ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ರಶ್ಮಿಕಾ ಕಿರಿಕ್ ಪಾರ್ಟಿ ಸಿನಿಮಾದ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ಆಕ್ಷನ್ ಮಾಡಿ ತೊರಿಸಿದ್ದರು. ರಶ್ಮಿಕಾ ಅವರ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೇ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ತನ್ನನ್ನು ಬೆಳೆಸಿದ ಸಂಸ್ಥೆಯನ್ನೇ ಒದ್ದು ಹೋದವಳು ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ರಶ್ಮಿಕಾ ಸಿನಿಮಾ ನೋಡಬಾರದು, ಕರ್ನಾಟಕದಲ್ಲಿ ರಶ್ಮಿಕಾ ಸಿನಿಮಾ ಬ್ಯಾನ್ ಮಾಡಬೇಕು, ಬಾಯ್ಕಟ್ ರಶ್ಮಿಕಾ ಎನ್ನುವ ಪೋಸ್ಟರ್ ಗಳು ಹರಿದಾಡುತ್ತಿವೆ.
ರಕ್ಷಿತ್ ಶೆಟ್ಟಿ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ಅವಮಾನಿಸಿದ್ದ ಬೆನ್ನಲ್ಲೇ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ ರಶ್ಮಿಕಾ ಮಂದಣ್ಣಗೆ ಟಾಂಗ್ ಕೊಟ್ಟಿದ್ದರು. ಸಂದರ್ಶನದಲ್ಲಿ ರಿಷಬ್ ಶೆಟ್ಟಿ ರಶ್ಮಿಕಾ ಹೆಸರು ಹೇಳದೆ ಕೈಯಲ್ಲೇ ಆಕ್ಷನ್ ಮಾಡಿ ಅಂಥ ನಟಿಯರ ಜೊತೆ ಕೆಲಸ ಮಾಡಲ್ಲ ಎಂದು ಹೇಳಿದ್ದರು. ರಿಷಬ್ ಶೆಟ್ಟಿ ರಿಯಾಕ್ಷನ್ ಕೂಡ ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿವಾದದ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಬ್ಯಾನ್ ಎನ್ನುವ ಸುದ್ದಿ ಹರಿದಾಡುತ್ತಿದೆ. ಕನ್ನಡ ಸಿನಿಮಾರಂಗದಿಂದ ರಶ್ಮಿಕಾ ಮಂದಣ್ಣ ಅವರನ್ನು ಬ್ಯಾನ್ ಮಾಡಲಾಗುತ್ತಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಟಾಲಿವುಡ್ ಅಂಗಳದಲ್ಲಿ ಹೀಗೊಂದು ಗುಸುಗುಸು ಕೇಳಿಬರುತ್ತಿದೆ.
ಪ್ರಾಣಿಗಳ ಬಳಕೆ; ರಶ್ಮಿಕಾ ಮಂದಣ್ಣ ತಮಿಳು ಸಿನಿಮಾಗೆ ನೋಟಿಸ್
ಕನ್ನಡ ಸಿನಿಮಾ ಮೂಲಕವೇ ರಶ್ಮಿಕಾ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದರು. ರಶ್ಮಿಕಾ ಸಿನಿಮಾ ಜೀವನಕ್ಕೆ ಬ್ರೇಕ್ ನೀಡಿದ ಸಿನಿಮಾ ಕಿರಿಕ್ ಪಾರ್ಟಿ. ಹೀಗಿರುವಾಗ ಹೆಸರನ್ನೂ ಹೇಳದೆ ಅವಮಾನ ಮಾಡಿದ್ದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಾಗಾಗಿ ಕನ್ನಡ ಥಿಯೇಟರ್ ಮಾಲೀಕರು, ಚಲನಚಿತ್ರೋದ್ಯಮ ಶೀಘ್ರದಲ್ಲೇ ರಶ್ಮಿಕಾ ವಿರುದ್ಧ ಕ್ರಮ ಕೈಗೊಳ್ಳದೆ ಮತ್ತು ಕೃತಜ್ಞತೆ ಇಲ್ಲದ ನಟಿಯನ್ನು ಚಿತ್ರರಂಗದಿಂದ ನಿಷೇಧಿಸುವ ಸಾಧ್ಯತೆ ಇದೆ ಎನ್ನುವ ಪೋಸ್ಟರ್‌ಗಳು ವೈರಲ್ ಆಗಿವೆ.
ಕೈ ತುತ್ತು ಕೊಟ್ಟು ಬೆಳೆಸಿದ ಮನೆಯನ್ನೇ ಮರೆತ ಕಿರಿಕ್ ಹುಡುಗಿ: ತಿರುಗೇಟು ಕೊಟ್ಟ ರಿಷಬ್ ಶೆಟ್ಟಿ
ಈ ಸುದ್ದಿಯಿಂದ ಈಗ ರಶ್ಮಿಕಾ ಸಿನಿಮಾ ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿದೆ. ರಶ್ಮಿಕಾ ಸದ್ಯ ತೆಲುಗಿನಲ್ಲಿ ಪುಷ್ಪಾ 2ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಸಿನಿಮಾ ತಯಾರಾಗುತ್ತಿದೆ. ಕರ್ನಾಟಕದಲ್ಲಿ ರಶ್ಮಿಕಾ ಬ್ಯಾನ್ ಮಾಡಬೇಕು, ಬಾಯ್ಕಟ್ ಮಾಡಬೇಕು ಎನ್ನುವ ಮಾತು ಕೇಳಿ ಬರುತ್ತಿರುವ ಹಿನ್ನಲೇ ಸಿನಿಮಾತಂಡಕ್ಕೆ ಟೆನ್ಶನ್ ಶುರುವಾಗಿದೆ ಎನ್ನುವ ಮಾತು ಟಾಲಿವುಡ್ ಅಂಗಳಿಂದ ಕೇಳಿಬರುತ್ತಿದೆ.